ಶ್ರೀಮಠದ ಕತೃಗದ್ದುಗೆಯಲ್ಲಿ ಮಹಿಳೆಯರಿಗೆ ಪ್ರವೇಶ

ಚಿತ್ರದುರ್ಗ

     ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಸ್ಸಾಂ ಮತ್ತು ಮೇಘಾಲಯ, ಅರುಣಾಚಲ ಪ್ರದೇಶ ಪ್ರವಾಸ ಬಂದ ಮಹಿಳೆಯರಿಗೆ ಶುಭ ಕೋರಿದರು.

      ರಾಷ್ಟ್ರೀಯ ಏಕತಾ ಶರಣಮೇಳ ನಿಮಿತ್ತ ಉತ್ತರ ಭಾರತ ಪ್ರವಾಸದಲ್ಲಿರುವ ಶ್ರೀಗಳು ಮತ್ತು 60ಕ್ಕು ಹೆಚ್ಚು ಭಕ್ತಾದಿಗಳು ಮೇಘಾಲಯದ ಶಿಲ್ಲಾಂಗ್‍ನಲ್ಲಿ ಮಹಿಳಾ ದಿನಾಚರಣೆ ಆಚರಿಸಿದರು.

         ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಸಮಾಜದಲ್ಲಿರುವ ಲಿಂಗಭೇದವನ್ನು ಬಸವಣ್ಣನವರು ಮೊಟ್ಟಮೊದಲು ಕಿತ್ತುಹಾಕಿದ್ದಾರೆ . ಅವರ ಆದರ್ಶಗಳನ್ನು ನಮ್ಮ ಮುರುಘಾಮಠದಿಂದ ಅನುಷ್ಠಾನ ಮಾಡಿದ್ದೇವೆ. ಇಂದಿಗೂ ಮಹಿಳೆಯರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರವೇಶವಿಲ್ಲ. ಆದರೆ ನಾವು ನಮ್ಮ ಮಠದಲ್ಲಿ 28 ವರ್ಷಗಳ ಹಿಂದೆಯೇ ಕತೃಗದ್ದುಗೆಯಲ್ಲಿ ಪ್ರವೇಶವನ್ನು ನೀಡಲಾಯಿತು. ಅಂದು ಲೀಲಾದೇವಿ ಆರï ಪ್ರಸಾದ್, ರಾಣಿ ಸತೀಶï ಇನ್ನೂ ಮುಂತಾದ ಮಹಿಳೆಯರು ಪ್ರವೇಶಿಸಿದರು.

        ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ನಡೆಯುವ ಮಹೇಶ್ವರ ಜಾತ್ರೆಯಲ್ಲಿ ಮಹಿಳೆಯರ ಪ್ರವೇಶವಿದ್ದಿಲ್ಲ ಅಲ್ಲಿ ಪ್ರವೇಶವನ್ನು ನೀಡುವ ಕಾರ್ಯ ಮಾಡಿದ್ದೇವೆ. ಮೈಸೂರಿನ ಕೆಂಗೊಳ್ಳಿ ಬೆಟ್ಟದ ದೇವಸ್ಥಾನದಲ್ಲಿ ಮಹಿಳೆಯರು ಪ್ರವೇಶವನ್ನು ಮಾಡಿದರೆ ಕಗುವರು ಎಂಬ ಮೂಢನಂಬಿಕೆ ಇದನ್ನು ಕಿತ್ತು ಹಾಕಲು ಮತ್ತು ಜಾಗೃತಿ ಸಮಾರಂಭ್ಕಕೆ ಹೋರಟಾಗ ದಾರಿಯಲ್ಲಿ ಪ್ರವೇಶವನ್ನು ನೀಡಿಸುವ ಸ್ವಾಮೀಜಿಯೂ, ಪ್ರವೇಶವನ್ನು ಮಾಡಿದ ಮಹಿಳೆಯರು ಕಗುವರು, ಮಣ್ಣಾಗುವರೆಂದು ಡಾಂಬಾರ ರಸ್ತೆಯಲ್ಲಿ ಬರೆಯಲಾಗಿತ್ತು. ಸಂಪ್ರದಾಯವಾದಿಗಳು ಎಷ್ಟೇ ವಿರೋಧ ಮಾಡಿದರು ನಾವು ಹೋರಾಟ ಮಾಡಿ ಅಲ್ಲಿ ಮಹಿಳೆಗೆ ಪ್ರವೇಶವನ್ನು ನೀಡಲಾಯಿತು. ವಿಧವಾ ವಿವಾಹ, ಗಂಡನ ಮರಣದ ನಂತರ ಕುಂಕುಮ, ಬಳೆ, ತಾಳಿ ಕಿತ್ತು ಹಾಕುವ ಸಂಪ್ರದಾಯವನ್ನು ನಿಲ್ಲಿಸಿದ್ದು ಒಂದು ಇತಿಹಾಸವಾಗಿದೆ. ಈಗ ವಿಧವೆಯರು ಎಂದಿನಂತೆ ಸುಮಂಗಲಿಯರು ಧರಿಸುವ ಕುಂಕುಮ, ತಾಳಿ, ಬಳೆ ಧರಿಸಿ ಸಹಜ ಜೀವನ ಮಾಡುವಂತೆ ಮಾಡಿದ್ದು ನಮ್ಮ ಹೋರಾಟ್ಕಕೆ ಜಯ ದೊರಕಿದೆ. ಮಹಿಳೆಯರಿಗೆ ಧಾರ್ಮಿಕ ದೀಕ್ಷೆ ನೀಡಿ ಮಠಾಧೀಶರನ್ನಾಗಿ ಮಾಡಿ ಸದಾ ನಾವು ಮಹಿಳಾ ಹ್ಕಕುಗಳಿಗೆ ಹೋರಾಟವನ್ನು ಮಾಡಲಾಗಿದೆ. ಇಂಥ ಹೋರಾಟಗಳಿಗೆ ಬಸವಣ್ಣನವರು ಪ್ರೇರಣೆಯಾಗಿದ್ದಾರೆ ಮತ್ತು ಬಸವತತ್ವ ಅನುಷ್ಠಾನ ನಮ್ಮ ಗುರಿಯಾಗಿದೆ ಎಂದು ಚಿಂತನೆ ನೀಡಿದರು.

         ಈ ಸಂದರ್ಭದಲ್ಲಿ ಪಾಂಡೋಮಟ್ಟಿಯ ಶ್ರೀ ಗುರುಬಸವ ಮಹಾಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಶ್ರೀ ಇಮ್ಮಡಿ ಬಸವಕೇತಯ್ಯ ಸ್ವಾಮೀಜಿ , ಬ್ಯಾಡಗಿ, ತಿಳುವಳ್ಳಿ, ಶಿರಗುಪ್ಪ ಸ್ವಾಮೀಜಿಗಳು, ಧಾರವಾಡ, ಗೋವಾ, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಮುಂತಾದ ಬಸವಕೇಂದ್ರದ ಪದಾಧಿಕಾರಿಗಳು ಇದ್ದರು.
ಈ ಸಂದರ್ಭದಲ್ಲಿ ಮಹಿಳಾ ಬಸವಕೇಂದ್ರದವರು ಮೇಘಾಲಯ ರಾಜ್ಯದ ಮಹಿಳಾ ಉಡುಪುಗಳನ್ನು ಧರಿಸಿ ಸಂಭ್ರಮಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link