ವಿಜ್ಞಾನ ಕೇಂದ್ರದಿಂದ ಸೂರ್ಯ ಗ್ರಹಣ ವೀಕ್ಷಣೆ

ಚಿತ್ರದುರ್ಗ

      ನಗರದ ವಿಜ್ಞಾನ ಕಾಲೇಜಿನ ಬಳಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ವಿಜ್ಞಾನ ಕೇಂದ್ರದಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

     ಸೂರ್ಯಗ್ರಹಣವನ್ನು ಮೂಢನಂಬಿಕೆಯಿಂದ ದೂರವಾಗಿಸಲು ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಬೇಕು, ಆದಷ್ಟು ಜನರು ಮೂಡ ನಂಬಿಕೆಗಳನ್ನು ದೂರವಿರಿಸಿ ಶೋಷಣೆಯಿಂದ ಹೊರ ಬರಬೇಕು. ವಿಜ್ಞಾನ ಬೆಳೆಯುತ್ತಿರುವ ಯುಗದಲ್ಲಿ ಸಹ ಬಹಳಷ್ಟು ದೂರದರ್ಶನ ಚಾನೆಲ್ಗಳಲ್ಲಿ ಮೂಢನಂಬಿಕೆಯನ್ನು ಬಿತ್ತರಿಸುತ್ತಿದ್ದು ಇದರಿಂದ ಮಕ್ಕಳ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವನೆ ಕಡಿಮೆಯಾಗುತ್ತಿದೆ ಎಂದು ವಿಜ್ಞಾನ ಕೇಂದ್ರದ ಡಾ.ಹೆಚ್.ಎಸ್.ಕೆ.ಸ್ವಾಮಿ ಹೇಳಿದರು

      ಶೋಷಣೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ವಿಜ್ಞಾನ ಕೇಂದ್ರಗಳು, ವಿಜ್ಞಾನ ತಿಳಿವಳಿಕೆಯುಳ್ಳವರು ಸಾರ್ವಜನಿಕರ ಬಳಿ ತೆರಳಿ ವಿಜ್ಞಾನದ ಮಹತ್ವವನ್ನು ತಿಳಿಸಿಕೊಡಬೇಕು. ಸಾಮಾನ್ಯ ವಿಜ್ಞಾನಗಳನ್ನು ಜನರಿಂದ ನಾವು ದೂರವಿರಿಸುತ್ತಾ ಬಂದಿರುವುದರ ಪರಿಣಾಮವಾಗಿ ಇಂದು ಸಾಕಷ್ಟು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಪ್ರತಿದಿನ ನಡೆಯುವಂತಹ ಕಾರ್ಯಗಳಿಗೂ, ಸೂರ್ಯಗ್ರಹಣ ಚಂದ್ರಗ್ರಹಣಗಳ ಜೊತೆ ಸಂಬಂಧ ಕಲ್ಪಿಸುವುದರಿಂದ ಜನರ ಮನಸ್ಸಿನಲ್ಲಿ ದ್ವಂದ್ವ ಏರ್ಪಡುತ್ತಿದೆ ಎಂದರು

      ಮನುಷ್ಯನ ರೋಗ ರುಜಿನಗಳಿಗೆ, ರಸ್ತೆ ಅಪಘಾತಗಳಿಗೆ, ಪ್ರಕೃತಿ ವಿಕೋಪಗಳಿಗೆ, ನಾವು ಸೂರ್ಯಗ್ರಹಣವನ್ನು ನೆಪವಾಗಿ ಪರಿಗಣಿಸುತ್ತಿದ್ದು, ಇದರಿಂದ ಸಮಾಜದ ಸುಸ್ಥಿತಿಗೆ ತೊಂದರೆಯಾಗುತ್ತಿದೆ. ಜನರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು, ಎಲ್ಲಾ ಜೀವನದ ಹಾಗು ಅವುಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದರು

      ಜನಸಾಮಾನ್ಯರಿಗೆ ವಿಜ್ಞಾನದ ಅರಿವನ್ನು ಹೆಚ್ಚಿಸುವುದರಿಂದ ಮೂಢನಂಬಿಕೆಗಳನ್ನು ತೆರವುಗೊಳಿಸಬಹುದು ಎಂದು ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ.ಕೆ. ಕೆ.ಕಾಮಾನಿಯವರು ತಿಳಿಸಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಗ್ರಹಣದ ಸಮಯದಲ್ಲಿ ಆಹಾರ ವೀಷವಾಗದು ಎಂದು ತಿಳಿಸುವುದರ ಮುಖೇನ ಬಾಳೆಹಣ್ಣು ಹಾಗೂ ಚಾಕಲೇಟ್ ಹಂಚಿ ಸೇವಿಸಲಾಯಿತು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಮಹಾಂತೇಶ್ ಕೆಬಿ ಹಾಗೂ ವಿಜ್ಞಾನ ಕೇಂದ್ರದ ಕಾರ್ಯದರ್ಶಿಗಳಾದ ನವೀನ್ .ಪಿ.ಆಚಾರ್ ಹಾಗೂ ಇನ್ನಿತರ ಶಿಕ್ಷಕರು ಭಾಗವಹಿಸಿದ್ದರು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link