ತಿಪಟೂರು
ಬಂದೂಕು ತರಬೇತಿ ಪಡೆದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸದಾ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ವಿ.ಗೋಪಿನಾಥ್ ತಿಳಿಸಿದರು.
ತಾಲ್ಲೂಕಿನ ಕಿಬ್ಬನಹಳ್ಳಿಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ನಡೆದ 56 ನೇ ನಾಗರೀಕ ಬಂದೂಕು ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಭಾಗವಹಿಸಿ ತರಬೇತಿಯನ್ನು ಪಡೆದ ಅರ್ಹ ಅಭ್ಯರ್ಥಿಗಳಿಗೆ ಅರ್ಹತಾ ಪತ್ರ ನೀಡಿ ಮಾತನಾಡಿದ ಅವರು, ಬಂದೂಕು ತರಬೇತಿ ಪಡೆದ ನಂತರ ಬಂದೂಕು ಹೊಂದಿರುವವರು ಸುರಕ್ಷತೆ ಕಾಪಾಡಬೇಕು ಹಾಗೂ ಪ್ರತಿವರ್ಷ ನವೀಕರಣವನ್ನು ಮಾಡಿಸಬೇಕು ಎಂದರು.
ನ.9 ರಿಂದ 19 ರವರೆಗೆ ನಡೆದ ನಾಗರೀಕ ಬಂದೂಕು ಶಿಬಿರವನ್ನು ಏರ್ಪಡಿಸಲಾಗಿತ್ತು. 86ಪುರುಷರು, 4 ಜನ ಮಹಿಳೆಯರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು, ಇದೇ ಸಂದರ್ಭದಲ್ಲಿ ತಿಪಟೂರು ನಗರದ ದೀಪಕ್ ಜಿ.ಪಿ.ಯವರಿಗೆ ಪ್ರಥಮ ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರ ಪೋ.ನಿ ಪ್ರಶಾಂತ್ ಕೆ.ಎಸ್, ಉ.ಅ ಮಂಜುನಾಥ್, ಡಿ.ವೈಎಸ್.ಪಿ ವೇಣುಗೋಪಾಲ್, ಸಿ.ಪಿ.ಐ ಕೃಷ್ಣಂರಾಜು, ಎಸ್.ಐ ಕೃಷ್ಣಕುಮಾರ್ ಹಾಗೂ ಸಾರ್ವಜನಿಕರು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ