ಸಿರುಗುಪ್ಪ:
ನಗರದ ಕೃಷ್ಣದೇವರಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಿನ ಸಾಧನೆ ತೋರುತ್ತಿದ್ದು, ಶಿಕ್ಷಕರು ಪಠ್ಯದ ಜೊತೆಗೆ ಮಕ್ಕಳಿಗೆ ಸಾಂಸ್ಕತಿಕ ಚಟುವಟಿಕೆಗಳನ್ನು ಭೋದಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು, ತಾಲೂಕಿನಲ್ಲಿ ತಾಂತ್ರಿಕ ಶಿಕ್ಷಣ ಕಾಲೇಜು ಸೇರಿದಂತೆ ವಸತಿ ನಿಲಯಗಳನ್ನು ಮಂಜೂರು ಮಾಡಿಸಲಾಗುವುದು, ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಏಕಲವ್ಯ ವಸತಿ ಶಾಲೆಯು ಮಂಜೂರಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಮಾತನಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಭಾಷಣ, ಚಿತ್ರಕಲೆ, ಮಣ್ಣಿನಿಂದ ಮೂರ್ತಿಗಳ ತಯಾರಿಕೆ, ಧಾರ್ಮಿಕ ಪಠಣ, ರಸಪ್ರಶ್ನೆ ಸೇರಿದಂತೆ ನೃತ್ಯ, ಹಾಡುಗಾರಿಕೆ, ಯೋಗ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಕ್ಕಳು ಸ್ಪರ್ಧಿಸಿ ಉತ್ತಮ ಪ್ರತಿಭೆ ತೋರಿ ಜಿಲ್ಲಾ ಮತ್ತು ರಾಜ್ಯಮಟ್ಟದ ವರೆಗೂ ಭಾಗವಹಿಸುವ ಅವಕಾಶವಿದ್ದು, ತೀರ್ಪುಗಾರರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ನ್ಯಾಯ ನಿರ್ಣಯ ಮಾಡುವಂತೆ ತಿಳಿಸಿದರು.
ತಹಶೀಲ್ದಾರ್ ದಯಾನಂದಪಾಟೀಲ್ ಮಾತನಾಡಿ ನಮ್ಮ ಪರಂಪರೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ನೆರವಾಗಲಿದ್ದು, ಗ್ರಾಮೀಣ ಸಂಸ್ಕøತಿಯ ಪರಿಚಯ ಪಟ್ಟಣದ ವಿದ್ಯಾರ್ಥಿಗಳಿಗೆ ದೊರೆಯಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಲಕ್ಷ್ಮಿನಾಗೇಶಪ್ಪ, ನಗರಸಭೆ ಅಧ್ಯಕ್ಷೆ ಸವಿತ ಅರುಣಪ್ರತಾಪರೆಡ್ಡಿ, ರರಾವಿ ಜಿ.ಪಂ.ಸದಸ್ಯೆ ಲಕ್ಷಮ್ಮ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷ ಅರುಣಪ್ರತಾಪರೆಡ್ಡಿ, ತಾ.ಅಧ್ಯಕ್ಷ ಚೊಕ್ಕಹನುಮಂತಗೌಡ, ಕಾರ್ಯದರ್ಶಿ ದಿವಾಕರನಾರಾಯಣ, ನೌಕರರ ಸಂಘದ ಅಧ್ಯಕ್ಷ ರಾಮನಗೌಡ, ಡಾ.ಎಸ್.ಚಂದ್ರಮೌಳಿ, ಎಂ.ಸುರೇಶ್, ಎಂ.ಪಂಪಾಪತಿಗೌಡ, ಬಿ.ಈರಣ್ಣ, ಬಸವನಗೌಡ, ಬಸವರಾಜಯ್ಯ, ಅಬ್ದುಲ್ ಶುಕೂರ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲಿಗಾರ್ ವೆಂಕಟೇಶ್, ಮುಖ್ಯಗುರು ಅಂಬರೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಚಾಗಪ್ಪ, ಎಸ್.ಯೋಗಾನಂದಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯರಂಗಾರೆಡ್ಡಿ, ಜಿಲ್ಲಾ ನೋಡಲ್ ಅಧಿಕಾರಿ ಸತ್ಯನಾರಾಯಣ, ಡಯಟ್ ಉಪನ್ಯಾಸಕ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








