ಪತ್ನಿ ಮತ್ತು ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ ಸಾಫ್ಟ ವೇರ್ ಇಂಜಿನಿಯರ್

ಬೆಂಗಳೂರು

     ನಿದ್ದೆ ಮಾತ್ರೆ ಬೆರೆಸಿದ ಪಾನೀಯ ಕುಡಿಸಿ ಮಲಗಿದ್ದ ಪತ್ನಿ ಹಾಗೂ ಮಕ್ಕಳು ಕತ್ತು ಸೀಳಿ ಭೀಕರವಾಗಿ ಕೊಲೆಗೈದು ವಿಡಿಯೋ ಮಾಡಿ ಸಂಬಂಧಿಕರ ವಾಟ್ಸಪ್‍ಗೆ ಕಳುಹಿಸಿದ್ದ ಕಿರಾತಕ ಟೆಕ್ಕಿಯನ್ನು ಉಡುಪಿ ಪೊಲೀಸರ ಸಹಕಾರದೊಂದಿಗೆ ಘಜಿಯಾಬಾದ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ಘಜಿಯಾಬಾದ್‍ನ ಜ್ಞಾನಖಾಂಡ್‍ನ ಸುಮಿತ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ,ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಆರೋಪಿಯನ್ನು ಬಂಧಿಸಲು ಉಡುಪಿ ಪೊಲೀಸರ ಸಹಾಯದೊಂದಿಗೆ ರಚಿಸಲಾಗಿದ್ದ ಮೂರು ತಂಡಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಿವೆ.

      ಕಳೆದ ಶನಿವಾರ ರಾತ್ರಿ ಆರೋಪಿ ಸುಮಿತ್, ಪತ್ನಿ ಅನ್ಶು ಬಾಲ(32) ಹಾಗೂ ಮಕ್ಕಳಾದ 5 ವರ್ಷದ ಪ್ರತಿಮೇಶ್ ಹಾಗೂ 4 ವರ್ಷದ ಆಕೃತಿಗೆ ಮತ್ತು ಬರುವ ಔಷದಿ ಬೆರೆಸಿದ ಪಾನೀಯ ಕುಡಿಸಿಮೂವರೂ ನಿದ್ದೆಗೆ ಜಾರಿದ ನಂತರ ಮೂವರ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ

       ಕೊಲೆ ಮಾಡಿದ ಬಳಿಕ ಮೃತದೇಹಗಳ ವಿಡಿಯೋ ಮಾಡಿ ಅದನ್ನು ತನ್ನ ಕುಟುಂಬದವರ ವಾಟ್ಸಪ್ ಗ್ರೂಪ್‍ಗೆ ಕಳುಹಿಸಿದ್ದಾನೆ. ಅಲ್ಲದೆ ವಿಡಿಯೋದಲ್ಲಿ ತಾನು ಕೂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕಾಗಿ ಈಗಾಗಲೇ ವಿಷ ಖರೀದಿ ಮಾಡಿರುವುದಾಗಿ ತಿಳಿಸಿದ್ದಾನೆ.ಕೂಡಲೇ ಸಂಬಂಧಿಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

      ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಗಿಲು ಮುರಿದು ಒಳಹೋಗಿ ಕುಮಾರ್ ಫ್ಲ್ಯಾಟ್ ನಿಂದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಹೀಗಾಗಿ ಘಟನೆ ನಡೆದ 22 ಗಂಟೆಗಳ ಬಳಿಕ ಅಂದರೆ ಮೃತದೇಹ ಸಿಕ್ಕಿದೆ.

ಕೆಲಸಕ್ಕೆ ರಾಜೀನಾಮೆ

       ಮೃತ ಅನ್ಶುಬಾಲ ಅವರು ಇಂದಿರಾಪುರದ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಸುಮಿತ್ ಕೂಡ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.ಇಲ್ಲೇ ಇರುವ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದನು. ಆದರೆ ಕಳೆದ ಡಿಸೆಂಬರ್‍ನಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದನು.

      ಬಳಿಕ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಸುಮಿತ್ ಜೊತೆ ತಂದೆ-ತಾಯಿ ಜೊತೆ ಅವರ ಫ್ಲ್ಯಾಟ್‍ನಲ್ಲಿ ವಾಸವಾಗಿದ್ದನು.ತಂದೆ-ತಾಯಿ ಕಳೆದ ವಾರ ಮದುವೆಗೆಂದು ಊರಿಗೆ ತೆರಳಿದ್ದರು. ಹೀಗಾಗಿ ಪತ್ನಿ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿದ್ದ ವೇಳೆ ಸುಮಿತ್ ಈ ಕೃತ್ಯ ಎಸಗಿದ್ದಾನೆ.

       ಆರೋಪಿ ಸುಮಿತ್ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರುವ ಮೊದಲು ಸುಮಿತ್, ದೆಹಲಿಯ ಗುರುಗ್ರಾಮ, ನೊಯ್ಡಾದ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಡಿಸೆಂಬರ್‍ನಲ್ಲಿ ಆತ ಘಾಜಿಯಾಬಾದ್‍ಗೆ ಬಂದಿದ್ದನು. ಈ ವಿಚಾರ ಸಂಬಂಧಿಕರಿಗೆ ಗೊತ್ತಿರಲಿಲ್ಲ.ಕಳೆದ ಕೆಲ ದಿನಗಳಿಂದ ಆತ ಸತತವಾಗಿ ಸಿಗರೇಟ್ ಸೇದುತ್ತಿರುವುದನ್ನು ಗಮನಿಸಿ ಸಂಬಂಧಿಕರು ಆತನನನ್ನು ವಿಚಾರಿಸಿದಾಗ ಆರ್ಥಿಕ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ ಎಂದು ಅನ್ಶು ಬಾಲ ಸಹೋದರ ಪಂಕಜ್ ತಿಳಿಸಿದ್ದಾರೆ.

ಸೈನೇಡ್ ಖರೀದಿ

       ಆರೋಪಿ ಕುಮಾರ್ ಗ್ಯಾನ್‍ಖಂಡ್ ಮೆಡಿಕಲ್ ಸ್ಟೋರ್ನಿಂದ ಪೊಟಾಶಿಯಂ ಸೈನೆಡ್ ಅನ್ನು ಖರೀದಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಸ್ಟೋರ್ ಮಾಲೀಕ ಮುಕೇಶ್‍ನನ್ನು ಸೋಮವಾರ ಬಂಧಿಸಿದ್ದಾರೆ. ಈ ವೇಳೆ ಆತ ನಾನು ಸಮಿತ್‍ಗೆ ಸೈನೆಡ್ ನೀಡಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ ನಾನು ಸೈನೆಡ್ ಎಂದು ಹಣ ತಗೊಂಡು ನಿದ್ದೆ ಬರುವ ಮದ್ದು ಕೊಟ್ಟಿರುವುದಾಗಿ ಹೇಳಿದ್ದಾನೆ. ಮಾಲೀಕನ ಮಾತಿನಿಂದ ಸಂಶಯಗೊಂಡ ಪೊಲೀಸರು ಆತನ ಸ್ಟೋರ್ ಹುಡುಕಾಡಿದ್ದಾರೆ. ಆದರೆ ಅಲ್ಲಿ ಸೈನೆಡ್ ಸಿಕ್ಕಿಲ್ಲ. ಸುಮಿತ್ ಮಾದಕ ವ್ಯಸನಿಯಾಗಿದ್ದನು. ಇದರಿಂದಾಗಿ ಆತನಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ತನ್ನ ಕೆಲಸವನ್ನೂ ಕಳೆದುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

      ಆರೋಪಿ ಸುಮಿತ್ ಕುಮಾರ್, ಜಾರ್ಖಂಡ್ ನ ಜೆಮ್‍ಶೆಡ್‍ಪುರ ಮೂಲದ ಅನ್ಶು ಬಾಲರನ್ನು 2011ರಲ್ಲಿ ವರಿಸಿದ್ದನು. ಕಳೆದ ವರ್ಷ ಡಿಸೆಂಬರ್ ನಲ್ಲಿ ಕೆಲಸ ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದನು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link