ತುಮಕೂರು
ಸೇಂಟ್ ಮೇರಿಸ್ ಶಾಲೆಯ ವತಿಯಿಂದ ಏಪ್ರಿಲ್ 3 ರಿಂದ ಇಲ್ಲಿಯವರೆಗೆ ಕೊರೋನಾದಿಂದ ತುತ್ತಿನ ಮಾರ್ಗ ಕಳೆದುಕೊಂಡ ದೀನ ದಲಿತರಿಗೆ ಆಹಾರವನ್ನು ಒದಗಿಸಲಾಗುತ್ತಿದೆ.
ತುಮಕೂರಿನ ಕೊಳೆಗೇರಿ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು, ಮನೆಯಿಲ್ಲದವರು, ದೀನದಲಿತರಿಗೆ ಪ್ರತಿದಿನ 1000 ಪ್ಯಾಕೆಟ್ ಗಳನ್ನು ತಯಾರಿಸಿ ವಿತರಿಸಲಾಗುತ್ತದೆ. ಕ್ಯಾತ್ಸಂದ್ರ, ಉಪ್ಪರಹಳ್ಳಿ, ಕುರಿಪಾಳ್ಯ,ಮರಳೂರು, ನಜರಾಬಾದ್, ದೇವರಾಯಪಟ್ಟಣ ಮತ್ತು ಶ್ರೀದೇವಿ ಆಸ್ಪತ್ರೆ ಸೇರಿದಂತೆ ಇನ್ನು ಹಲವು ಪ್ರದೇಶಗಳಲ್ಲಿ ಶಾಲೆಯ ಸ್ವಯಂಸೇವಕರು ಊಟವನ್ನು ವಿತರಿಸುತ್ತಿದ್ದಾರೆ ಮತ್ತು ಸೇಂಟ್ ಮೇರಿಸ್ ಶಾಲೆಯ ಆಡಳಿತಾಧಿಕಾರಿ ಸಹೋದರಿ ರೆಜಿನಾ ಅವರು ಅಡುಗೆ ಮತ್ತು ಪ್ಯಾಕಿಂಗ್ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದದ್ದು ಅವರ ಜೋತೆಯಲ್ಲಿ ಕಿರಣ್ ಮೊರಾಸ್, ಜ್ಞಾನ ಪ್ರಕಾಶ್, ಜೋಸೆಫ್, ಪುಷ್ಪರಾಜ್ ಮುಂತಾದ ಹಳೆಯ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಕೈಜೋಡಿಸಿದ್ದಾರೆ.
ಈ ತಂಡವು ವೀರಶೈವ ಸಮಾಜದೊಂದಿಗೆ ಸಮನ್ವಯಗೊಂಡು ವೀರಶೈವ ಸಮಾಜದಲ್ಲಿ ತಯಾರಾದ ಆಹಾರವನ್ನು ಸೇಂಟ್ ಮೇರಿಸ್ನಲ್ಲಿ ತಯಾರಾದ ಆಹಾರದೊಂದಿಗೆ ತಲುಪಿಸುತ್ತಿದ್ದಾರೆ. ಇನ್ನು ಏಪ್ರಿಲ್ 3 ರಿಂದ ಬೆಳಿಗ್ಗೆ ಮತ್ತು ಮಧ್ಯಾಹ್ನದಲ್ಲಿ ಒಟ್ಟಾರೆ 1400 ಪೊಟ್ಟವನ್ನು ಪ್ರತಿದಿನ ಅಗತ್ಯವಿರುವವರಿಗೆ ತಲುಪಿಸಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ