ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯ ಎಡವಟ್ಟು : ಬೇರೆ ಉತ್ತರ ಪತ್ರಿಕೆ ಜೆರಾಕ್ಸ್ ನೀಡಿ ಆತಂಕ ಸೃಷ್ಠಿ

ಚಳ್ಳಕೆರೆ

     ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಏಪ್ರಿಲ್-30ರಂದು ಪ್ರಕಟವಾಗಿದ್ದು, ಚಳ್ಳಕೆರೆ ತಾಲ್ಲೂಕು ಶೇ. 87.32ರಷ್ಟು ಫಲಿತಾಂಶ ಹೊಂದುವ ಮೂಲಕ ಜಿಲ್ಲೆಯಲ್ಲೇ ಪ್ರಥಮ ತಾಲ್ಲೂಕು ಕೇಂದ್ರವಾಗಿ ಹೊರಹೊಮ್ಮಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಸುಧಾರಣೆಯಾಗಿದೆ ಎಂಬ ಸಂತೃಪ್ತಿ ಇಲಾಖೆಯದಾಗಿದೆ.

     ಆದರೆ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯುವ ದೃಷ್ಠಿಯಿಂದ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗೆ ತಾನು ಪ್ರತಿಯೊಂದು ವಿಷಯದಲ್ಲೂ ನಿಖರವಾಗಿ ಎಷ್ಟು ಅಂಕಗಳನ್ನು ಪಡೆಯುತ್ತೇನೆಂಬ ಖಾತರಿ ಅವರಲ್ಲಿರುತ್ತದೆ. ಕಾರಣ, ಸತತ ಪರಿಶ್ರಮದ ವಿದ್ಯಾಭ್ಯಾಸ ಮಾಡಿದ ಅವರಿಗೆ ಪರೀಕ್ಷೆಯಲ್ಲಿ ಉತ್ತರ ಬರೆದ ಹಿನ್ನೆಲೆಯಲ್ಲಿ ತಮಗೆ ಬರಬಹುದಾ ಅಂಕಗಳನ್ನು ಲೆಕ್ಕಹಾಕಿರುತ್ತಾರೆ. ಆದರೆ, ಫಲಿತಾಂಶ ಬಂದ ನಂತರ ಮಾತ್ರ ತಾವು ಪಡೆದ ಅಂಕಗಳು ಅತಿ ಕಡಿಮೆ ಇದ್ದು, ಈ ಬಗ್ಗೆ ಅವರಲ್ಲಿ ಮತ್ತು ಪೋಷಕರಲ್ಲಿ ಆತಂಕ ಉಂಟಾಗುತ್ತದೆ.

     ಪರೀಕ್ಷಾ ಮಂಡಳಿಯ ಎಡವಟ್ಟಿನಿಂದ ನಗರದ ವಾರಿಯರ್ಸ್ ಶಾಲೆಯ ವಿದ್ಯಾರ್ಥಿಯೊಬ್ಬಳು ತನಗೆ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆ ಪಡೆಯಲು ಎಸ್‍ಎಸ್‍ಎಲ್‍ಸಿ ಬೋರ್ಡ್‍ಗೆ ಹಣ ಕಟ್ಟಿ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದರು. ಉತ್ತರ ಪತ್ರಿಕೆ ಬಂದಾಗ ಅವಳಿಗೆ ಉತ್ತರ ಪತ್ರಿಕೆಯಲ್ಲಿನ ತಾನು ಬರೆದ ಉತ್ತರ ಪತ್ರಿಕೆ ಬದಲು ಬೇರೆ ಉತ್ತರ ಪತ್ರಿಕೆ ಬಂದಿದ್ದಲ್ಲದೆ ಯಾವುದೇ ಅಂಕಗಳನ್ನು ಕೂಡದೇ ಯಾವುದೇ ಸಹಿಯನ್ನು ನಮೂದಿಸದೇ ಬೇಕಾಬಿಟ್ಟಿಯಾಗಿ ಉತ್ತರ ಪತ್ರಿಕೆಯ ನಕಲನ್ನು ಕಳುಹಿಸಿದ್ದು, ಹೆಚ್ಚು ಅಂಕ ಪಡೆಯುವ ಅವಳ ಆಸೆಗೆ ಪರೀಕ್ಷಾ ಮಂಡಳಿ ತಣ್ಣೀರು ಎರಚಿದೆ.

     ನಗರದ ವಾರಿಯರ್ಸ್ ಶಾಲೆಯ ವಿದ್ಯಾರ್ಥಿನಿ ಜಿ.ಕೆ.ದಿವ್ಯ ತನಗೆ ಗಣಿತ ವಿಷಯದಲ್ಲಿ ಕನಿಷ್ಟ ಪಕ್ಷ 80 ಅಂಕಗಳು ಬರಬೇಕಿತ್ತು, ಗಣಿತ ಎಲ್ಲಾ ಲೆಕ್ಕಗಳನ್ನು ಅಚ್ಚುಕಟ್ಟಾಗಿ ಮಾಡಿರುವುದಾಗಿ ತನ್ನ ತಂದೆ ಕೆ.ಗೋಪಿನಾಥಗೆ ತಿಳಿಸಿದ್ದು, ಮಗಳ ಆತ್ಮವಿಶ್ವಾಸ ಕಂಡ ತಂದೆ. ಉತ್ತರ ಪತ್ರಿಕೆಯ ನಕಲು ತರಿಸಿ ನೋಡಿದಾಗ ಪರೀಕ್ಷಾ ಮಂಡಳಿ ಯಾರೇಯಾರದ್ದೋ ಉತ್ತರ ಪತ್ರಿಕೆಯನ್ನು ರವಾನಿಸಿ ಗೊಂದಲ ಉಂಟು ಮಾಡಿದ್ದು ಗೊತ್ತಾಗಿದೆ.

     ಪರೀಕ್ಷಾ ಮಂಡಳಿಯಿಂದ ಬಂದ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ಮಾತ್ರ ವಿದ್ಯಾರ್ಥಿನಿಯ ಪ್ರವೇಶ ಪತ್ರದ ಸಂಖ್ಯೆ ಸರಿ ಇದ್ದು, ಮತ್ತೊಂದು ಉತ್ತರ ಪತ್ರಿಕೆಯಲ್ಲಿ ಬೇರೆ ವಿದ್ಯಾರ್ಥಿಯ ಪ್ರವೇಶ ಪತ್ರದ ಸಂಖ್ಯೆ ನಮೂದಾಗಿದ್ದು, ಇವಳ ಸ್ವ ಅಕ್ಷರದಲ್ಲಿ ಬರೆದ ಉತ್ತರ ಪತ್ರಿಕೆಗಲ್ಲಿ ಕೇವಲ ಒಂದು ಪುಟ ಮಾತ್ರ ಅವಳ ಅಕ್ಷರದಾಗಿದ್ದು, ಇನ್ನೂಳಿದ ಹತ್ತಕ್ಕೂ ಹೆಚ್ಚು ಪುಟಗಳಲ್ಲಿನ ಉತ್ತರ ಬೇರೆಯವರ ಅಕ್ಷರದಲ್ಲಿತ್ತು.

     ಈ ಬಗ್ಗೆ ಪತ್ರಿಕೆಯೊಂದಿಗೆ ತಮ್ಮ ಅಸಮದಾನವನ್ನು ತೋಡಿಕೊಂಡ ಜಿ.ಕೆ.ದಿವ್ಯ, ಕೆ.ಗೋಪಿನಾಥ, ನನ್ನ ಮಗಳ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ಮಾತ್ರ ನನ್ನ ಪುತ್ರಿಯ ಪ್ರವೇಶ ಪತ್ರ ಸಂಖ್ಯೆ ಇದ್ದು, ಬೇರೆ ಉತ್ತರ ಪತ್ರಿಕೆಯಲ್ಲಿ ಮತ್ತೊಬ್ಬರ ಉತ್ತರ ಪತ್ರಿಕೆ ಸಂಖ್ಯೆ ನಮೂದು ಮಾಡಲಾಗಿದೆ. ಪರೀಕ್ಷಾ ಮಂಡಳಿ ಪರಿಶೀಲನೆ ನಡೆಸಿ ನನ್ನ ಮಗಳು ಬರೆದ ಉತ್ತರ ಪತ್ರಿಕೆಯನ್ನು ಕಳುಹಿಸಿದ್ದಲ್ಲಿ ನಮಗೆ ಹೆಚ್ಚು ಉಪಯುಕ್ತವಾಗುತ್ತಿತ್ತು.

      ಆದರೆ, ನನ್ನ ಪುತ್ರಿ ದಿವ್ಯಳಾ ಪ್ರವೇಶ ಪತ್ರದ ಸಂಖ್ಯೆ 20190106242 ಇದ್ದು, ಉತ್ತರ ಪತ್ರಿಕೆ ನಕಲು ಕಳಿಸುವಾಗ ಮೊದಲ ಪುಟದಲ್ಲಿ ಮಾತ್ರ ಈ ಸಂಖ್ಯೆ ಇದ್ದು, ಮತ್ತೊಂದು ಉತ್ತರ ಪತ್ರಿಕೆಯಲ್ಲಿ ಪ್ರವೇಶ ಪತ್ರದ ಸಂಖ್ಯೆ 20190171271 ಉತ್ತರ ಪತ್ರಿಕೆಯ ಜೆರಾಕ್ಸ್ ಕಾಫಿಯನ್ನು ಕಳುಹಿಸಲಾಗಿದೆ. ನನ್ನ ಮಗಳ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಯನ್ನು ಬೋರ್ಡ್ ಕಳುಹಿಸದೆ ಬೇರೆ ಉತ್ತರ ಪತ್ರಿಕೆಯನ್ನು ಕಳುಹಿಸುವ ಮೂಲಕ ನಮಗೆ ಶಾಕ್ ನೀಡಿದೆ.

       ಈ ರೀತಿ ಅನಗತ್ಯವಾಗಿ ತೊಂದರೆಯನ್ನುಂಟು ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಎಸ್‍ಎಸ್‍ಎಲ್‍ಸಿ ಬೋರ್ಡ್ ಚೆಲ್ಲಾಟವಾಡುತ್ತದೆ ಎಂಬುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಅದ್ದರಿಂದ ಉತ್ತರ ಪತ್ರಿಕೆ ಬಯಸುವವರ ನೊಂದಾಣಿ ಸಂಖ್ಯೆ ಇತರ ವಿವರವನ್ನು ಬೋರ್ಡ್ ಕರಾರು ಒಕ್ಕಾಗಿ ಕಳುಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ನ್ಯಾಯಸಿಗದೇ ಇದ್ದಲ್ಲಿ ಅನಿವಾರ್ಯವಾಗಿ ಹೋರಾಟ ನಡೆಸಬೇಕಾದೀತು ಎಂದು ಅವರು ತಿಳಿಸಿದ್ಧಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap