ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ತಹಶಿಲ್ದಾರ ಸಿ.ಎಸ್.ಭಂಗಿ ಚರ್ಚಿಸುತ್ತಿರುವುದು.

ಹಾನಗಲ್ಲ :

        ಪಟ್ಟಣದ ಕಾಶ್ಮೀರಿ ದರ್ಗಾ ಉರುಸು ಆಚರಣೆಯನ್ನು ಶ್ರದ್ದಾಭಕ್ತಯಿಂದ ಶಾಂತಿಯುತವಾಗಿ ನಡೆಸಲು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ತಿರ್ಮಾನಿಸಿತು.

          ಪಟ್ಟಣದ ಹಳೆ ಬಸ್ಟ್ಯಾಂಡ ಸಮಿಪದಲ್ಲಿರುವ ಮುಸ್ಲಿಂ ಭಾಂಧವರ ಕಾಶ್ಮೀರಿ ದರ್ಗಾ ಮೂಲಕ ನಡೆಯುವ ಉರುಸು ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಿಯರು ಶಾಂತಿ ಸಾಮರಸ್ಯ ಹಾಗೂ ಭಾವೈಕ್ಯತೆಯಿಂದ ಆಚರಿಸಲು ಸಭೆ ಚರ್ಚಿಸಿತು.

         ಈ ಸಂಧಭ್ದಲ್ಲಿ ಮಾತನಾಡಿದ ತಾಲೂಕ ತಹಶಿಲ್ದಾರ ಸಿ.ಎಸ್.ಭಂಗಿ ಧಾರ್ಮಿಕ ಹಬ್ಬಗಳು ಯಾವುದೆ ಧರ್ಮಿಯರ ಭಾವನೆಗಳಿಗೆ ಚ್ಯುತಿ ಬರದಂತೆ ಶ್ರದ್ದಾ ಭಕ್ತಯಿಂದ ಆಚರಿಸುವಂತಾಗಲಿ. ಹಾನಗಲ್ಲು ಸೌಹಾರ್ದಕ್ಕೆ ಮಾದರಿಯಂತಾಗಲಿ ಎಂದರು.

          ಶಾಂತಿ ಸಭೆಯಲ್ಲಿ ಸಿಪಿಐ ರೆವಣ್ಣ ಕಟ್ಟಿಮನಿ, ಪಿಎಸ್‍ಐ ಗುರುರಾಜ ಮೈಲಾರ, ಮುಸ್ಲಿಂ ಸಮಾಜದ ಮುಖಂಡರಾದ ಖ್ವಾಜಾಮೊಹಿದ್ದಿನ ನಾಯ್ಕ, ಚಮನ್‍ಸಾಬ್ ಕಿತ್ತೂರ, ಬಸೀರಹಮ್ಮದ್ ಸರ್ವಿಕೇರಿ, ಬಾಬಾಜಾನ ಕೊಂಡವಾಡಿ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link