ಕಾಂಗ್ರಸ್ ಗೊಂದಲ : ರಾಜ್ಯ ಉಸ್ತುವಾರಿ ಬದಲಾಯಿಸುವ ಇಂಗಿತ ವ್ಯಕ್ತಪಡಿಸಿದ ಹೈಕಮಾಂಡ್

ಬೆಂಗಳೂರು :

     ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಗಾದಿಗೆ ಯಾರು ಅರ್ಹರು ಎಂಬ ಗೊಂದಲದಿಂದ ಇನ್ನೂ ಹೊರಬಾರದ ಸೋನಿಯಾ ಗಾಂಧಿಯವರು ಕೆಪಿಸಿಸಿ ರಾಜ್ಯ ಉಸ್ತುವಾರಿಯನ್ನೂ ಬದಲಾಯಿಸುವ ಇಂಗಿತವನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ .

      ಹಲವು ವರ್ಷಗಳಿಂದ ಕೆಪಿಸಿಸಿ ಉಸ್ತುವಾರಿಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬರುತ್ತಿರುವ ಕೆ.ಸಿ.ವೇಣು ಗೋಪಾಲ್, ಹೈಕಮಾಂಡ್ ನಿಷ್ಠರೇನೂ ಹೌದು, ಆದರೂ, ಅವರ ಕಾರ್ಯವೈಖರಿಯ ಬಗ್ಗೆ ಸೋನಿಯಾಗೆ ಅಷ್ಟೇನೂ ಸಮಾಧಾನವಿಲ್ಲ ಎಂದು ಹೇಳಲಾಗುತ್ತಿದೆ.

     ವೇಣುಗೋಪಾಲ್ ವಿರುದ್ದ ಹಲವು ರಾಜ್ಯ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಈ ಹಿಂದೆ ಅಸಮಾಧಾನವನ್ನು ಹೊರಹಾಕಿದ್ದರು. ಅವರು ಒಬ್ಬರ ಪರವಾಗಿ ಕೆಲಸ ಮಾಡುತ್ತಾರೆ ಎನ್ನುವ ಆಪಾದನೆಯೂ ಅವರ ಮೇಲಿತ್ತುಕೆಪಿಸಿಸಿ ಅಧ್ಯಕ್ಷ ಜೊತೆಗೆ, ಉಸ್ತುವಾರಿಯನ್ನೂ ಬದಲಾಯಿಸುವ ಬಗ್ಗೆ ಸೋನಿಯಾ ಗಾಂಧಿ ಚಿಂತನೆ ನಡೆಸಿ, ಯುವ ರಾಷ್ಟ್ರೀಯ ಮುಖಂಡರೊಬ್ಬರಿಗೆ ಇದರ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಉಸ್ತುವಾರಿ ನನಗೆ ಬೇಡ ಎಂದು ಹೈಕಮಾಂಡ್ ಗೆ ಹೇಳಿದ್ದೆ:

        “ಲೋಕಸಭಾ ಚುನಾವಣೆ ವೇಳೆಯಲ್ಲಿಯೇ ಕರ್ನಾಟಕರ ಉಸ್ತುವಾರಿ ಬೇಡ ಎಂದು ಹೈಕಮಾಂಡ್ ಗೆ ಹೇಳಿದ್ದೆ” ಎಂದು ಸ್ವತಃ ಕೆ.ಸಿ.ವೇಣುಗೋಪಾಲ್ ಅವರೇ ಹೇಳಿಕೊಂಡಿದ್ದರು. “ಅಂದೇ ನಾನು ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದೆ” ಎಂದು ವೇಣುಗೋಪಾಲ್, ಉಪಚುನಾವಣಾ ಫಲಿತಾಂಶದ ಪ್ರತಿಕ್ರಿಯೆ ನೀಡುವಾಗ ಹೇಳಿದ್ದರು. ಇದಕ್ಕೆ, ಈಗ ಸಮಯ ಕೂಡಿ ಬಂದಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link