ಕೇಬಲ್ ಪ್ರಸಾರ ಹಾಗೂ ಚುನಾವಣಾ ಪ್ರಚಾರ ಸಾಮಗ್ರಿಗಳಿಗೆ ಪ್ರಮಾಣಪತ್ರ ಪಡೆಯಿರಿ

ಹಾವೇರಿ

       ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಹಿನ್ನಲೆಯಲ್ಲಿ ಪಾವತಿ ಸುದ್ದಿ ಹಾಗೂ ಆಯೋಗದ ಮಾರ್ಗಸೂಚಿ ಅನುಸಾರ ಸಾಮಾಜಿಕ ಜಾಲತಾಣ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿಗಾವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು ಎಸ್ ಯೋಗೇಶ್ವರ ಅವರು ಸೂಚನೆ ನೀಡಿದ್ದಾರೆ.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮಾದರಿ ನೀತಿ ಸಂಹಿತೆ ಅನುಷ್ಟಾನ ಹಿನ್ನಲೆಯಲ್ಲಿ ರಚಿಸಲಾದ ಮಾಧ್ಯಮ ಪ್ರಮಾಣೀಕರಣ ಹಾಗೂ ನಿರ್ವಹಣಾ ಸಮಿತಿ, ಎಂಸಿಸಿ, ಸಾಮಾಜಿಕ ಜಾಲತಾಣ ನಿಗಾ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದ ಅವರುಮ ಪಾವತಿ ಸುದ್ಧಿ, ಪ್ರಮಾಣಿಕರಿಸದ ಆಡಿಯೋ, ವಿಡಿಯೋಗಳ ಪ್ರಸಾರವಾದರೆ ಸಂಬಂಧಿಸಿದ ಸಮಿತಿಯ ಗಮನಕ್ಕೆ ತರಲು ಸಲಹೆ ನೀಡಿದರು.

       ಕೇಬಲ್ ಚಾನಲ್‍ಗಳಲ್ಲಿ ಯಾವುದೇ ರಾಜಕೀಯ ಸುದ್ದಿಗಳು, ವಿಡಿಯೋಗಳು, ಸ್ಕ್ರೋಲಿಂಗ್ ಅಥವಾ ಜಾಹೀರಾತುಗಳನ್ನು ಪ್ರಸಾರ ಮಾಡುವ ಮುನ್ನ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಮುಂದೆ ವಿಡಿಯೋ ಹಾಗೂ ಜಾಹೀರಾತು ತುಣುಕುಗಳನ್ನು ಸಲ್ಲಿಸಿ ಪ್ರಮಾಣಪತ್ರ ಪಡೆಯಬೇಕಾಗಿದೆ. ಆಡಿಯೋ ಅಥವಾ ವಿಡಿಯೋ ಮುದ್ರಿತ ಪ್ರಸಾರದ ಮುನ್ನ ಸಮಿತಿಯಿಂದ ಪರಿಶೀಲನೆಗೆ ಒಪ್ಪಿಸಿ ಅನುಮತಿ ಪಡೆಯಬೇಕು. ಅನುಮತಿ ಪಡೆದ ಪ್ರಚಾರ ಸಾಮಗ್ರಿಗಳನ್ನು ಮಾತ್ರ ಪ್ರಚಾರಕ್ಕೆ ಬಳಸಿಕೊಳ್ಳಬೇಕು ಈ ಕುರಿತು ನಿಗಾವಹಿಸಿ ಎಂದರು.

      ಒಂದೊಮ್ಮೆ ನಿಯಮ ಉಲ್ಲಂಘಿಸಿದರೆ ಕೇಬಲ್ ನೆಟ್‍ವರ್ಕ್ ಕಾಯ್ದೆ 1995 ಹಾಗೂ ಪ್ರಜಾಪ್ರಾತಿನಿಧಿಕ ಕಾಯ್ದೆ 1951ರ ಸೆಕ್ಸನ್ 127 ಅಧ್ಯಾಯ 3ರ ಭಾಗ 7ರಂತೆ ಕ್ರಮತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಮೊಬೈಲ್ ಎಸ್.ಎಂ.ಎಸ್., ಇ ಪೇಪರ್, ಯುಟ್ಯೂಬ್, ಫೇಸ್‍ಬುಕ್, ಇನ್ಸ್‍ಟ್ರಿಗ್ರಾಮ್, ಟ್ವಿಟರ್‍ಗಳಿಗೂ ಈ ನಿಯಮ ಅನ್ವಯಿಸಲಿದ್ದು, ಅಪ್‍ಲೋಡಿಗೂ ಮುನ್ನ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು, ಪ್ರಚಾರ ಸಾಮಗ್ರಿಗಳ ಮುದ್ರಣ ಹಾಗೂ ಕೇಬಲ್ ಪ್ರಸಾರ ಕುರಿತಂತೆ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದರು.

       ಸಭೆಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿ ಬಿ. ಹೆಗಡೆ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ವಿಶ್ವನಾಥ ಪಾಟೀಲ, ಉಪನ್ಯಾಸಕರಾದ ಅರವಿಂದ ಐರಣಿ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link