ಹುಳಿಯಾರು
ಹುಳಿಯಾರು ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ಎನ್‍ಎಚ್-234 ರಸ್ತೆ ಕಾಮಗಾರಿ ಪನರ್ ಆರಂಭಕ್ಕೆ ನೆರವಾಗುವ ನಿಟ್ಟಿನಲ್ಲಿ ರಸ್ತೆ ಬದವಿನ ಕಟ್ಟಡಗಳನ್ನು ಮಾಲೀಕರು ಸ್ವಯಂ ಕಟ್ಟಡಗಳ ತೆರವು ಕಾರ್ಯ ಆರಂಭಿಸಿದರು.
ವಿಶಾಕಪಟ್ಟಣಂನಿಂದ ಮಂಗಳೂರು ನ್ಯಾಷನಲ್ ಹೈವೆ ರಸ್ತೆಯು ಹುಳಿಯಾರು ಪಟ್ಟಣದಲ್ಲಿ ಹಾದು ಹೋಗಲಿದೆ. ಈ ರಸ್ತೆ ಕಾಮಗಾರಿಯು ಹುಳಿಯಾರು ಪಟ್ಟಣದಲ್ಲಿ ಈಗಾಗಲೇ ಅರ್ಧ ಮುಗಿದಿದ್ದು ಉಳಿದರ್ಧ ಕೆಲಸ ಕಟ್ಟಡಗಳ ತೆರವಾಗದೆ 1 ವರ್ಷದಿಂದ ನೆನಗುದಿಗೆ ಬಿದ್ದಿತ್ತು.
ಹಾಗಾಗಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ 2 ಸಭೆಗಳು ನಡೆದು 50 ಅಡಿ ವಿಸ್ತೀರ್ಣದಂತೆ ಕಾಮಗಾರಿ ನಡೆಯುವುದಿದ್ದು ಅದರಂತೆ ಕಟ್ಟಡ ತೆರವು ಮಾಡಿಕೊಡವಂತೆ ಕಟ್ಟಡ ಮಾಲೀಕರಿಗೆ ತಿಳಿಸಲಾಗಿತ್ತು. ಆದರೂ ಕೂಡ ಕಟ್ಟಡದ ಮಾಲೀಕರು ತೆರವು ಮಾಡದೆ ಮೌನಕ್ಕೆ ಶರಣಾಗಿದ್ದರು. ಇತ್ತಿಚೆಗೆ ಹುಳಿಯಾರಿಗೆ ಬಂದಿದ್ದ ಸಚಿವರು ಸೋಮವಾರ ಸ್ವಯಂ ತೆರವು ಮಾಡದಿದ್ದರೆ ಪೊಲೀಸ್ ಸಹಕಾರದೊಂದಿಗೆ ಕಟ್ಟಡಗಳನ್ನು ಹೊಡೆಯುವಂತೆ ಸೂಚಿಸಿದ್ದರು . ಪರಿಣಾಮ ಸೋಮವಾರ ಬೆಳಗ್ಗೆಯಿಂದಲೇ ಕಟ್ಟಡದ ಮಾಲೀಕರು ಸ್ವಯಂ ಕಟ್ಟಡಗಳ ತೆರವು ಕಾರ್ಯ ಆರಂಭಿಸಿದ್ದಾರೆ. 50 ಅಡಿ ಅಳತೆಯಂತೆ ಎಂಜಿನಿಯರ್ ಮಾರ್ಕ್ ಮಾಡಿದಂತೆ ತಮ್ಮ ಕಟ್ಟಡಗಳಲ್ಲಿನ ಸಾಮಗ್ರಿಗಳನ್ನು ಖಾಲಿ ಮಾಡಿಕೊಂಡು ತಾವೇ ಜೆಸಿಬಿ ಹಾಗೂ ಬಿಲ್ಡಿಂಗ್ ಕಟ್ಟರ್ ಸಹಾಯದೊಂದಿಗೆ ತೆರವು ಮಾಡಿಕೊಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ