ಗುತ್ತಲ:
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನದ ಪ್ರಕ್ರಿಯೆ ಮೊದಲಿಗೆ ಕೊಂಚ ಮಂದಗತಿಯ ಮತದಾನವನ್ನು ಕಂಡಿತು ನಂತರ ಬಿಸಿಲಿನ ತಾಪ ಯಾವ ರೀತಿಯಾಗಿ ಹೆಚ್ಚಳವಾಗ ತೊಡಗಿತೊ ಅದೇ ರೀತಿಯಾಗಿ ಮತದಾನವು ಕೂಡಾ ಬಿಸಿಲಿನತಾಪದಂತೆ ಚುರುಕುಗೊಂಡಿತು.
ಮತದಾನ ಮಾಡುವ ಕೇಂದ್ರಗಳ ಎದುರು ಕಿರಿಯರು ಹಿರಿಯರು ಎನ್ನದೇ ಸರತಿ ಸಾಲಿನಲ್ಲಿ ನಿಂತು ಮತದಾನವನ್ನು ಎಲ್ಲ ಮತದಾರರು ಶಾಂತಿಯುತವಾಗಿ ಮತದಾನವನ್ನು ಮಾಡಿದರು.
ಹಾವೇರಿ ಲೋಕಸಭಾ ಚುನಾವಣಾ ಕಣವು ಬಿಜೆಪಿ ಹಾಗೂ ದೋಸ್ತಿ ಪಕ್ಷಗಳ ಮಧ್ಯ ನೇರ ಹಣಾಹಣೆ ಕಣವೆಂದು ಬಿಂಬಿಸಲಾಗಿದ್ದು 2 ಬಾರಿ ಜಯವನ್ನು ಸಾಧಿಸಿ ಹ್ಯಾಟ್ರಿಕ್ ಗೆಲುವಿನತ್ತ ಚಿತ್ತವನ್ನಿಟ್ಟಿರುವ ಬಿಜೆಪಿ ಆಭ್ಯರ್ಥಿ ಶಿವಕುಮಾರ ಉದಾಸಿ ಒಂದೆಡೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಡಿ.ಆರ್ ಪಾಟೀಲ ಶತಾಯ ಗತಾಯವಾಗಿ ಉದಾಸಿಯವರನ್ನು ಮಣಿಸಿ ಗೆಲುವಿನ ನಗೆಯನ್ನ ಬೀರುವಂತಹ ಉತ್ಸಾಹದಲ್ಲಿದ್ದಾರೆ.
ಮೊಬೈಲ್ ನಿಷೇಧ :
ಮತದಾನ ಮಾಡಲು ಬಂದಂತಹ ಮತದಾರರನ್ನು ಪೋಲಿಸ್ ಸಿಬ್ಬಂದಿ ಹಾಗೂ ಕೇಂದ್ರೀಯ ಮೀಸಲು ಭದ್ರತಾ ಪಡೆಯ ಯೋಧರು ತಪಾಸಣೆ ಮಾಡಿ ಮತದಾನ ಮಾಡುವಂತ ಕೇಂದ್ರಗಳ ಒಳಗಡೆ ಮೊಬೈಲ್‍ಗಳನ್ನು ಕೊಂಡೊಯ್ಯದಂತೆ ನೋಡಿಕೊಂಡರು.
ಸಿಸಿ ಕ್ಯಾಮೆರಾಗಳ ಅಳವಡಿಕೆ :
ಪಟ್ಟಣದಲ್ಲಿ ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಣ್ಣ ಪುಟ್ಟ ದೋಷಗಳು ಕಂಡಿದ್ದರಿಂದ ಚುನಾವಣಾ ಅಧಿಕಾರಿಗಳು 3 ಮತಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವವಡಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆಯ ಕ್ರಮವನ್ನು ವಹಿಸಿದ್ದರು.