ಹಾವೇರಿ :
ನಗರದ ಹಾನಗಲ್ ರೋಡಿನ ವೈಭವಲಕ್ಷ್ಮೀ ಪಾರ್ಕನಲ್ಲಿರುವ ಶ್ರೀ ಅಂಬಾಭವಾನಿ,ಗಣೇಶ ಹಾಗೂ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದಾಡುವ ದೇವರು ಡಾ|| ಶಿವಕುಮಾರ ಮಹಾಸ್ವಾಮಿಜಿಯವರ 11 ನೇದಿನದ ಪುಣ್ಯ ಸ್ಮರಣೆಯ ನಿಮಿತ್ಯ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಶ್ರೀ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿ ಅವರ ತ್ರಿವಿಧ ದಾಸೋಹದ ನೆನೆಪಿನ ಪ್ರಯುಕ್ತ ಅನ್ನದಾಸೋಹ ಮಾಡಲಾಯಿತು. ಅಪಾರ ಭಕ್ತರು ಪಾಲ್ಗೊಂಡಿದ್ದರು.