ಹಿರಿಯೂರು :
ಇಂದಿನ ಮಕ್ಕಳು ಅಗಾದ ಪ್ರತಿಭೆ ಹೊಂದಿದ್ದು, ಮಕ್ಕಳ ಕಲ್ಪನೆ ಹಾಗೂ ಬುದ್ಧಿಶಕ್ತಿ ಕೌಶಲ್ಯ ಅಚ್ಚರಿ ಮೂಡಿಸುವಂತಹುದು. ಈ ಮಕ್ಕಳಿಗೆ ಪೋಷಕರು, ಶಿಕ್ಷಕರು ಪ್ರೋತ್ಸಾಹಿಸಿದಲ್ಲಿ ಎಂತಹ ಅದ್ಭುತಗಳನ್ನಾದರೂ ಇವರು ಸೃಷ್ಠಿಸಲು ಸಾಧ್ಯ ಎಂಬುದಾಗಿ ಮೋಕ್ಷಗುಂಡಂ ವಿದ್ಯಾಸಂಸ್ಥೆಯ ಅಧ್ಯಕ್ಷ ಜಗದೀಶ್ದರೇದಾರ್ ಹೇಳಿದರು.
ನಗರದ ಮೋಕ್ಷಗುಂಡಂ ವಿದ್ಯಾಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಜ್ಞಾನ-ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ವಸ್ತುಪ್ರದರ್ಶನ ಕಾರ್ಯಕ್ರಮ ಮಕ್ಕಳ ಪೋಷಕರಿಗೆ ಹಾಗೂ ನಮ್ಮ ವಿದ್ಯಾಸಂಸ್ಥೆಯ ಶಿಕ್ಷಕರುಗಳಿಗೆ ತುಂಬಾ ಮೆಚ್ಚುಗೆಯಾಗಿದ್ದು, ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದರು.ಈ ಕಾರ್ಯಕ್ರಮದಲ್ಲಿ ರೋಟರಿಸಂಸ್ಥೆ ಅಧ್ಯಕ್ಷ ಎಂ.ಎಸ್.ರಾಘವೇಂದ್ರ, ಕಾರ್ಯದರ್ಶಿ ವೆಂಕಟೇಶ್, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಆರ್.ವೀರಭದ್ರಯ್ಯ, ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರುಗಳಾದ ಎಚ್.ಎಂ.ಬಸವರಾಜ್, ಎಂ.ಬಸವರಾಜಪ್ಪ, ಬಿ.ವಿ.ಸೂರ್ಯಪ್ರಕಾಶ್, ಮುಖ್ಯ ಶಿಕ್ಷಕರಾದ ಜಿ.ತಿಪ್ಪೇಸ್ವಾಮಿ ಹಾಗೂ ಮಕ್ಕಳ ಪೋಷಕರು ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ