ಬೆಂಗಳೂರು
ಅಪಾರ ಪ್ರಮಾಣದ ಹಣ ಚಿನ್ನಾಭರಣ ಸಿಕ್ಕಿರುವ ಭ್ರಷ್ಟ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಟಿ.ಎಲ್. ಸ್ವಾಮಿ ಮಂಗಳವಾರ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜಾರಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಲಘು ಹೃದಯಾಘಾತವಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮಿಗೆ ಮುಂದೆ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಅನಾರೋಗ್ಯ ಕಾರಣ ಹೇಳಿ ಇನ್ನೆರಡು ದಿನ ಫೋರ್ಟಿಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವ ಸಾಧ್ಯತೆ ಇದ್ದು, ಸ್ವಾಮಿ ಮೇಲೆ ಎಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
ಎಸಿಬಿ ದಾಳಿಗೊಳಗಾದ ಅಧಿಕಾರಿ ಸ್ವಾಮಿಯೇ ಕೆಐಎಡಿಬಿಯ ಉಳಿದ ಇಂಜಿನಿಯರ್‍ಗಳಿಗೆ ಬಾಸ್ ಆಗಿದ್ದರು ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ ಕೆಐಎಡಿಬಿಯಲ್ಲಿ ಎಲ್ಲವೂ ಟಿ.ಆರ್. ಸ್ವಾಮಿ ಅದೇಶದಂತೆಯೇ ನಡೆಯುತ್ತಿತ್ತು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವಿಶೇಷ ಆಯುಕ್ತರ ನಂತರದ ಸ್ಥಾನ ಟಿ.ಆರ್.ಸ್ವಾಮಿಯದ್ದಾಗಿದ್ದು, ಇವರು ಹೇಳಿದಂತೆಯೇ ನಡೆಯುತ್ತಿತ್ತು ಎನ್ನಲಾಗಿದೆ.ಸ್ವಾಮಿಯು ಮುಖ್ಯ ಅಭಿವೃದ್ಧಿ ಅಧಿಕಾರಿ ಹಾಗೂ ಮುಖ್ಯ ಎಂಜಿನಿಯರ್ ಕೂಡ ಆದ್ದರಿಂದ ಮಂಡಳಿಯ ಉಳಿದ ಎಲ್ಲ ಎಂಜಿನಿಯರ್‍ಗಳು ಸ್ವಾಮಿಗೆ ಸಹಕಾರ ನೀಡಲೇಬೇಕಿತ್ತಂತೆ. ಸ್ವಾಮಿ ಅಣತಿಯಂತೆ ಉಳಿದ ಎಂಜಿನಿಯರ್‍ಗಳು ಸಾಕಷ್ಟು ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆ ಎಂಜಿನಿಯರ್‍ಗಳ ಮೇಲೆ ಎಸಿಬಿ ಕಣ್ಣಿಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ