ಕಾರ್ಮಿಕರನ್ನು ಭೇಟಿ ಮಾಡಿದ ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್

ಬಳ್ಳಾರಿ:

      ನಿನ್ನೆ ಬಹಿರಂಗ ಪ್ರಚಾರ ಮುಕ್ತಾಯವಾದ ಹಿನ್ನಲೆಯಲ್ಲಿ, ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್‍ಅವರುವಿಮ್ಸ್ ಒಳಗೊಂಡಂತೆ ಜಾನೆಕುಂಟೆ, ಹರಗಿನಡೋಣಿವಿವಿದೆಡೆತೆರಳಿ ಕಾರ್ಮಿಕರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದರು. ಈ ಸಂದರ್ಭಲ್ಲಿ ಮಾತನಾಡುತ್ತಾ“ಗುತ್ತಿಗೆಕಾರ್ಮಿಕ ಪದ್ಧತಿಯನ್ನುಜಾರಿಗೆತಂದಿರುವಕಾಂಗ್ರೆಸ್, ಬಿಜೆಪಿ ಪಕ್ಷಗಳುಅತ್ಯಂತಕಾರ್ಮಿಕ ವಿರೋಧಿ ಸರ್ಕಾರಗಳಾಗಿವೆ.

     ಕನಿಷ್ಠ ವೇತನ ರೂ.21,000ಕ್ಕಾಗಿ ನಮ್ಮಕಾರ್ಮಿಕ ಸಂಘಟನೆ ಎಐಯುಟಿಯುಸಿ ನಿರಂತರವಾಗಿಧ್ವನಿ ಎತ್ತುತ್ತಿದೆ. ಆದರೆಯಾವ ಸರ್ಕಾರಕ್ಕೂಕಾರ್ಮಿಕರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಮೋದಿ ಸರ್ಕಾರ 44 ಕಾರ್ಮಿಕರ ಪರವಾಗಿದ್ದಕಾನೂನನ್ನು ಮಾಲಿಕರ ಹಿತಾಸಕ್ತಿಯದೃಷ್ಟಿಯಿಂದತಿದ್ದುಪಡಿ ಮಾಡಿದೆ.ಮೋದಿ ಸರ್ಕಾರದಜಿಎಸ್‍ಟಿ, ನೋಟು ಬ್ಯಾನ್‍ನಿಂದದೇಶದಲ್ಲಿ50 ಲಕ್ಷಕ್ಕೂಅಧಿಕಕಾರ್ಮಿಕರು ಕೆಲಸ ಕಳೆದು ಕೊಂಡಿದ್ದಾರೆ.

       ಮುಖೇಶ್ ಅಂಬಾನಿಗೆ ಅನಕೂಲ ಮಾಡುವದೃಷ್ಟಿಯಿಂದ, ಸಾರ್ವಜನಿಕ ಸಂಸ್ಥೆ ಬಿಎಸ್‍ಎನ್‍ಎಲ್ ಮುಚ್ಚುವ ಸ್ಥಿತಿಗೆ ಮೋದಿ ಸರ್ಕಾರತಂದಿದೆ.ಬಿಎಸ್‍ಎನ್‍ಎಲ್‍ನ 1.5 ಲಕ್ಷಕಾರ್ಮಿಕರ ಸ್ಥಿತಿ ಡೋಲಾಯಮಾನವಾಗಿದೆ.ಆದ್ದರಿಂದಕಾರ್ಮಿಕ ವಿರೋಧಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ.ಕಾರ್ಮಿಕರಧ್ವನಿಯಾಗಿರುವಎಸ್.ಯು.ಸಿ.ಐ (ಸಿ) ಪಕ್ಷದಟ್ರ್ಯಾಕ್ಟರ್‍ಗುರ್ತಿಗೆ ಮತ ಹಾಕಬೇಕೆಂದುಮನವಿ ಮಾಡಿದರು.ಎಸ್.ಯು.ಸಿ.ಐ (ಸಿ) ಪಕ್ಷದಜಿಲ್ಲಾ ಸಮಿತಿಯ ಶಾಂತಾ.ಎ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link