ಶಾಸಕರಿಗೆ ಮಹಿಳಾ ಸಂಘಗಳಿಂದ ಮನವಿ

ಹಗರಿಬೊಮ್ಮನಹಳ್ಳಿ:

        ತಾಲೂಕಿನ ಮಾಲವಿ ಗ್ರಾಮ ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳಾ ಸಂಘಟನೆಗಳು ಶಾಸಕ ಎಸ್.ಭೀಮಾನಾಯ್ಕ ಅವರಿಗೆ ಮನವಿಪತ್ರ ಸಲ್ಲಸಿದರು.

        ತಾಲೂಕಿನ ಮಾಲವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳಿಗೆ ಚಾಲನೆಯ ಹಿನ್ನೆಲೆಯಲ್ಲಿ ಶಾಸಕರು ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿಗೆ ಬಳಿ ಮಹಿಳಾ ಸಂಘಗಳ ಪದಾಧಿಕಾರಿಗಳು ಮನವಿಪತ್ರ ನೀಡುವ ಮೂಲಕ, ಸುಧಾ ಕೊಟ್ರೇಶ್ ಮನವಿಯನ್ನು ಶಾಸಕರಿಗೆ ನೀಡಿ, ಕೋಗಳಿ ಹೋಬಳಿಯು ಈಗ ನೂತನವಾಗಿ ಕೊಟ್ಟೂರು ತಾಲೂಕು ಕೇಂದ್ರವಾದ ಬಳಿಕ ಹಗರಿಬೊಮ್ಮನಹಳ್ಳಿ ತಾಲೂಕಿನಿಂದ ಬೇರ್ಪಡೆಯಾಗಿದ್ದು, ನಮ್ಮ ಗ್ರಾಮಕ್ಕೂ ಮತ್ತು ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಹೋಬಳಿ ಕೇಂದ್ರವಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಲವಿ ಗ್ರಾಮವು ಹೋಬಳಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದು, ಕ್ಷೇತ್ರದ ಶಾಸಕರಾದ ತಾವುಗಳು ಸರ್ಕಾರದ ಮನವೂಲಿಸುವ ಮೂಲಕ ಈ ಗ್ರಾಮವನ್ನು ಹೋಬಳಿ ಕೇಂದ್ರವಾಗುವಲ್ಲಿ ಸಹಕರಿಸುತ್ತೀರೆಂದು ನಂಬಿದ್ದೇವೆ ಎಂದು ಮನವಿಪತ್ರ ಓದಿದರು.

          ಮನವಿ ಸ್ವೀಕರಿಸಿದ ಶಾಸಕ ಎಸ್.ಭೀಮಾನಾಯ್ಕ ತಾಲೂಕಿನ ಒಂದು ಹೋಬಳಿ ಕೇಂದ್ರ ಬಿಟ್ಟುಹೋಗಿದ್ದು ಆಡಳಿತ ದೃಷ್ಠಿಯಿಂದ ಮತ್ತೊಂದು ಹೋಬಳಿ ಕೇಂದ್ರದ ಅವಶ್ಯಕತೆ ಇದ್ದು ತಾಲೂಕಿನ ಹನಸಿ ಸೇರಿದಂತೆ ಅನೇಕ ಗ್ರಾಮಗಳ ಸಾರ್ವಜನಿಕರು ತಮ್ಮ ಗ್ರಾಮಗಳನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಬೇಡಿಕೆಯನ್ನಿಟ್ಟಿದ್ದಾರೆ. ಆದರೂ ಸಂಪೂರ್ಣ ಪರಿಶೀಲನೆಮಾಡುವ ಮೂಲಕ ಹೋಬಳಿ ಕೇಂದ್ರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

          ಇದಕ್ಕೂ ಮೊದಲು ಹರೆಗೊಂಡನಹಳ್ಳಿಯಲ್ಲಿ 15ಲಕ್ಷ ರೂ.ಗಳ ಸಿಸಿ ರಸ್ತೆ, 1ಕೋಟಿ ರೂ ವೆಚ್ಚದಲ್ಲಿ ಪಟ್ಟಣದ ನೆಹರು ನಗರದಿಂದ ಮಾಲವಿ ಡ್ಯಾಂವರೆಗಿನ ರಸ್ತೆ ಅಭಿವೃದ್ಧಿ, ಮಾಲವಿ ಗ್ರಾಮದಲ್ಲಿನ 15ಲಕ್ಷ ಸಿಸಿ ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳ ಎಸ್‍ಸಿಪಿ ಟಿಎಸ್‍ಪಿ ಯೋಜನೆ ಮತ್ತು ಶಾಸಕರ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಿದರು.

         ಈ ಸಂದರ್ಭದಲ್ಲಿ ಮಹಿಳಾ ಸಂಘದ ಗೌರಮ್ಮ, ವಿಜಯಲಕ್ಷ್ಮೀ, ಗಂಗಮ್ಮ, ಜ್ಯೋತಿ, ನಂದಿನಿ, ಕೆಂಚಮ್ಮ, ನೀಲಮ್ಮ, ಗೀತಮ್ಮ, ಉಮಾದೇವಿ, ರತ್ನಮ್ಮ, ಕೆ.ಅರುಣಾ, ಶಿಲ್ಪಾ ಗಡ್ಡದ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link