ಹಗರಿಬೊಮ್ಮನಹಳ್ಳಿ
ಸರ್ಕಾರಿ ಶಾಲೆಯೊಂದು ಸಮುದಾಯವನ್ನು ಶಾಲೆಯತ್ತ ಕರೆತಂದು ಇಂದಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತ 75ನೇ ವರ್ಷದತ್ತ ದಾಪುಗಾಲಿಡುತ್ತಿರುವ ಸರ್ಕಾರಿ ಶಾಲೆಗಳು ಇಂದಿನ ಜಾಯಮಾನದಲ್ಲಿ ಬಹಳ ವಿರಳ ಆದರೆ, ಇಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಂದಿಗೂ ಆ ಸ್ಥಾನವನ್ನು ಉಳಿಸಿಕೊಂಡು ಬಂದಿದೆ ಎಂದರೆ ಅತಿಶಾಯೋಕ್ತಿ ಏನಲ್ಲ ಎಂದು ಪುರಸಭೆಯ ಸದಸ್ಯೆ ಕವಿತಾ ವಿಜಯಕುಮಾರ್ ಹಾಲ್ದಾಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಹಳೇ ಊರಿನ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದ ಕವಾಯತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗೇನು ನಾವು ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದು, ಇದಕ್ಕೆ ಶಿಕ್ಷಕರ ಕಾಳಜಿ ಮತ್ತು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವಂತೆ ತಮ್ಮ ಮಕ್ಕಳನ್ನು ದಾಖಲಾತಿಸಿರುವ ಪಾಲಕರಿಗೆ ಮೊದಲು ಅಭಿನಂದನೆ ಸಲ್ಲಿಸಬೇಕು ಎಂದರು. ಇನ್ನು ಹಳೇ ವಿದ್ಯಾರ್ಥಿಗಳ ಆರ್ಥಿಕ ನೆರವು ಶಾಲೆಯನ್ನೇ ಸಮುದಾಯದತ್ತ ಕರೆದುಕೊಂಡು ಹೋಗುತ್ತಿದೆ ಎನ್ನುವಂತಾಗಿದೆ ಎಂದರು. ಆದ್ದರಿಂದ ಇದು ಮುಂದಿನ ದಿನದಲ್ಲಿ 75ನೇ ವರ್ಷಾಚರಣೆಯನ್ನು ಅದ್ಧೂರಿಯಿಂದ ಆಚರಿಸಲಿ ಎಂದು ಹಾರೈಸಿದರು.
ಬಿಇಒ ಶೇಖರಪ್ಪ ಎಂ.ಹೊರಪೇಟೆ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಈ ಶಾಲೆಯಲ್ಲಿ ಶಿಕ್ಷಣ ಪಡೆದ ಹಳೇ ವಿದ್ಯಾರ್ಥಿಗಳ ಆರ್ಥಿಕ ಸಹಕಾರ ಶಿಕ್ಷಣದ ಕಾಳಜಿ ತೋರುತ್ತದೆ. ಖಾಸಗಿ ಶಾಲೆಗಳೆಂದರೆ ಸಹಾಯಕ್ಕಾಗಿ ಮುಗೆಬೀಳುವ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಡವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವ ಟೈ ಮತ್ತು ಬೆಲ್ಟ್‍ನಿಂದ ಇಡಿದು ಎಲ್ಲಾ ಬಗೆಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸಮುದಾಯ ಮುಂದಾಗಿರುವುದನ್ನು ನಾವು ಮತ್ತು ನಮ್ಮ ಶಿಕ್ಷಣ ಇಲಾಖೆ ಶ್ಲಾಘಿಸುತ್ತದೆ ಎಂದರು. ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸ್ವಾವಲಂಬಿ ಬದುಕನ್ನು ಕಲಿಸಿಕೊಡಿ ಶಾಲೆಯು 75ವರ್ಷಾಚರಣೆ ಮತ್ತು ಶತಮಾನೋತ್ಸವವನ್ನು ಕೂಡ ಯಶಸ್ವಿಯಾಗಿ ಆಚರಿಸುವಂತಾಗಲಿ ಎಂದು ಶುಭಕೋರಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಲೋಕಪ್ಪ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೂ ಮಿಗಿಲಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾಯಿಸುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಯು.ಎಸ್.ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಅಭಿವೃದ್ಧಿಗಾಗಿ ಸಮುದಾಯವನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಯಶಸ್ವಿಯಾಗಿದ್ದಾರೆ. ಅದರಂತೆ ಹಳೇ ವಿದ್ಯಾರ್ಥಿಗಳ ಸಹಕಾರ ನಮಗೆ ದೊರೆತಿದ್ದು ಅವರ ಸಹಕಾರದಿಂದ 2.30ಲಕ್ಷ ರೂ.ಗಳ ದೇಣಿಗೆ ಸಂಗ್ರಹವಾಗಿದ್ದು, ಕೆಲವರ ಶ್ರಮಧಾನದೊಂದಿಗೆ ಸಂಗ್ರಹವಾದ ದೇಣಿಗೆಯಲ್ಲಿ ಶಾಲಾ ಅಭಿವೃದ್ಧಿಗೆ ವೆಚ್ಚಮಾಡಲಾಗುತ್ತಿದೆ. ಇನ್ನು ಕೆಲ ಹಳೇ ವಿದ್ಯಾರ್ಥಿಗಳು ಇನ್ನಷ್ಟು ಮುಂದೆ ಬಂದು ಶಾಲೆಗೆ ಬೇಕಾಗುವ ಸಾಮಾಗ್ರಿಗಳನ್ನು ಕೊಡಿಸುವುದಾಗಿ ತಿಳಿಸಿದ್ದಾರೆ ಎಲ್ಲರೀಗೂ ಮತ್ತು ಶಿಕ್ಷಣ ಇಲಾಖೆಗೂ ಅಭಿನಂದನೆಗಳು ಎಂದರು
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಗೂಳಪ್ಪ ಆಚಾರಿ, ಸದಸ್ಯ ಗುಂಗಾಡಿ ನಾಗರಾಜ್, ಮುಖಂಡರಾದ ಮೋಹನ್‍ಸಾ, ಸೋಡ ನಾಗರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಬೋರಯ್ಯ, ಇದೇ ಶಾಲೆಯಲ್ಲಿ ನಿವೃತ್ತರಾದ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ, ಬಿ.ಆರ್.ಸಿ ಮತ್ತು ಸಿಆರ್‍ಪಿಯ ಭೀಮಸೇನಪ್ಪ, ಹನುಮರೆಡ್ಡಿ, ಬಸವರಾಜ, ಶಾಲಾ ಶಿಕ್ಷಕರಾದ ಶಾಂತಮೂರ್ತಿ, ಎಚ್.ಎಂ.ವನಿತಾ, ಎಂ.ಜಿ.ಮಲ್ಲಿಕಾರ್ಜುನ, ಚಂದ್ರಕಲಾ, ಶಶಿಕಲಾ, ವಿಜಯಲಕ್ಷ್ಮೀ, ಸುಜಾತ, ರತ್ನಮ್ಮ, ನಿತ್ಯಾನಂದಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕರಾದ ಮಂಜುನಾಥ, ರಂಗನಾಥ ಹವಲ್ದಾರ್ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
