ಎಸ್ಟಿ ಮೀಸಲಾತಿ ಹೆಚ್ಚಿಸಲು ಆಗ್ರಹ

ಹೊಸದುರ್ಗ:

      ಕರ್ನಾಟಕ ರಾಜ್ಯದಲ್ಲಿ ನಿಗಧಿಪಡಿಸಿರುವ ಮೀಸಲಾತಿ ಪರಮಾಣುವನ್ನು ಶೇಖಡ 3%ರಿಂದ ಶೇಖಡ 7%ಗೆ ಹೆಚ್ಚಿಸಬೇಕು ಎಂದುರಾಜ್ಯ ವಾಲ್ಮೀಕಿ ಯುವ ಸೇನೆ ಪ್ರಧಾನ ಕಾರ್ಯದರ್ಶಿ ತುಂಬಿನಕೆರೆ ಬಸವರಾಜ್ ಆಗ್ರಹಿಸಿದರು.

     ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿಹಮ್ಮಿಕೊಂಡಿದ್ದ ಮೀಸಲಾತಿ ವಿಸ್ತರಿಸುವ ಕುರಿತುವಿವಿಧ ಬೇಡಿಕೆಗಳಿಗೆ ಒತ್ತಾಯಿಸಿಇಲ್ಲಿನ ಶಿರಸ್ತೆದಾರ ರವಿಕುಮಾರ್ ಅವರಿಗೆ ಮನವಿ ನೀಡಿ ಮಾತನಾಡಿದರು.

     ಕರ್ನಾಟಕ ರಾಜ್ಯದಲ್ಲಿ 2011ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಠ ವರ್ಗದವರ ಜನಸಂಖ್ಯೆ 42,48,987ಇದ್ದು ರಾಜ್ಯದ ಒಟ್ಟಾರೆ ಜನ ಸಂಖ್ಯೆಯಲ್ಲಿ ಪ್ರಮಾಣ 6.95%ರಷ್ಟಿರುತ್ತದೆ. ಜನ ಸಂಖ್ಯೆಯ ಪ್ರಮಾಣವು ಈಗಾಗಲೇ ಜನಗಣತಿ ಪಡೆದು 8ವರ್ಷಗಳು ಕಳೆದಿರುವುದರಿಂದ ಜನಸಂಖ್ಯೆಯು ಶೇಖಡ 7%ಹೆಚ್ಚಿರುತ್ತದೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ನೇಮಾಕಾತಿಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರವೇಶಗಳಲ್ಲಿ ಕೇವಲ ಶೇಖಡ 3%ರಷ್ಟು ಮೀಸಲಾತಿಯನ್ನು ನಿಗಧಿಪಡಿಸಲಾಗಿದೆ.

     ಇದರಿಂದ ಪರಿಶಿಷ್ಠ ವರ್ಗದವರಿಗೆ ಅನೇಕ ದಶಕಗಳಿಂದ ಅನ್ಯಾಯವಾಗಿರುತ್ತದೆ.ಆದ್ದರಿಂದ ಪರಿಶಿಷ್ಠ ವರ್ಗದವರಿಗೆ ಕರ್ನಾಟಕ ರಾಜ್ಯದಲ್ಲಿ ನಿಗಧಿಪಡಿಸಿರುವ ಮೀಸಲಾತಿ ಪರಮಾಣುವನ್ನು ಶೇಖಡ 3%ರಿಂದ ಶೇಖಡ 7%ಗೆ ಹೆಚ್ಚಿಸಬೇಕು ಎಂದರು.

     ಕೆಲವು ಮುಂದುವರೆದ ವರ್ಗದವರು ಪರಿಶಿಷ್ಠ ವರ್ಗದ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಿಕೊಂಡು ಜಾತಿ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವಾದ ತಹಶೀಲ್ದಾರ್‍ರವರಿಂದ ಜಾತಿ ಪ್ರಮಾಣ ಪತ್ರಗಳನ್ನು ಅಸಂವಿಧಾನಾತ್ಮಕವಾಗಿ ಪಡೆದುಕೊಂಡು ಪರಿಶಿಷ್ಠ ವರ್ಗದವರಿಗೆ ಮೀಸಲಿರುವ ಸೌಲಭ್ಯಗಳನ್ನು ಪಡೆಯುತ್ತಿರುವುದು ಸಮುದಾಯದ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರ ಗಮನಹರಿಸಿ ಅರ್ಹರಲ್ಲದವರಿಗೆ ಪರಿಶಿಷ್ಠ ವರ್ಗದ ಮ್ರಮಾಣ ಪತ್ರ ನೀಡುವುದನ್ನು ತಡೆಗಟ್ಟಬೇಕು ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಮೇಲೆ ಕಠಣ ಕ್ರಮ ಜರುಗಿಸಬೇಕು ಎಂದರು.

    ಕರ್ನಾಟಕ ರಾಜ್ಯದಲ್ಲಿ ಒಟ್ಟು 50ಬುಡಕಟ್ಟು ಗುಂಪುಗಳನ್ನು ಪರಿಶಿಷ್ಠ ವರ್ಗವೆಂದು ಅಧಿಸೂಚಿಲಾಗಿದೆ. ಪ್ರತಿ ಬುಡಕಟ್ಟು ತನ್ನದೇ ಆದ ಸಂಸ್ಕತಿ, ಸಂಪ್ರದಾಯಆಚರಣೆಗಳನ್ನು ರೂಡಿಸಿಕೊಂಡಿದ್ದು ಬದಲಾವಣೆಯ ಸಂದಿಗ್ದತೆಯಲ್ಲಿರುತ್ತವೆ. ಮೂಲ ಸಮಸ್ಯೆಗಳಾದ ವಸತಿ, ಕೃಷಿ, ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಪೌಷ್ಟಿಕತೆ ಇತ್ಯಾದಿಗಳ ಬಗ್ಗೆ ಗಮನ ಹರಿಸಿ ಮುಖ್ಯವಾಹಿನಿಯತ್ತ ತರಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಿರುವುದು ಅವಶ್ಯಕವಿರುತ್ತದೆ.ಈ ನಿಟ್ಟಿನಲ್ಲಿಪರಿಶಿಷ್ಠ ವರ್ಗದ ಸಚಿವಾಲಯವನ್ನು ಸ್ಥಾಪಿಸಬೇಕುಎಂದರು.

     ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮವು ಮದಕರಿ ನಾಯಕ ಜನ್ಮಸ್ಥಳವಾಗಿದ್ದು ಈ ಸ್ಥಳವನ್ನು ಪಾರಂಪರಿಕ ಪ್ರವಾಸಿ ತಾಣವಾಗಿ ಮಾರ್ಪಡು ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.ಇದೇ ವೇಳೆ ವಾಲ್ಮೀಕಿ ಸಮಾಜದ ಅಧ್ಯಕ್ಷ ಎಂ.ದೇವರಾಜಪ್ಪ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಗಾದ್ರೆಪ್ಪ, ಏಕಂತಪ್ಪ, ಜಯಪ್ರಕಾಶ್, ತಾರೀಕೆರೆ ರಮೇಶ್, ಪವಿತ್ರ ನಾಗರಾಜ್, ಗ್ರಾ.ಪಂ.ಅಧ್ಯಕ್ಷರಾದ ಅನುಸೂಯಮ್ಮ ಮತ್ತು ಪಲ್ಲವಿ, ಹನುಮಂತಪ್ಪ, ಸಿದ್ದೇಶ್, ಜಗನ್ನಾಥ್, ಕರಿಯಮ್ಮ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link