ಶ್ರೀ ಶರೀಫ ಶಿವಯೋಗೀಶ್ವರ ಸಹಕಾರಿ ಬ್ಯಾಂಕ್ ಉದ್ಘಾಟನೆ

ಶಿಗ್ಗಾವಿ :

     ಸಹಕಾರದ ತತ್ವದಡಿಯಲ್ಲಿ ಕಾನೂನುಬದ್ದವಾಗಿ ಸಹಕಾರಿ ಸಂಸ್ಥೆಗಳು ಇಂದು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುತ್ತಿವೆ ಇದನ್ನು ಸ್ವಾಗತಿಸುತ್ತೇನೆ ಎಂದು ಹೋತನಹಳ್ಳಿ ಸಿಂದಗಿ ಮಠದ ಶ್ರೀ ಮ.ಫ.ಚ ಶಂಬುಲಿಂಗ ಪಟ್ಟಾದ್ಯಕ್ಷರು ಹೇಳಿದರು.

      ತಾಲೂಕಿನ ಬಂಕಾಪೂರ ಪಟ್ಟಣದ ಮಂಗಳವಾರ ಎಮ್ ಜಿ ಬ್ಯಾಂಕ್ ಎದುರಿಗಿರುವ ಎಮ್ ಎಮ್ ದೊಡ್ಡಮನಿ ಕಾಂಪ್ಲೇಕ್ಸ್‍ನಲ್ಲಿ ನೂತನವಾಗಿ ಆರಂಭವಾದ ಶ್ರೀ ಶರೀಫ ಶಿವಯೋಗೀಶ್ವರ ಕ್ಷೇಮಾಭಿವೃದ್ದಿ ಸೌಹಾರ್ದ ಸಹಕಾರಿ ಬ್ಯಾಂಕ್‍ನ ಉದ್ಘಾಟನೆ ನೆರವೇರಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಬ್ಯಾಂಕಿಗೆ ಸರಿಸಮಾನವಾಗಿ ಬೆಳೆಯುತ್ತಿವೆ ಇದರ ಸದುಪಯೋಗ ಪಡೆದ ಜನತೆ ತ್ವರಿತಗತಿಯಲ್ಲಿ ತಮ್ಮ ತಮ್ಮ ಸಾಲವನ್ನ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಸ್ಥೆಯ ನಂಬಿಕೆಗೆ ಪಾತ್ರರಾಗಬೇಕು ಎಂದರಲ್ಲದೆ ಎಲ್ಲ ನಿರ್ದೇಶಕರುಗಳ ಸಹಕಾರ ಹಾಗೂ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಲು ಸಲಹೆ ನೀಡಿದರು.
ಬಂಕಾಪೂರ ಅರಳೆಲೆಮಠದ ಶ್ರೀ ಷ.ಬ್ರ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಸಾನಿದ್ಯಹಿಸಿದ್ದರು.

       ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರೇಣುಕಾ ದೇಸಾಯಿ, ಪುರಸಭೆ ಸದಸ್ಯೆ ಶ್ರೀಮತಿ ಪದ್ಮಾ ಹಿರೇಮಠ, ಶ್ರೀ ಶರೀಫ ಶಿವಯೋಗೀಶ್ವರ ಕ್ಷೇಮಾಭಿವೃದ್ದಿ ಸೌಹಾರ್ದ ಸಹಕಾರಿ ಬ್ಯಾಂಕ್‍ನ ಅದ್ಯಕ್ಷ ರಾಜಶೇಖರ ಕುರವತ್ತಿ, ಉಪಾದ್ಯಕ್ಷೆ ಗುರುಶಾಂತವ್ವ ಹಿರೇಮಠ, ನಿರ್ದೇಶಕರಾದ ನಾಗರಾಜ ಕರಿಗೌಡ್ರ, ಸಂತೋಷ ಮರಿಲಿಂಗಣ್ಣವರ, ಶಿವರಾಜ ಕುರವತ್ತಿ, ಶಿದ್ದಪ್ಪ ಗಂಜೀಗಟ್ಟಿ, ವಿರುಪಾಕ್ಷಪ್ಪ ದೊಡ್ಡಮನಿ, ಸುಬಾಸ್, ಮಾ, ಮಾದರ, ಕುಸುಮವ್ವ ಅಗಡಿ, ಶಿವಶಂಕರ ಮತ್ತಿಗಟ್ಟಿ, ಮೌನೇಶ ಮರಲಿಂಗಣ್ಣವರ, ಆನಂದ ಕುಂದೂರ, ರಾಘವೇಂದ್ರ ಬಾಬು ಸಿಂಗನವರ ಸೇರಿದಂತೆ ಬ್ಯಾಂಕಿನ ಕಾರ್ಯದರ್ಶಿ ಹಾಗೂ ಹಣ ಸಂಗ್ರಹಕಾರರುಗಳಾದ ಸಂತೋಷ ಅಗಡಿ ಹಾಗೂ ಚನ್ನವೀರಯ್ಯ ಹಿರೇಮಠ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link