ಸಮಾಜದಲ್ಲಿ ಜಾತಿ ಪದ್ಧತಿಯನ್ನು ತೊಲಗಿಸಿ ಸಮಾನತೆ ಸಾರಿ: ಜಿ.ಸೋಮಶೇಖರ ರೆಡ್ಡಿ

ಬಳ್ಳಾರಿ 

     ಬಸವಣ್ಣವರ ಕಾಲ ಘಟ್ಟದಲ್ಲಿ ಮಹತ್ವದ ಪಾತ್ರ ವಹಿಸಿದ ಮಡಿವಾಳ ಮಾಚಿದೇವ ಅವರು ಜಾತಿ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಶ್ರಮಿಸಿದರು ಎಂದು ನಗರ ಶಾಸಕ ಜಿ. ಸೋವಶೇಖರ್ ರೆಡ್ಡಿ ಹೇಳಿದರು.

       ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣವರ ಕಾಲದಲ್ಲಿದ್ದ ಮಡಿವಾಳ ಮಾಚಿದೇವರು ಬಸವಣ್ಣವರ ಹಿಂಬಾಲಕರಾಗಿ, ಸಮಾಜದ ಕತ್ತಲ ಕಳೆಯ ತೊಳೆದ ಶ್ರೇಷ್ಠರಾಗಿದ್ದರು.

       ಸಮಾಜದಲ್ಲಿನ ಮೇಲು ಕೀಳು, ಗಂಡು ಹೆಣ್ಣು ಎಂಬ ಭೇದಗಳನ್ನು ತಮ್ಮ ವಚನಗಳ ಮೂಲಕ ಕಿತ್ತೆಸೆದಿದ್ದರು ಎಂದು ಹೇಳಿದ ಶಾಸಕರು ಸಮಾಜದಲ್ಲಿ ಜಾತಿ ಪದ್ಧತಿಯನ್ನು ತೊಲಗಿಸಿ ಸಮಾನತೆ ಸಾರುವ ನಿಟ್ಟಿನಲ್ಲಿ ಮಡಿವಾಳ ಮಾಚಿದೇವ ಅವರ ವಚನ ಸಾಹಿತ್ಯ ಕೊಡುಗೆ ಅನನ್ಯ ಹಾಗಾಗೀ ಮಾಚಿದೇವರನ್ನು ಸಮಾನತೆ ಸಾರಿದ ದೈವ ಪುರುಷ ಎನ್ನುತ್ತಾರೆ ಎಂದರು.

         ದೇಶದಲ್ಲಿ ಜಾತಿರಹಿತವಾಗಿ ಭೇದ ಭಾವವಿಲ್ಲದೇ ಬದುಕುವಂತಹ ಕಾಯಕ ನಿಷ್ಠೆಯನ್ನು ನಾವುಗಳು ವಚನಗಳ ಮೂಲಕ ತಿಳಿದುಕೊಳ್ಳಬೇಕಾಗಿದೆ, ಅದಕ್ಕಾಗಿ ವಚನಕಾರರ ಆದರ್ಶಗಳನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳವುದರ ಜೊತೆಗೆ ಪಾಲಿಸಬೇಕು ಎಂದರು.

        ಹಿಂದುಳಿದ ವರ್ಗದವರೆಂದು ತಾತ್ಸಾರ ಮಾಡುವುದೇ ಬೇಡ, ಶಿಕ್ಷಣ, ಸಂಘಟನೆ, ಹೋರಾಟ ಮುಖೇನ ಸಧೃಡರಾಗಿ ಪ್ರತಿಯೊಬ್ಬ ಯುವಕರು ಗುಣಮಟ್ಟದ ಶಿಕ್ಷಣ ಪಡೆದು ಮುಂದೆ ಬರಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.ಸಹಾಯಕ ಆಯುಕ್ತ ರಮೇಶ ಕೋನಾರೆಡ್ಡಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ವಿಶೇಷ ಉಪನ್ಯಾಸ ನೀಡಿದರು. ಅಮಾತಿ ಬಸವರಾಜ್ ವಚನ ಗಾಯನ ನಡೆಸಿಕೊಟ್ಟರು.

          ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಧನುಂಜಯ್ ಹಮಲ್, ಶೇಷಗಿರಿ, ದೊಡ್ಡ ತಿಮ್ಮಪ್ಪ, ದಾನಪ್ಪ, ಕೃಷ್ಣಪ್ಪ, ರಾಮಾಂಜೀನಿ, ಈಶ್ವರಯ್ಯ, ಭಜಂತ್ರಿ ಸೇರಿದಂತೆ ಗಣ್ಯವ್ಯಕ್ತಿಗಳು ಇದ್ದರು. ಇದೇವೇಳೆ ಅದ್ದೂರಿಯಾಗಿ ನಗರದೆಲ್ಲೆಡೆ ಮಡಿವಾಳ ಮಾಚಿದೇವರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷರಮ್ ಡೋಳ್ಳು, ನೃತ್ಯ ಕಲಾ ಪ್ರಕಾರ ತಂಡಗಳು, ವೀರಗಾಸೆ ಹಾಗೂ ಹಲವು ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link