ದಾವಣಗೆರೆ:
ರಾಜನಹಳ್ಳಿ ಸೀತಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ 2018 ನೇ ಸಾಲಿನ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಯಡಿ ಶೂ ಮತ್ತು ಸಾಕ್ಸ್‍ಗಳನ್ನು ಅ.1 ರಂದು ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಇವರು ಮಕ್ಕಳಿಗೆ ವಿತರಿಸಿ, ಮಾತನಾಡಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು, ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಅಂಕ ಗಳಿಸಿ ಪೋಷಕರಿಗೆ, ಶಾಲೆಗೆ ಕೀರ್ತಿ ತರಬೇಕೆಂದು ಆಶಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಕೆ.ಜಿ.ಶಿವಕುಮಾರ್, ಪ್ರಾಚಾರ್ಯರಾದ ಎನ್.ರಾಜು, ಉಪ ಪ್ರಾಂಶುಪಾಲರಾದ ಎ.ಆರ್.ಮಂಜಪ್ಪ, ಶಾಲಾ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ