ಮಹನೀಯರ ಸಾಧನೆ ತಿಳಿಯಲು ಜಯಂತಿ ಅಗತ್ಯ

ಚಿತ್ರದುರ್ಗ :

    ಮಹನೀಯರ ಜಯಂತಿ ಆಚರಣೆ ಮೂಲಕ ಅವರ ಸಾಧನೆಯನ್ನು ಸ್ಮರಿಸಬೇಕು ಎಂಬ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಈ ರೀತಿಯ ಆಚರಣೆ ಮುಂದಿನ ಪೀಳಿಗೆಗಳಿಗೆ ಸಾಧಕರ ಸಾಧನೆ ಬಗ್ಗೆ ತಿಳಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೇರವೇರಿಸಿ ಮಾತನಾಡಿದರು.

    ಮಹನೀಯರ ಸಾಧನೆ, ಸಮಾಜ ಸೇವೆಗಾಗಿ ಅವರು ಕೈಗೊಂಡಿರುವ ಮಹತ್ತರ ಕಾರ್ಯಗಳು, ದೀನ ದಲಿತ, ಬಡವರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಜಯಂತಿಗಳ ಆಚರಣೆ ಜಾರಿಗೆ ಬಂದಿದೆ ಎಂದರು

    ಮಹಾನ್ ವ್ಯಕ್ತಿಗಳನ್ನು ಯಾವುದೇ ಜಾತಿಗೆ ಮೀಸಲಿಡುವುದು ತಪ್ಪು, ಅವರು ಸಮಾಜದ ಉನ್ನತಿಗೆ ಶ್ರಮಿಸಿದವರು. ದೇಶದ ಅಭಿವೃದ್ಧಿಗೆ ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಭೂಗೋಳ, ಸಂವಿಧಾನ ಹೀಗೆ ಎಲ್ಲ ಅಂಶಗಳು ಮುಖ್ಯ. ಇಂದಿನ ಪೀಳಿಗೆಗಳು ಹಿಂದೆ ಘಟಿಸಿದ ಘಟನೆಗಳು, ಪ್ರಸ್ತುತದ ಮಹತ್ವದ ಸಂಗತಿಗಳನ್ನು ಅರಿತರೆ ಮುಂದಿನ ಯೋಜನೆ ಕೈಗೊಳ್ಳುವುದು ಸುಲಭವಾಗುತ್ತದೆ ಎಂಬುದಾಗಿ ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಹೇಳಿದರು.

    ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನಾಗಭೂಷಣ ಬಗ್ಗನಡು ಅವರು ಉಪನ್ಯಾಸ ನೀಡಿ, ಶಿವಯೋಗಿ ಸಿದ್ಧರಾಮೇಶ್ವರ ಅವರು ಮಹಾರಾಷ್ಟ್ರದ ಸೊನ್ನಲಿಗೆ ಎಂಬ ಊರಿನಲ್ಲಿ ಜನಿಸಿದರು. ಇವರು 12 ನೇ ಶನಮಾನದ ಸಂದರ್ಭದಲ್ಲಿ ವಚನ ಸಾಹಿತ್ಯದಲ್ಲಿ ಮಹತ್ತರ ಬದಲಾವಣೆ ತಂದರು. ಕಾಯಕವೇ ದೇವರೆಂದು ನಂಬಿ ಸದಾ ಜನೋಪಯೋಗಿ ಕಾರ್ಯದಲ್ಲಿ ತೊಡಗುವಲ್ಲಿ ನಿರತರಾಗಿರುತ್ತಿದ್ದರು ಎಂದರು

    ಚಿತ್ರದುರ್ಗ ಶರಣ ಪರಂಪರೆಗೆ ಹೆಸರುವಾಸಿಯಾದ ನಾಡು. ಬುದ್ದ, ಬಸವಣ್ಣ, ಅಲ್ಲಮಪ್ರಭು, ಮಾದಾರ ಚನ್ನಯ್ಯ, ಆಯ್ದಕ್ಕಿ ಲಕ್ಕಮ್ಮ, ಅಂಬಿಗರ ಚೌಡಯ್ಯ ಅವರ ಸಮಕಾಲೀನವರು ಸಿದ್ಧರಾಮೇಶ್ವರ ಅವರು. ಭಾರತದಲ್ಲಿನ ವೈದಿಕ ಸಂಸ್ಕøತಿಯಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಡೆದುಹಾಕಲು ವಚನ ಸಾಹಿತ್ಯ ಜನ್ಮ ತಾಳಿತು. ವಚನ ಕಾಲಘಟ್ಟದಲ್ಲಿ ಜಾತಿಗಳ ನೆಲೆಗಟ್ಟನ್ನು ನಿವಾರಿಸಲಾಯಿತು ಎಂದರು

    ಮಹಾರಾಷ್ಟ್ರದ ಸೊನ್ನಲಿಗೆಯಿಂದ ಕರ್ನಾಟಕದ ಚಾಮರಾಜನಗರ ದವರೆಗೆ ಸಿದ್ದರಾಮೇಶ್ವರ ಅವರ ಸುಮಾರು 78 ಗದ್ದುಗೆಗಳ ನಿರ್ಮಾಣವಾಗಿದೆ. ನೀರಿನ ದಾಹ ತೀರಿಸಲು ಕೆಲವು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಕರ್ಮಯೋಗಿ ಯಾಗಿದ್ದರು. ನಂತರ ಅಲ್ಲಮಪ್ರಭು ಸಂಗಡ ಸೇರಿ, ಕಲ್ಯಾಣಕ್ಕೆ ಬಂದು ತಮ್ಮಲ್ಲಿರುವ ಆಗಾಧವಾದ ಜ್ಞಾನ ಪರಂಪರೆಯನ್ನು ಎಲ್ಲರಿಗೂ ಹಂಚಿ ಕಾಯಕವೇ ದೇವರೆಂದು ಪ್ರತಿಪಾದಿಸಿ ಕಾಯಕಯೋಗಿಯಾದರು. ಶಿವಧ್ಯಾನ ಮಾಡುತ್ತ ಶಿವಯೋಗಿಯಾದರು. ಇವರು ಜಾತಿ ವಿಜಾತಿ ಎನ್ನದೇ ಕಾಯಕದ ಬುನಾದಿ ಮೇಲೆ ಶಿವಸಂಸ್ಕøತಿ ನಿರ್ಮಿಸಿದರು ಎಂದರು

   ವಚನ ಸಾಹಿತ್ಯದಲ್ಲಿ ಒಟ್ಟು 22672 ವಚನ ಪತ್ತೆಯಾಗಿದ್ದು, ಅದರಲ್ಲಿ ಸುಮಾರು 1902 ವಚನಗಳು ಶ್ರೀ ಸಿದ್ದರಾಮೇಶ್ವರ ಅವರದ್ದೆ ಎನ್ನಲಾಗಿದೆ. ಇವರು 21 ವಚನಗಳನ್ನು ಕಲ್ಲು ಮಣ್ಣನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದಾರೆ. ಸಿದ್ದರಾಮೇಶ್ವರ ಅವರು ಜಾತಿ, ಮೇಲು ಕೀಳು ಎಂಬ ಭಾವನೆ ತೊಡೆದು ಸಮಾಜದ ಏಳ್ಗೆಗೆ ಶ್ರಮಿಸಿದವರು. ಅವರ ಸಮಾಜ ಸೇವೆ ಶ್ಲಾಘನೀಯ ಎಂದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಉಪವಿಭಾಗಾಧಿಕಾರಿ ವಿ. ಪ್ರಸನ್ನ, ಚಿತ್ರದುರ್ಗ ತಹಶೀಲ್ದಾರ್ ವೆಂಕಟೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಜಲಿಂಗಪ್ಪ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಹೆಚ್ ಲಕ್ಷ್ಮಣ ಸೇರಿದಂತೆ ಸಮಾಜದ ಗಣ್ಯರು, ಭೋವಿ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link