ರಾಣೇಬೆನ್ನೂರು
ಇತ್ತಿಚಿಗೆ ರಾಯಚೂರಿನ ಖಾಸಗಿ ಇಂಜನೀಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮಧು ಎಂಬ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವನ್ನು ಖಂಡಿಸಿ ಇಲ್ಲಿನ ಎಬಿವಿಪಿ ಕಾರ್ಯಕರ್ತರು ತಹಶೀಲದಾರವರಿಗೆ ಮನವಿ ಸಲ್ಲಿಸಿದರು.
ಕಳೆದ ಎಪ್ರೀಲ್ 16 ರಂದು ರಾಯಚೂರಿನ ಮಾಣಿಕಪ್ರಭು ದೇವಸ್ಥಾನದ ಗುಡ್ಡದಲ್ಲಿ ಅರೆಬೆಂದ ನೇಣುಹಾಕಿದ ಕೊಳೆತ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ಇದು ಅತ್ಯಾಚಾರ ಮತ್ತು ಕೊಲೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಘಟನೆ ನಡೆದು 15 ದಿನಗಳಾದರೂ ಸಹೋದರಿ ಮಧು ಪತ್ತಾರ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಇಂತಹ ಹೀನ ಕೃತ್ಯವನ್ನು ಎ.ಬಿ.ವಿ.ಪಿ. ತೀವ್ರವಾಗಿ ಖಂಡಿಸುತ್ತದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿ.ಬಿ.ಐ. ತನಿಖೆಗೆ ತಕ್ಷಣ ಆಗ್ರಹಿಸಬೇಕು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತಾಗ ಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ಕಾರ್ಯಕರ್ತರಾದ ವಿಶ್ವಾಂತ, ರಾಜೇಶ, ಶಿವರಾಜ, ಆಕಾಶ, ಪ್ರಶಾಂತ ಮಾಲತೇಶ, ಅಭಿಷೇಕ, ಪೂರ್ಣಿಮಾ ಎಸ್.ಜೆ., ಅನ್ನಪೂರ್ಣ, ಮಮತಾ, ವಿಶ್ವ, ಟಿಪ್ಪು, ರಾಘವೇಂದ್ರ ಇನ್ನಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
