ಶ್ರೀಸಿದ್ದರಾಮೇಶ್ವರ ಜಯಂತಿ ಪೂರ್ವಭಾವಿ ಸಭೆ

ಗುಬ್ಬಿ:

         ರಾಜ್ಯ ಮಟ್ಟದ ಶ್ರೀಗುರುಸಿದ್ದರಾಮೇಶ್ವರ 846 ನೇ ಜಯಂತಿ ಮಹೋತ್ಸವವನ್ನು 2019 ನೇ ಜನವರಿ 14 ಮತ್ತು 15 ರಂದು ತಾಲ್ಲೂಕಿನ ಬಾಗೂರು ಗೇಟ್‍ನ ಶ್ರೀಸಿದ್ದರಾಮೇಶ್ವರಸನ್ನಿಧಿಯಲ್ಲಿ ನಡೆಸಲಾಗುತ್ತಿದ್ದು ಜಯಂತಿಯನ್ನು ಅರ್ಥಪೂರ್ಣವಾಗಿ ಮತ್ತು ಶ್ರಧ್ದಾ ಭಕ್ತಿಯಿಂದ ವೈಭವಯುತವಾಗಿ ಆಚರಿಸಲು ಮುಖಂಡರು ಮತ್ತು ಭಕ್ತಾಧಿಗಳು ಸಂಪೂರ್ಣ ಸಹಕಾರ ನೀಡುವಂತೆ ಮಾಜಿ ಸಂಸದ ಜಿ.ಎಸ್ ಬಸವರಾಜು ತಿಳಿಸಿದರು.

       ತಾಲೂಕಿನ ಬಾಗೂರು ಗೇಟಿನ ಅನುಭವ ಮಂಟಪದಲ್ಲಿ ಶ್ರೀಸಿದ್ದರಾಮೇಶ್ವರ ಜಯಂತಿ ಮಹೋತ್ಸವದ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯ ಮಟ್ಟದ ಸಿದ್ದರಾಮ ಜಯಂತಿ ಮಹೋತ್ಸವವಾಗಿರುವುದರಿಂದ ಅರ್ಥಪೂರ್ಣವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಬೇಕಾಗಿರುವುದರಿಂದ ಭಕ್ತರು ತಮ್ಮ ತನು ಮನ ಧನವನ್ನು ನೀಡುವ ಮೂಲಕ ಜಯಂತಿ ಮಹೋತ್ಸವವು ಯಶಸ್ವಿಗೊಳಿಸಲು ಸಹಕರಿಸುವಂತೆ ತಿಳಿಸಿದರು.

         ಯುವಕರು ಮುಂದೆ ಬಂದು ಕೆಲಸ ಮಾಡಿದರೆ ರಾಜ್ಯದಲ್ಲಿ ಇಷ್ಟು ವರ್ಷದಲ್ಲಿ ನಡೆದಿರುವ ಜಯಂತಿಗಿಂತ ಈ ಜಯಂತಿ ಯಶಸ್ವಿಯಾಗುತ್ತದೆ. ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು ಲಕ್ಷಾಂತರ ಭಕ್ತಾದಿಗಳು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಆಂದ್ರ ಕೇರಳ, ತಮಿಳುನಾಡು ರಾಜ್ಯದಿಂದಲೂ ಸಹ ಸಾಕಷ್ಟು ಭಕ್ತಾಧಿಗಳು ಆಗಮಿಸುತ್ತಿದ್ದು ಬಂದಂತಹ ಅತಿಥಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಯಶಸ್ವಿಯಾಗಿ ನಡೆಸಲು ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಹೆಚ್ಚಿನ ಗಮನಹರಿಸುವಂತೆ ತಿಳಿಸಿದ ಅವರು ರಾಜ್ಯದ 100 ಕ್ಕೂ ಹೆಚ್ಚು ಸ್ವಾಮೀೀಜಿಗಳು ಸೇರಿದಂತೆ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಹಾಗೂ ಎಲ್ಲಾ ಪಕ್ಷದ ಶಾಸಕರು, ಜನಪ್ರತಿನಿಗಳು ಹಾಗೂ ಕೇಂದ್ರದ ಕೆಲವು ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ ಕಾರ್ಯಕ್ರಮದಲ್ಲಿ ಪಟಾಕಿಹೊಡೆದು ಮಾಲಿನ್ಯ ಮಾಡದೆ ಪರಿಸರತ್ಮಾಕವಾಗಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕಾಗಿದೆ ಅಗತ್ಯವಿರುವಂತಹ ಎಲ್ಲಾ ರೀತಿಯ ಸಹಕಾರವನ್ನು ಜಾತ್ಯಾತಿತವಾಗಿ, ಪಕ್ಷಾತೀತವಾಗಿ ಜಿಲ್ಲೆಯ ಬಂದುಗಳು ಮಾಡಬೇಕಾಗಿದ್ದು ಬಹುತೇಖ ಕಾರ್ಯಕ್ರಮಕ್ಕೆ 2 ಕೋಟಿಯಷ್ಟು ಹಣ ಬೇಕಾಗುತ್ತದೆ ಹೆಚ್ಚಿನ ಸಹಕಾರವನ್ನು ಕೇಂದ್ರ ಸಮಿತಿಯವರು ಮಾಡಬೇಕಾಗಿದೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅವರು ನೋಡಿಕೊಳ್ಳಬೇಕು ಯುವಕರು ಕೇವಲ ಹೆಸರಿಗಾಗಿ ಕೆಲಸ ಮಾಡದೆ ಸೇವಾ ಮನೋಭಾವವಿಟ್ಟು ಈ ಧಾರ್ಮಿಕ ಕಾರ್ಯದಲ್ಲಿ ಕೆಲಸ ಮಾಡಬೇಕು ಎಂದರು.

        ತಾಲೂಕಿನಲ್ಲಿ ಇದು ಮೂರನೇಯ ಭಾರಿಗೆ ನಡೆಯುತ್ತಿದ್ದು ಹಿಂದೆ ನಡೆದಂತಹ ಜಯಂತಿಗೂ ಈಗ ನಡೆಯುತ್ತಿರುವ ಜಯಂತಿಗೂ ಸಾಕಷ್ಟು ವ್ಯತ್ಯಾಸತೆ ಇದ್ದು ಆಗೆಲ್ಲಾ ಹೆಚ್ಚು ಜನರು ಸೇರುತ್ತಿಲಿಲ್ಲ ಆದರೆ ಈಗ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಹಾಗಾಗಿ ತಾಲೂಕಿನ ಸಮಸ್ತ ಜನತೆ ಸಹಕಾರ ನೀಡಬೇಕು ಈ ಭಾಗದ ಗ್ರಾಮಗಳ ಮುಖಂಡರು, ಮಹಿಳೆಯರು, ಯುವಕ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ತಿಳಿಸಿದರು.

          ಗೊಡೆಕೆರೆ ಮಠದ ಶ್ರೀಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಇಂತಹ ಬೃಹತ್ ಸಮಾರಂಭವನ್ನು ಎಲ್ಲರೂ ಸೇರಿ ಮಾಡಿದಾಗ ಮಾತ್ರ ಯಶಸ್ವಿ ಮಾಡಲು ಸಾದ್ಯವಾಗುತ್ತದೆ ಸಾಕಷ್ಟು ವರ್ಷಗಳ ನಂತರ ಗುಬ್ಬಿಯಲ್ಲಿ ನಡೆಯುತ್ತಿರುವುದು ಸಂತೋಷದ ವಿಚಾರ ನಾಡಿನ ಹಲವು ಜಿಲ್ಲೆಗಳಿಂದ ಶರಣರು ಆಗಮಿಸುತ್ತಾರೆ ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ ಮಾಡಿರುವಂತಹ ¸ಮಿತಿಗಳು ಸರಿಯಾಗಿ ಕೆಲಸ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

           ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿ ಮಠದ ಶ್ರೀಚಂದ್ರಶೇಖರಸ್ವಾಮೀಜಿ, ತಾ.ಪಂ ಉಪಾಧ್ಯಕ್ಷೆ ಕಲ್ಪನಾ, ಸದಸ್ಯ ಅ.ನಾ ಲಿಂಗಪ್ಪ ಕೆಎಂಎಫ್‍ನಿರ್ದೆಶಕ ಜಿ.ಚಂದ್ರಶೇಖರ್, ಪ.ಪಂ ಸದಸ್ಯ ಜಿ.ಆರ್.ಶಿವಕುಮಾರ್, ಮುಖಂಡರಾದ ಶಂಕರಾನಂದ, ಜಿ. ಎಸ್ . ಪ್ರಸನ್ನ ಕುಮಾರ್ , ಎಸ್.ಡಿ.ದಿಲೀಪ್‍ಕುಮಾರ್, ಕೇಂದ್ರ ಸಮಿತಿಯ ನಟರಾಜು, ಶಿವಕುಮಾರ್, ನಂಜಪ್ಪ, ಯೋಗೀಶ್ ಮುಂತಾದವರು ಬಾಗವಹಿಸಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap