ಹರಪನಹಳ್ಳಿ
ಸರ್ಕಾರಿ ಶಾಲೆಯ ಸ್ವಚ್ಚತೆ ಬರಿ ಶಿಕ್ಷರು ಮಾಡಿದರೆ ಸಾಲದು ಗ್ರಾಮದ ಸಹಕಾರವು ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ತಾಲೂಕಿನ ಅನಂತನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಶಾಲೆಯ ಸುತ್ತ ಮುತ್ತ ಸ್ವಚ್ಚತೆ ಇಲ್ಲ ಶಾಲೆಗೆ ಇರುವ ಶೌಚಲಯಬಿದ್ದು ಹೋಗಿದ್ದು ಶೌಚಲಯದ ತುಂಬ ಬರಿ ಕಸದ ರಾಶಿ ಬಿದ್ದಿದೆ ಇಂತಹ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಹೇಗೆ ನೀಡುತ್ತಿರಿ ಎಂದು ಮುಖ್ಯ ಶಿಕ್ಷಕರಿಗೆ ತರಾಟೆ ತೆಗೆದುಕೋಂಡರು ಪ್ರಶ್ನೆಗೆ ಉತ್ತರಿಸಿದ ಮುಖ್ಯ ಶಿಕ್ಷಕ ಗ್ರಾಮದವರೆ ಶಾಲೆಹಿಂದೆ ಬಂದು ಶೌಚ ಮಾಡುತ್ತಾರೆ ನಾವು ಎಷ್ಟು ಹೇಳಿದರೂ ಕೇಳುವುದಿಲ್ಲ ಎಂದರು.
ತಾಲೂಕಿನ ಆಡವಿಹಳ್ಳಿ ಬಳಿ ಇರುವ ಪರ್ಲ ಪಬ್ಲಿಕ್ ಶಾಲೆಗೆ ಬೇಟಿ ನೀಡಿದ ಅವರು, ಪ್ರತಿಯೊಂದು ವಿಭಾಗದ ಪರಿಶೀಲನೆ ನಡೆಸಿದರು. ಮಕ್ಕಳ ಹಾಜರಾತಿ ಸಂಖ್ಯೆ, ಮೂಲಭೂತ ಸೌಕರ್ಯ, ಶಿಕ್ಷಣದ ಗುಣಮಟ್ಟ, ಶೌಚಾಲಯ, ಪ್ರಯೋಗ ಶಾಲೆ, ಸ್ಮಾರ್ಟ್ ಕ್ಲಾಸ್, ಶಿಕ್ಷಕರ ಕೊರತೆ, ಗಣಕಯಂತ್ರ, ಕಾಂಪೌಂಡ್, ಆಟದ ಮೈದಾನ, ವಾಹನ ಸೌಕರ್ಯ, ತರಗತಿಗಳಿಗೂ ಬೇಟಿ ನೀಡಿ ಮಾತನಾಡಿದ ಅವರು, ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.
ಪಟ್ಟಣದ ಹರಿಹರ ಅಶ್ರಯ ಕ್ಯಾಂಪಿನ ಸರ್ಕಾರಿ ಶಾಲೆ. ಅನಂತನಹಳ್ಳಿ ಬಳಿ ಇರುವ ಆದರ್ಶ ವಿದ್ಯಾಲಯ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಪ್ರೌಡ ಶಾಲೆಗೆ ಬೇಟಿ ನೀಡಿ ಪರಿಶಿಲನೆ ಮಾಡಿದರು.ಸಿವಿಲ್ ಕಿರಿಯ ನ್ಯಾಯಾಧೀಶರಾದ ಬಿ.ಜಿ.ಶೋಭ, ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ವಕೀಲರುಗಳಾದ ಮತ್ತಿಹಳ್ಳಿ ಅಜ್ಜಣ್ಣ, ಬಿ.ರೇವಣಗೌಡ, ಕೆ.ಬಸವರಾಜ, ಚಿಗಟೇರಿ ವೀರಣ್ಣ, ಕೆ. ಪ್ರಕಾಶ, ಬಿ.ಸಿದ್ದೇಶ. ಮಂಜುನಾಥ, ಪರ್ಲ ಪಬ್ಲಿಕ್ ಶಾಲೆಯ ಅದ್ಯಕ್ಷ ಕೆ.ವಿರೂಪಾಕ್ಷ, ಸದಸ್ಯರುಗಳಾದ ಶಶಿಧರ್ ಪೂಜಾರ್, ಪಿ.ಮಂಜುನಾಥ, ಉಲ್ಲತ್ತಿ ಬಸವರಾಜ, ಮಾಲತೇಶ ಚೆಳಿಗೇರಿ, ಚೆನ್ನೇಶ ಬಣಕಾರ್, ಪ್ರಾಂಶು ಪಾಲರಾದ ಸುಮಾ ನಾಗೇಶ ಉಪ್ಪೀನ. ನಾಗೇಶ ಉಪ್ಪೀನ, ಗಿರೀಶ, ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಪ್ರೌಡ ಶಾಲೆಯ ಪ್ರಾಂಶುಪಾಲರಾದ ವಿಶ್ವರಾಧ್ಯ,ಹಾಗೂ ಇತರರು ಹಾಜರಿದ್ದರು.