ಜೀವನದಲ್ಲಿ ವ್ಯಕ್ತಿಗೆ ದಕ್ಷತೆ, ಪ್ರಾಮಾಣಿಕತೆ ಅತ್ಯಗತ್ಯ : ಡಾ||ಸಿ.ಶಿವಲೀಂಗಪ್ಪ

ಹಿರಿಯೂರು :

     ಜೀವನದಲ್ಲಿ ಯಾವುದೇ ವ್ಯಕ್ತಿ ತನ್ನ ವೃತ್ತಿ ಧರ್ಮಕ್ಕೆ ಅನುಗುಣವಾಗಿ ದಕ್ಷತೆ ಹಾಗೂ ಪ್ರಾಮಾಣಿಕಯಿಂದ ಕೆಲಸ ಮಾಡಿದರೆ ಜನರ ಪ್ರೀತಿ ಗಳಿಸುವುದರ ಜೊತೆಗೆ ಎಲ್ಲಾರು ಗೌರವಿಸುತ್ತಾರೆ ಎಂಬುದಾಗಿ ಸಾಹಿತಿ ಹಾಗೂ ಜನಪದತಜ್ಞರಾದ ಡಾ||ಸಿ.ಶಿವಲಿಂಗಪ್ಪ ಹೇಳಿದರು.

    ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿರಳುಚ್ಛುಗಾರ ಆರ್.ತಿಪ್ಪೇಸ್ವಾಮಿಯವರು ವಯೋನಿವೃತ್ತಿ ಹೊಂದಿದ್ದು ಅವರಿಗೆ ಆಯೋಜಿಸಿದ್ದ ಬೀಳ್ಗೊಡಿಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಕಾಲೇಜು ಪ್ರಾರಂಭವಾಗಿದ್ದರಿಂದ ಹಿಡಿದು ಇಂದಿನವರೆಗೂ ಅಂದರೆ ಸುಮಾರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಎಲ್ಲಾರ ಮನಸೊರಗೊಂಡ ತಿಪ್ಪೇಸ್ವಾಮಿಯವರು ಜನಮುಖಿ ಹಸಸ್ಮಖಿಗಳಾಗಿದ್ದು ತನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆಸಲ್ಲಿಸಿದ್ದಾರೆ ಎಂದು ಹೇಳಿದರು.

     ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ||ಡಿ.ಧರಣೇಂದ್ರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರೋ.ಜಿ.ದೊಡ್ಡಬಸಪ್ಪ, ವೈ.ತಿಪ್ಪೇಸ್ವಾಮಿ, ಅಧೀಕ್ಷಕರಾದ ಪಿ.ಎಸ್.ಚಂದ್ರಶೇಖರಯ್ಯ, ಪದ್ಮಾವತಿ, ಶಿವಲೀಲಾ, ವಿ.ಪಿ.ಜನಾರ್ದನ್, ಹೆಚ್.ತಿಪ್ಪೇಸ್ವಾಮಿ, ಮುರವರ್ಧನ್, ಜನಾರ್ದನ್‍ಕುಮಾರ್, ಗೋವಿಂದರಾಜು, ಜೆ.ದಯಾನಂದ್, ಜಗನ್ನಾಥ್, ಎಸ್.ಜಿ.ರಂಗಸ್ವಾಮಿ, ಪಿ.ಚಿತ್ತಯ್ಯ, ತಿಪ್ಪೇಶ್.ಆರ್, ಹುಲಗಪ್ಪ ಹಾಗೂ ಎಸ್.ಆರ್.ಮಹಂತೇಶ್, ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link