ಬಳ್ಳಾರಿ:
ನಮ್ಮ ಸರಕಾರ ವಾಲ್ಮೀಕಿ ಜಯಂತಿ ಹಾಗು ವಿಧಾನ ಸೌದದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿದೆ. ಇಡೀ ದೇಶಕ್ಕೆ ಪರಿಶಿಷ್ಟ ಪಂಗಡ ಹಾಗು ಪರಿಶಿಷ್ಟ ಜಾತಿಗೆ 38 ಸಾವಿರ ಕೋಟಿ ರೂ.ಹಣವನ್ನು ಕಾಂಗ್ರೆಸ್ ಪಕ್ಷ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.
ನಗರದ ಎಸ್ಪಿ ವೃತ್ತದ ಬಳಿ ಇರುವ ವಾಲ್ಮೀಕಿ ಮಹರ್ಷಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಗೆ ಅನುದಾನ ಹಂಚಿಕೆ ವಿಚಾರದ ಬಗ್ಗೆ ಶ್ವೇತ ಪತ್ರ ಹೊರಡಿಸಲು ಶ್ರೀ ರಾಮುಲು ಹಾಕಿದ ಸವಾಲಿಗೆ ತಿರುಗೇಟು ನೀಡಿದರು.
ಮಾಧ್ಯಮದವರು ದಿನಾಂಕ ನಿಗದಿ ಪಡಿಸಿದರೆ, ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ.ರಾಜ್ಯದಲ್ಲಿ ಯಾರು ಹೆಚ್ಚು ಅನುದಾನ ತಂದಿದ್ದಾರೆ ಎಂದು ಬಳ್ಳಾರಿ ಜನತೆಗೆ ಗೊತ್ತಾಗಲಿ ಎಂದರು ಸವಾಲ್ ಹಾಕಿದರು.
ರಾಜ್ಯದಲ್ಲಿ ಹೆಚ್ಚುಅನುದಾನ ನೀಡಿದ್ದು ಕಾಂಗ್ರೆಸ್. ಬಳ್ಳಾರಿ ಯ ಸಂಪತ್ತು ಖಾಲಿ ಮಾಡಿದ್ದು ಯಾರು. ಜಿಲ್ಲೆಯಲ್ಲಿ ಉದ್ಯೋಗ ಇಲ್ಲದಂತೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದ ಅವರು, ಬಳ್ಳಾರಿ ಜಿಲ್ಲೆಗೆ ಬಡತನ ತಂದವರು ಶ್ರೀ ರಾಮುಲು. ಬಳ್ಳಾರಿ ಅಭಿವೃದ್ಧಿಗೆ ಅತೀ ಹೆಚ್ಚು ಅನುದಾನ ತಂದಿದ್ದಾರೆ. ಮಾಡಿಕೊಂಡಿದ್ದಾರೆ.ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಈ ಹೇಳಿಕೆಗೆ ಹಾಗಂದರೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅನುದಾನ ಬಳಕೆ ವಿಚಾರದಲ್ಲಿಪ್ಪ ಎಂದು ತಿಳಿಸಿದರು.
ಶ್ರೀ ರಾಮುಲು ಅವರ ಮೇಲೆ ಪ್ರೀತಿ ಇದೆ:
ಶ್ರೀ ರಾಮುಲು ಅಣ್ಣ ಎಂದು ಹೇಳಿದ ಸಚಿವರು, ಶ್ರೀ ರಾಮುಲು ಅಣ್ಣನವರ ಮೇಲೆ ನನಗೆ ಬಹಳ ಪ್ರೀತಿ ಇದೆ. ಶ್ರೀ ರಾಮುಲು ಪಕ್ಕಾ ಕಾಂಗ್ರೆಸ್ಸಿಗರು. ಸುಷ್ಮಾ ಸ್ವರಾಜ್ ಬಂದ ನಂತರ ಅವರು ಬಿಜೆಪಿಗೆ ಹೋದರು ಎಂದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್, ಜೆ.ಎಸ್. ಆಂಜನೇಯಲು ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ