ಕುಣಿಗಲ್
ತಾಲ್ಲೂಕು ಶಕ್ತಿ ಕೇಂದ್ರವೇ ಆದ ತಾಲ್ಲೂಕು ದಂಡಾಧಿಕಾರಿಗಳ ಹಾಗೂ ತಹಸೀಲ್ದಾರ್ ಅವರ ತಾಲ್ಲೂಕು ಕಚೇರಿಯ ಮುಂದೆಯೇ ದೊಡ್ಡ ಗುಂಡಿಗಳು ಬಿದ್ದು ಮಳೆ ನೀರು ನಿಲ್ಲುವುದರಿಂದ ಸಣ್ಣ ಕಟ್ಟೆಯಂತೆ-ಕೆರೆಯಂತೆ ಆಗಿದ್ದರೂ ಸಹ ತಹಸೀಲ್ದಾರ್ ಅವರ ಕಣ್ಣಿಗೆ ಕಾಣುತ್ತಿಲ್ಲವೇ ? ಇದೇನ್ ತಾಲ್ಲೂಕು ಕಚೇರಿನಾ ಏನ್ ಹೇಳೋರ್ ಕೇಳೋರ್ ಇಲ್ವಾ.,. ಎಂಬ ಇತ್ಯಾಧಿ ಪದಗಳ ಪ್ರಯೋಗ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ರಸ್ತೆ ದಾಟಲು ಸಾಧ್ಯವಾಗದ ಹಿರಿಯ ನಾಗರೀಕರ ಹಾಗೂ ಸಾರ್ವಜನಿಕರ ಆರೋಪವಾಗಿದೆ.
ಕಳೆದ ಒಂದೆರಡು ತಿಂಗಳಿಂದ ಮಳೆಯಾಗುತ್ತಿದ್ದು ಇಂತಹ ಸುಮಾರು ಮಳೆ ಬಿದ್ದರೆ ಸಾಕು ಕುಣಿಗಲ್ ತಾಲ್ಲೂಕು ಶಕ್ತಿ ಕೇಂದ್ರ ಎಂದು ಕರೆಸಿಕೊಳ್ಳುವ ತಹಸೀಲ್ದಾರ್ ಕಚೇರಿ ಕರೆ ಕಟ್ಟೆಯಂತೆ ನೀರು ತುಂಬಿ ಬಿಡುತ್ತದೆ. ಇಂತಹ ಸಮಯದಲ್ಲಿ ತಾಲ್ಲೂಕಿನ ಮೂಲೆ ಮೂಲೆ ಯಿಂದ ಆಗಮಿಸುವ ಮಹಿಳೆಯರು, ಅಂಗವಿಕಲರು,ವಯಸ್ಸಾಧವರು ತಾಲ್ಲೂಕು ಕಚೇರಿಯ ಕೆಲಸಕ್ಕೆ ವಾರದ 5ದಿನ ಆಗಮಿಸಲೇ ಬೇಕಾದಂತಹ ವಾತಾವರಣ ಸರ್ವೇ ಸಾಮಾನ್ಯ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ತಮ್ಮ ತಮ್ಮ ಕೆಲಸ ಕ್ಕೆ ಆಗಮಿಸುವ ಜನರು ಇಲ್ಲಿನ ಕೆಸರು ಮಯವಾದ ರಸ್ತೆ ಹಾಗೂ ತಾಲ್ಲೂಕು ಕಚೇರಿಯ ಆವರಣವನ್ನು ನೋಡಿ ಈ ಪಟ್ಟಣಕ್ಕಿಂತ ನಮ್ಮ ಹಳ್ಳಿಯೇ ವಾಸಿ ಎಂದು ಜರಿಯುವ ಮೂಲಕ ವ್ಯಂಗ್ಯವಾಡುತ್ತಲೇ ಹಿಡಿ ಶಾಪಹಾಕುವುದು ಮಾಮೂಲಿ ಯಾಗಿದೆ.
ಇನ್ನೂ ಕೆಲವು ಗ್ರಾಮಸ್ಥರು ಇದೇನಪ್ಪಾ ಇತ್ತೀಚೆಗೆ ಪ್ರಸಿದ್ದ ದೇವಾಲಯಗಳ ಮುಂಭಾಗ ಕಾಲು ತೊಳೆಯಲು ನಿರ್ಮಿಸಿರುವ ನೆಲಕಾರಂಜಿಯಂತೆ ಇಲ್ಲಿನ ತಹಸೀಲ್ದಾರ್ ಅವರು ಬೃಹತ್ ಗುಂಡಿ ನಿರ್ಮಿಸಿ ಅದರಲ್ಲಿ ಕಾಲೆಜ್ಜಿಕೊಂಡು ತಾಲ್ಲೂಕು ಕಚೇರಿಗೆ ಬನ್ನಿ ಎಂದು ಹೇಳುತ್ತಿದೆ ಇದೊಂದು ಹೊಸ ಮಾದರಿ ಆಗಿದೆ ಎಂದು ನಾಗರಿಕರು ವ್ಯಂಗ್ಯವಾಡುತ್ತ ಚೀಮಾರಿಯಾಕುತ್ತಿದ್ದಾರೆ. ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಈ ಕೆರೆ ಕಟ್ಟೆಗೆ ಮಣ್ಣು ತುಂಬಿಸಿ ನೀರು ನಿಲ್ಲದಂತೆ ಮಾಡುವ ಮೂಲಕ ಉತ್ತಮ ವಾತಾರಣವನ್ನು ಕಲ್ಪಿಸುವಂತೆ ಹಿರಿಯ ನಾಗರಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ