ಬೆಂಗಳೂರು
ಹುಡುಗಿಯನ್ನು ಪ್ರಿತಿಸುವ ವಿಚಾರದಲ್ಲಿ ಉಂಟಾದ ದ್ವೇಷದಿಂದ ಕಾಲೇಜಿನ ಶೌಚಾಲಯದಲ್ಲಿ ಹಾಡುಹಗಲೇ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಸಹಪಾಠಿ ವಿದ್ಯಾರ್ಥಿಯೊಬ್ಬ ಭೀಕರವಾಗಿ ಕೊಲೆ ಮಾಡಿರುವ ಹಾಡುಹಗಲೇ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿದೆ.
ಬಾಗಲಕುಂಟೆಯ 8ನೇ ಮೈಲಿಯ ಸಂದರ್ಯ ಪಿಯು ಕಾಲೇಜಿನ ಶೌಚಾಲಯದಲ್ಲಿ ಬೆಳಿಗ್ಗೆ 8.30ರ ವೇಳೆ ಸಹಪಾಠಿಯನ್ನು ಪಿಯುಸಿ ವಿದ್ಯಾರ್ಥಿಯೊಬ್ಬ ಹಾಡುಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದು ಈ ಕೃತ್ಯದಿಂದ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದು ಪೋಷಕರಲ್ಲಿ ಆತಂಕ ಸೃಷ್ಠಿಯಾಗಿದೆ.
ಸೌಂದರ್ಯ ಕಾಲೇಜಿನಲ್ಲಿ 2ನೇ ವರ್ಷದ ಪಿಯುಸಿ (ವಾಣಿಜ್ಯ) ಓದುತ್ತಿದ್ದ ದಯಾಸಾಗರ್ (18) ಕೊಲೆಯಾಗಿದ್ದು, ಕೃತ್ಯವೆಸಗಿದ ಆತನ ಸಹಪಾಠಿ ರಕ್ಷಿತ್ (18)ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿ ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಮಂಜುನಾಥ ನಗರದ ದಯಾಸಾಗರ್, ಬೆಳಿಗ್ಗೆ ಕಾಲೇಜಿಗೆ ಎಂದಿನಂತೆ ಬಂದಿದ್ದು, ಶೌಚಾಲಯಕ್ಕೆ ಹೋಗಿದ್ದಾನೆ. ಆತನನ್ನು ಹಿಂಬಾಲಿಸಿಕೊಂಡು ರಕ್ಷಿತ್ ಹಾಗೂ ಅಪ್ರಾಪ್ತ ವಿದ್ಯಾರ್ಥಿ ಹೋಗಿದ್ದು, ಪ್ರೀತಿಸುವ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದಾರೆ.
ಜಗಳದಿಂದ ಆಕ್ರೋಶಗೊಂಡ ದಯಾಸಾಗರ್, ರಕ್ಷಿತ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ರೊಚ್ಚಿಗದ್ದ ರಕ್ಷಿತ್, ಚಾಕುವಿನಿಂದ ಆತನ ಕುತ್ತಿಗೆಗೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ದಯಾಸಾಗರ್‍ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಚಾಕು ಕುತ್ತಿಗೆಯ ನರದ ಆಳಕ್ಕಿಳಿದಿದ್ದರಿಂದ ದಯಾಸಾಗರ್ ಮೃತಪಟ್ಟಿದ್ದಾನೆ. ಅವರ ತಂದೆ ಮಂಜುನಾಥ್ ಅದೇ ಕಾಲೇಜಿನಲ್ಲಿ ವಾಹನ ಚಾಲಕರಾಗಿದ್ದಾರೆ. ರಕ್ಷಿತ್ ಚಿಕ್ಕಸಂದ್ರದವನಾಗಿದ್ದಾನೆ ಎಂದು ಡಿಸಿಪಿ ಚೇತನ್‍ಸಿಂಗ್ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡುತ್ತಿದ್ದಾನೆ ಎಂದು ಆರೋಪಿ ರಕ್ಷಿತ್ ಹಲವು ಬಾರಿ ಗುಂಪು ಕಟ್ಟಿಕೊಂಡು ದಯಾಸಾಗರ್‍ಗೆ ಎಚ್ಚರಿಕೆ ನೀಡಿದ್ದ ಆದರೂ ದಯಾಸಾಗರ್ ವರ್ತನೆ ಸರಿಯಾಗದಿದ್ದರಿಂದ ಈ ಕೃತ್ಯ ನಡೆದಿದ್ದು ರಕ್ಷಿತ್ ಕೊಲೆ ಮಾಡುವ ಉದ್ದೇಶವಿರಲಿಲ್ಲ ತನ್ನ ಮೇಲೆ ಹಲ್ಲೆಗೆ ಮುಂದಾಗಿದ್ದರಿಂದ ಕೋಪದ ಭರದಲ್ಲಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ ಕೊಲೆ ಕೃತ್ಯ ನಡೆದಿರುವ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸ್ ಇನ್ಸ್‍ಪೆಕ್ಟರ್ ಶಿವುಸ್ವಾಮಿ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
