ಬಳ್ಳಾರಿ
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾವುದು ಎಂದು ಅರಣ್ಯ,ಪರಿಸರ,ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದ್‍ಸಿಂಗ್ ಹೇಳಿದರು.ನಗರದ ವಿಮ್ಸ್ ನಿರ್ದೇಶಕರ ಸಭಾಂಗಣದಲ್ಲಿ ಶನಿವಾರ ನಡೆದ ವಿಮ್ಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಮ್ಸ್‍ನಲ್ಲಿ ತಕ್ಷಣದ ಅವಶ್ಯಕತೆಗಳನ್ನು ಮೊದಲಿಗೆ ನಮ್ಮಲ್ಲಿನ ಜಿಲ್ಲಾ ಖನಿಜ ನಿಧಿ ಹಾಗೂ ಸರಕಾರದ ಅನುದಾನ ಬಳಸಿಕೊಂಡು ಪೂರೈಸೋಣ.ನಂತರ ಹಂತಹಂತವಾಗಿ ವಿಮ್ಸ್‍ನ ಅಗತ್ಯ ಸೌಕರ್ಯ ಹಾಗೂ ಅವಶ್ಯಕತೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು.
ಇತ್ತೀಚೆಗೆ ನಡೆದ ಡಿಎಂಎಫ್ ಸಭೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ; ನಂತರ ಉಳಿದ ಸೆಕ್ಟರ್ ಗಳತ್ತ ಗಮನಹರಿಸಲು ತೀರ್ಮಾನಿಸಲಾಗಿದೆ. ವಿಮ್ಸ್ ನ ಕಾಯಕಲ್ಪಕ್ಕೆ ಕ್ರಮವಹಿಸಲಾಗುವುದು ಎಂದರು.ವಿಮ್ಸ್ ಸಿಸಿಟಿವಿ ಅಳವಡಿಕೆಗೆ ನಿರ್ಭಯಾ ಫಂಡ್: 174ಎಕರೆ ವಿಸ್ತೀರ್ಣದ ವಿಮ್ಸ್ ಸಿಸಿಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿರ್ಭಯಾ ಫಂಡ್ ಬಳಸಿ ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಗಿರೀಶ್ ಅವರು ಕೇಂದ್ರ ಸರಕಾರದ ಅನುದಾನ ಬಳಸಿಕೊಂಡು ಇದನ್ನು ಮಾಡಬಹುದು ಎಂದು ವಿಮ್ಸ್ ನಿರ್ದೇಶಕರ ಕೋರಿಕೆಗೆ ತಿಳಿಸಿದರು.ಸಚಿವರು ಕೂಡಲೇ ಪ್ರಸ್ತಾವನೆ ಸಿದ್ದಪಡಿಸಿ ಕಳುಹಿಸುವಂತೆ ಸೂಚಿಸಿದರು.
ಟ್ರಾಮಾಕೇರ್ ಮತ್ತು ವಿಮ್ಸ್ ಆವರಣದಲ್ಲಿ ಲಿಕ್ವೀಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗಿದ್ದು,ನಮ್ಮಲ್ಲಿ ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆಯಾಗದಂತೆ ಜಿಲ್ಲಾಡಳಿತ ನೋಡಿಕೊಂಡಿದೆ ಎಂದು ವಿಮ್ಸ್ ನಿರ್ದೇಶಕ ಡಾ.ದೇವಾನಂದ್ ಹೇಳಿದರು.ಇತ್ತೀಚಿಗೆ ಟ್ರಾಮಾಕೇರ್ ಸೆಂಟರ್ ಗೆ ಭೇಟಿ ನೀಡಿ ಕೇಂದ್ರ ತಂಡ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಅವರು ಪ್ರಸ್ತಾಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ