ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ 

ಹೊಸಪೇಟೆ: 
     
       ಹಂಪಿಯ ಶ್ರೀರಘುನಂದನ ತೀರ್ಥರ ಮೂಲಬೃಂದಾವನ ಸನ್ನಿಧಾನವನ್ನು ಜೀರ್ಣೋದ್ಧಾರ ಕಾರ್ಯವನ್ನು ಹಂಪಿಯ ನೀತಿ ನಿಮಯಗಳ ವ್ಯಾಪ್ತಿಯಲ್ಲಿಯೇ ಮಠದಿಂದ ಕೈಗೊಳ್ಳಲಾಗುವುದು ಎಂದು ಮಂತ್ರಾಲಯ ಮಠದ ಪೀಠಾಧೀಪತಿ ಶ್ರೀಸುಬುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು. 
 
         ಹಂಪಿಯ ತುಂಗಭದ್ರಾ ನದಿ ತೀರದಲ್ಲಿನ ಶ್ರೀರಘುನಂದನ ತೀರ್ಥರ ಮೂಲ ಬೃಂದಾವನ ಮಠದಲ್ಲಿ ಶ್ರೀರಘುನಂದನ ತೀರ್ಥರ ಮಧ್ಯಾರಾಧನೆ ನಿಮಿತ್ತ ನಡೆದ ಕಾರ್ತೀಕ ದೀಪೋತ್ಸವ, ರಥೋತ್ಸವದ ನಂತರ ಮಾತನಾಡಿದರು. 
         ಹಂಪಿಯು ಪರಮಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ನೆಲೆಸಿರುವ ಶ್ರೀರಘುನಂದನ ತೀರ್ಥರು ಬೃಂದಾವನವ ಸ್ಥಳ ಜಾಗ್ರತವಾಗಿದೆ. ಮುಂದಿನ ವರ್ಷದ ಆರಾಧನೆ ಸಂದರ್ಭದಲ್ಲಿ ಇಲ್ಲಿಯೇ ಮೂರು ದಿನಗಳ ಕಾಲ ಇದ್ದು ಶ್ರೀಮೂಲ ರಾಮದೇವರ ಪೂಜಾ, ಸಭಾ ಕಾರ್ಯಕ್ರಮ ನಡೆಸಲಾಗುವುದು ಎಂದರು. 
         ಇದೇ ತಿಂಗಳು ಡಿ. 5ರಿಂದ 7ರವರೆಗೆ ಆನೆಗೂಂದಿನ ನವಬೃಂದಾವನ ಗಡ್ಡೆಯಲ್ಲಿ ಶ್ರೀಪದ್ಮನಾಭ ತೀರ್ಥರ ಆರಾಧನೆಯನ್ನು ನೆರವೇರಿಸಲಾಗುವುದು. ಎಲ್ಲ ಭಕ್ತರು ಭಾಗವಹಿಸಲು ತಿಳಿಸಿದರು. ಮಂತ್ರಾಲಯ ಮಠದ ಪಂಡಿತರಾದ ರಾಜಾ ಗಿರಿಯಾಚಾರ್ಯ ಉಪನ್ಯಾಸ ನೀಡಿದರು. ಶ್ರೀಮಠದ ಬ್ರಹ್ಮಣ್ಯತೀರ್ಥ ಆಚಾರ್ಯ, ವತ್ಸಾಲಾಚಾರ್ಯ, ಗುರುರಾಜ್ ದಿಗ್ಗಾವಿ ಮುಂತಾದವರು ಇದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link