ಗಣೇಶ ವಿಸರ್ಜನೆ : ಜಿಲ್ಲಾಡಳಿತ ಮತ್ತು ತಾಲ್ಲೂಕು ಸೂಕ್ತ ಮುನ್ನಚ್ಚರಿಕೆ ಅಗತ್ಯ

ತಿಪಟೂರು :
     ರಾಜ್ಯದ ಹಲವಾರು ಉತ್ಸವಗಳು ಒಂದು ತೂಕವಾದರೆ ತಿಪಟೂರಿನ ಗಣೇಶನ ಉತ್ಸವಕ್ಕೆ ತನ್ನದೇ ಆದ ತೂಕವನ್ನು ಹೊಂದಿದ್ದ ಇದೇ ನವೆಂಬರ್ 23-24ರಂದು ಶ್ರೀ ಸತ್ಯಗಣಪತಿಯ 90ನೇ ವರ್ಷದ ವಿರ್ಜನಾಮಹೋತ್ಸವಕ್ಕೆ ತಿಪಟೂರು ನಗರ ಸಿದ್ದವಾಗಿದ್ದು ತಾಲ್ಲೂಕು ಆಡಳಿತ ಕೆಲವು ಮುಂಜಾಗೃತಾ ಕ್ರಮಗಳನ್ನು ವಹಿಸುವುದು ಬಹು ಮುಖ್ಯವಾಗಿದೆ.
     ವಿಶ್ವದಾದ್ಯಂತ ಇರುವ ಕಲ್ಪತರು ನಾಡಿನ ಮನೆಮಕ್ಕಳು, ಗೆಳೆಯರು, ಹಿತೈಷಿಗಳು ಈ ಗಣೇಶನ ಉತ್ವವನ್ನು ಕಾಯ್ದು ಕುಳಿತಿದ್ದು ಯಾವಾಗ ಗಣೇಶನ ವಿಸರ್ಜನೆ ಎಂದು ಕಾಯುತ್ತಾ ಕುಳಿತಿರುತ್ತಾರೆ. ಇವರೆಲ್ಲರನ್ನು ಸ್ವಾಗತಿಸಲು ಈ ಬಾರಿ ಗಣೇಶನ ಉತ್ಸವವು ಈ ಶನಿವಾರ ಮತ್ತು ಭಾನುವಾರ ನಡೆಯುತ್ತಿದ್ದು ಜನರು ಈಗಾಗಲೇ ತಿಪಟೂರಿನತ್ತ ಮುಖಮಾಡಿದ್ದು ನಗರದ ತುಂಬೆಲ್ಲಾ ವಿವಿಧ ಬಗೆಯ ಜಗಮಗಿಸುವ  ವಿದ್ಯುತ್ ದೀಪಾಲಂಕಾರ, ವಿವಿಧ ರೀತಿಯ ಬಾವುಟಗಳು, ಶುಭಕೋರುವವರ ಬ್ಯಾನರ್‍ಗಳಿಂದ ಸಕಲ ರೀತಿಯಲ್ಲೂ ಸರ್ವಾಲಂಕೃತಗೊಂಡು ಮಹೋನ್ನತ ಸನ್ನಿವೇಶವನ್ನು ಕಣ್‍ತುಂಬಿಕೊಳ್ಳಲು ಭಕ್ತಾದಿಗಳು ಕಾತುರದಿಂದ ಕಾಯುತ್ತಿದ್ದಾರೆ.
      ಸ್ವತಂತ್ರ್ಯಪೂರ್ವ ಭಾರತೀಯರನ್ನೆಲ್ಲಾ ಒಟ್ಟುಗೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ಕರೆಕೊಟ್ಟಿದ್ದರಿಂದ ಸ್ವಾತಂತ್ರಪೂರ್ವ 1929ರಲ್ಲಿ ತಿಪಟೂರು ನಗರದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ತಿಮ್ಮಪ್ಪ ಎಂಬಬವರು ಚಾಲನೆ ನೀಡಿದರು. ನಂತರ ದಾಸಪ್ಪ, ಎಂ.ಎಸ್.ಶಿವನಂಜಪ್ಪ, ರಾಜಾರಾಮರಾಯರು, ಗಣಪತಯ್ಯ, ಎಸ್.ಶಿವಪ್ಪ, ಹೆಬ್ಬೂರು ಶಾಮಯ್ಯ, ಸಿಂಗ್ರಿ ಪದ್ದಕ್ಕ, ಬಸೆಟ್ರು ನಾರಾಯಣಪ್ಪ ಸೇರಿದಂತೆ ಮತ್ತಿತರರ ಹಿರಿಯರು ಗಣೇಶೋತ್ವಕ್ಕೆ ಮತ್ತಷ್ಟು ಮೆರೆಗು ನೀಡಿದರು.
      ನಂತರದ ದಿನಗಳಲ್ಲಿ ಮಾಜಿ ಶಾಸಕರಾಗಿದ್ದ ಚಂದ್ರಣ್ಣ ಅವರು ಸತ್ಯ ಗಣಪತಿ ಸೇವಾಸ ಟ್ರಸ್ಟ್‍ನ ಅಧ್ಯಕ್ಷರಾಗಿ ಸತ್ಯಗಣಪತಿ ಆಸ್ಥಾನ ಮಂಟಪ ನಿರ್ಮಿಸಲು ಸರಕಾರದ ಜಾಗವನ್ನು ಮಂಜೂರು ಮಾಡಿಸಿ ಸತ್ಯಗಣಪತಿಗೆ ಶಾಶ್ವತವಾದ ಆಸ್ಥಾನ ಮಂಟಪ ನಿರ್ಮಾಣಮಾಡಲು ಸಮಾನಮಸ್ಕರ ಬಳಿ ಚರ್ಚಿಸಿ ಟ್ರಸ್ಟ್‍ನ ಬೆಳವಣಿಗೆಗೆ ಪ್ರಮುಖ ರುವಾರಿಯಾದರು. ಪ್ರಸ್ತುತ ಬಿ.ಸಿ.ರವಿಶಂಕರ್ ಅಧ್ಯಕ್ಷತೆಯಲ್ಲಿ ಸಂಪ್ರದಾಯದ ಪ್ರಕಾರ ಪೂಜೆ ಯಲ್ಲದೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
 
       ಗಣೇಶ ಚತುರ್ಥಿಯಂದು ಸ್ಥಾಪಿಸಿದ ಶ್ರೀ ಸತ್ಯಗಣಪತಿ ಮತ್ತು ಗೌರಮ್ಮನನ್ನು ಇಲ್ಲಿಯವರೆಗೂ ತ್ರಿಕಾಲ ಪೂಜೆ, ಹೋಮ ಹವನ, ಹರಿಕಥೆ, ಭಜನೆ, ಸಾಂಸ್ಕøತಿಕ, ಸಂಕಷ್ಟ ಗಣಪತಿವೃತ, ಸತ್ಯನಾರಾಯಣ ಪೂಜೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಕೊನೆಯದಾಗಿ ಗಣಪತಿ ಜಾತ್ರಮಹೋತ್ಸವದಲ್ಲಿ ತುಂಬಿತುಳುಕುತ್ತಿರುವ ಅಮಾನಿಕೆರೆಯಲ್ಲಿ ತೆಪ್ಪೋತ್ಸವ ಮಾಡುವ ಮೂಲಕ ಇದೇ ನವೆಂಬರ್ 24ರ ರಾತ್ರಿ ವಿಸರ್ಜಿಸಲಾಗುತ್ತಿದೆ.
89 ವರ್ಷದ ಇತಿಹಾಸಕ್ಕೆ ಕಪ್ಪುಚುಕ್ಕೆ :
      ಗಣಪತಿ ಜಾತ್ರೆಯಲ್ಲಿ ಪಟಾಕಿ ಮುಂಜಾಗ್ರತಾ ಕ್ರಮಕ್ಕೆ ಅವಶ್ಯ: ತಿಪಟೂರಿನಲ್ಲಿ ಅದ್ದೂರಿ ಗಣಪತಿ ಜಾತ್ರೆ 23 ಮತ್ತು 24 ರಂದು ನಡೆಯುತ್ತಿದ್ದು, ಜಾತ್ರೆಯಲ್ಲಿ ಪಟಾಕಿ ಸಿಡಿಸುವಾಗ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕೆಕು, ಕಳೆದ ಬಾರಿಯ ಜಾತ್ರೆಯಲ್ಲಿ ಸಮರ್ಪಕ ಮುಂಜಾಗೃತ ಕ್ರಮಗಳಿಲ್ಲದೆ ಅನಾಹುತವಾಗಿದ್ದು ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ ಪಟಾಕಿದ ದುರಂತದಲ್ಲಿ ಮೃತಪಟ್ಟಿದ್ದಳು.
ಭಕ್ತರ ಮೇಲಿದೆ ಅಪಾರ ಜವಾಬ್ದಾರಿ:
      ಮೊನ್ನೆ ನಡೆದ ಶಾಂತಿಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದಂತೆ ಇಂತಹ ಕಾರ್ಯಕ್ರಮಕ್ಕೆ ಸಾರ್ವಜನಿಕರ ಜವಾಬ್ದಾರಿಯು ಹೆಚ್ಚಿದ್ದು ನಮ್ಮ ಜೊತೆ ಕೈಜೋಡಿಸುವುದಲ್ಲದೇ ತುಂಬಾ ಎಚ್ಚರಿಕೆಯಿಂದ ಇರಬೇಕು. ಇಂತಹ ಜನಸಂದಣಿಯ ಕಾರ್ಯಕ್ರಮಗಳಲ್ಲಿ ಪರಸ್ಥಳದಿಂದ ಬಂದ ಕಳ್ಳರು ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತಾರೆ. ನೀವು ಜೋಪಾನವಾಗಿದ್ದು ಹೆಚ್ಚುಕಡಿಮೆಯಾದ ಸಂದರ್ಭದಲ್ಲಿ ತಕ್ಷಣ ಆರಕ್ಷಕರಿಗೆ ತಿಳಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಸ್ವಚ್ಚತೆ ಇರುವಕಡೆ ಭಗವಂತ ನೆಲೆಸುತ್ತಾನೆ:
       ನಗರಸಭೆಯ ಪೌರಕಾರ್ಮಿಕರು ಹಗಲಿರುಳೆನ್ನದೇ ನಗರವನ್ನು ಸ್ವಚ್ಚಗೊಳಿಸುವತ್ತ ಗಮನಹರಿಸಿದ್ದಾರೆ. ಇವರೊಟ್ಟಿಗೆ ಸಾರ್ವಜನಿಕರು, ವ್ಯಾಪಾರಿಗಳು ತಮ್ಮ ಮನೆ, ಮಳಿಗೆಗಳನ್ನು ಶೃಂಗರಾಮಾಡಿ ಮದವಣಗಿತ್ತಿಯಂತೆ ನಗರವನ್ನು ಶೃಂಗರಿಸಿದ್ದಾರೆ, ಇಲ್ಲಿ ಬೆಸ್ಕಾಂನವರ ಕಾರ್ಯವೂಕೂಡ ಶ್ಲಾಘನೀಯವಾದುದು. ಇನ್ನೂ ನಗರದ ತುಂಬೆಲ್ಲಾ ಅಲ್ಲಲ್ಲಿ ಪ್ರಸಾದ ವಿತರಣೆಯು ನಡೆಯುತ್ತಿರುತ್ತದೆ ಅಂತಹ ಕಡೆ ಕಸವನ್ನು ಹಾಕಲು ಇಟ್ಟಿರುವ ಕಸದಬುಟ್ಟಿಗಳನ್ನು ಬಳಸಿಕೊಂಡು ಅಲ್ಲಿಯೇ ಕಸವನ್ನು ಹಾಕಿ ಪ್ರಸಾದವನ್ನು ತಿಂದು ತಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯು ಸಹ ಭಕ್ತರದ್ದಾಗಿರುತ್ತದೆ ಎಂದು ನಗರಸಭೆಯ ಅಧಿಕಾರಿಗಳು ಭಕ್ತರಿಗೆ ಕರೆನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap