ಬಳ್ಳಾರಿ
ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘ (ರಿ), ಬಳ್ಳಾರಿ ಹಾಗೂ ನ್ಯೂ ಭಾರತ್ ಸ್ಪೋರ್ಟ್ ಇವರ ಸಹಯೋಗದೊಂದಿಗೆ ಕೌಲ್ಬಜಾರ್ನ ಶ್ರೀ ನಾಗಯ್ಯ ಚೌಧರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್, ಊಟದ ಪ್ಲೇಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯೂ ಭಾರತ್ ಸ್ಪೋಟ್ರ್ಸ್ನ ಮಾಲೀಕರಾದ ಮಲಕಪ್ಪ ಅವರು, ತಾವು ಕಳೆದ ಎರಡು ವರ್ಷಗಳಿಂದ ಕೌಲ್ಬಜಾರ್ನ ವಿವಿಧ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಹಾಗೂ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ಇದರಿಂದ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಇದೇರೀತಿ ಮುಂದಿನ ದಿನಗಳಲ್ಲೂ ಸಹ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಬಾಸೇಹೇಬ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಐ.ಎನ್.ಮುರಳೀದರ್, ವೆಂಕಯ್ಯ ಅಪ್ಪಗೆರೆ, ದೊಡ್ಡಬಸಪ್ಪ, ವೇಣುಗೋಪಾಲ ಶೆಟ್ಟಿ, ಸಿ.ಬಿ.ಪುರದರ್, ಗಂಗಾಧರ ಪತ್ತಾರ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ. ಕೆ.ಹನುಮಂತಪ್ಪ ಬಳ್ಳಾರಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುರುಗೋಡು ತಾಲ್ಲೂಕು ಅಧ್ಯಕ್ಷರಾದ ಬಿ.ಎಸ್.ನಾಗರಾಜ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಎಂ.ಸಿದ್ದಲಿಂಗಯ್ಯ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳಾದ ಟಿ.ಮೋಹನಬಾಬು, ಮುಖ್ಯ ಗುರುಗಳಾದ ಎ.ಆನಂದ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.