ದೊಡ್ಡೇರಿ
ವಿದ್ಯಾರ್ಥಿಗಳು ಶಾಲಾಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶಿಕ್ಷಕರ ಸಲಹೆ ಸೂಚನೆ ಪಡೆದು ಪ್ರಬುದ್ದತೆಯನ್ನು ಬೆಳೆಸಿಕೊಂಡಾಗ ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುತ್ತದೆ ಎಂದು ಜಿ.ಪಂ.ಸದಸ್ಯ ಚೌಡಪ್ಪ ತಿಳಿಸಿದರು, ಅವರು ಮಧುಗಿರಿ ತಾಲ್ಲೂಕು, ದೊಡ್ಡೇರಿ ಗ್ರಾಮದದಲ್ಲಿ ಆಯೋಜಿಸಿದ್ದ 2019-20 ನೆ ಸಾಲಿನ ಶಾಲಾ ವಾರ್ಷಿಕೊತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ದ್ಯೇಯ ಹೊಂದಿರುವ ಶಿಕ್ಷಕರು ಒಳ್ಳೆಯ ಪ್ರಜೆಗಳನ್ನು ರೂಪಿಸಿದಾಗ ತನ್ನದೆ ವಿಷ್ಠತೆ ರೂಪಿಸಿದಂತಾಗುತ್ತದೆ.
ತನ್ನ ನೈತಿಕತೆ ಮೀರಿಸಿ ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಜ್ಞಾನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಶಿಕ್ಷಣ ಸಮಾನ್ಯ ಜ್ಞಾನವನ್ನು ರೂಪಿಸುವ ಸರ್ಕಾರಿ ಶಾಲೆಗಳು ಮುಖ್ಯವಾಗಿವೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸಬಹುದು.
ಸರ್ಕಾರಿ ಶಾಲೆಯೆಂದು ಪೋಷಕ ಬಂಧುಗಳಲ್ಲಿ ಕೀಳುಭಾವನೆ ಇರಬಾರದು. ಅಬ್ದುಲ್ ಕಲಾಮ್ , ಪಂಡಿತ್ ಜವಹಾರಲಾಲ್ ನೆಹರು, ಅಂಬೇಡ್ಕರ್ ಇಂತಹ ಮಹನೀಯರು ಸರ್ಕಾರಿ ಶಾಲೆಯಲ್ಲಿಯೆ ಓದಿ ರಾಷ್ಟ್ರಾವ್ಯಾಪಿ ಜನಮನ್ನಣೆಯಂತಹ ಹೆಸರುಗಳಿಸಿರುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಮತ್ತು ಟಿ.ವಿ ಗಳನ್ನು ಪರೀಕ್ಷೆಗಳು ಮುಗಿಯುವ ತನಕ ನೀಡಬಾರು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ತಾ.ಪಂ. ಸದಸ್ಯ ಪ್ರಸನ್ನಕುಮಾರ್, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಾಜಣ್ಣ, ಮುಖ್ಯೋಪಾಧ್ಯಾಯ ನರಸಪ್ಪ, ಸಹಶಿಕ್ಷಕರಾದ ಪಾಪಣ್ಣ, ಗಾಯತ್ರಿ, ಅನಿತಾ, ಸೌಭಾಗ್ಯಮ್ಮ, ಲಕ್ಷ್ಮಮ್ಮ, ವಿಜಯಲಕ್ಷ್ಮೀ, ಎಸ್.ಡಿ.ಎಂ.ಸಿ ಸದಸ್ಯರಾದ ಕೆಂಚಪ್ಪ, ಆಶಾ, ಚಂದ್ರಶೇಖರಾರಾಧ್ಯ, ನಟರಾಜು, ಮುಖಂಡ ಡಿ.ಎಂ.ದಾಸಪ್ಪ ಶಿಕ್ಷಣ ಸಂಯೋಜಕ ಪ್ರಾಣೇಶ್, ಬಿ.ಆರ್.ಸಿ ಆನಂದಕುಮಾರ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
