ಹಾವೇರಿ :
ಕನವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪೈಪಗಳನ್ನು ತಗೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ಇಷ್ಟು ಪೈಪಗಳನ್ನು ನೀಡಿದ್ದೀರಿ ಎಂದು ಲಿಖಿತವಾಗಿ ಬೆರೆಸಿಕೊಂಡು ಬಂದಿದ್ದಾರೆ ಹಾಗೂ ಪೈಪ್ ಪಡೆಯುವ ಸಂದರ್ಭದಲ್ಲಿನ ಅಧಿಕಾರಿಗಳು ಇದ್ದುದಕ್ಕೆ ವಿಡಿಯೋ ದಾಖಲೆಗಳಿವೆ.
ಇಷ್ಟೆಲ್ಲ ಸಾಕ್ಷಿಗಳಿದ್ದರೂ ಪೈಪಗಳನ್ನು ಕಳ್ಳತನದಿಂದ ತಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥರ ಮೇಲೆ ದುರುದ್ದೇಶ ಪೂರಕವಾಗಿ ದೂರನ್ನು ನೀಡಲಾಗಿದೆ ಎಂದು ಶಾಸಕ ನೆಹರೂ ಓಲೇಕಾರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ.ಪಂ ಇಂಜನೀಯ ಆಧೀನದಲ್ಲಿದ್ದ ಪೈಪಗಳನ್ನು ತಗೆದುಕೋಮಡು ಹೋಗುವ ಸಂದರ್ಭದಲ್ಲಿ ಅಧಿಕಾರಿಗಳಿದ್ದದ್ದು ಮತ್ತು ಅವರಿಂದ 461 ಪೈಪಗಳನ್ನು ಗ್ರಾಮಸ್ಥರು ಪಡೆದುದಕ್ಕೆ ಮತ್ತು ಅಧಿಕಾರಿಗಳು ನೀಡಿರುವುದಕ್ಕೆ ದಾಖಲಿವೆ.
ಯಾವ ರೈತರ ಹೊಲಗಳಲ್ಲಿ ಪೈಪ ಲೈನ್ ಹೋಗಿದೆಯೋ ಆ ಎಲ್ಲ ರೈತರಿಗೆ ನೊಟೀಸ್ ನೀಡಲಾಗಿದೆ ಮತ್ತು ಪ್ರತಿಭಟನೆಗೆ ಅರ್ಜಿ ಸಲ್ಲಿಸಿದ್ದ 14 ಜನರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಇವರೆಲ್ಲ ,ಏಲಿನ ಪ್ರಕರಣಗಳು ಇತ್ಯರ್ಥವಾಗುವವರೆಗೂ ನಾನು ಅವರ ಪರವಾಗಿ ಹೋರಾಡುತ್ತೇನೆ. ಅವರಿಗೆ ಅನ್ಯಾಯವಾಗುವುದನ್ನು ನಾನು ಸಹಿಸುವುದಿಲ್ಲ ಕೆರೆಗೆ ನೀರು ತರುವುದಕ್ಕೆ ಎಲ್ಲ ಪ್ರಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಅವರು ತಿಳಿಸಿದರು.
ಅಗಡಿ, ನೆಗಳೂರು ಮತ್ತು ಗುತ್ತಲ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವಾಗ ಇದು ಕಾನೂನು ಬಾಹಿರವಾದ ಕ್ರಮ ಎಂದು ಕೊಟ್ರೇಶಪ್ಪ ಬಸೇಗಣ್ಣಿ ಮತ್ತು ರುದ್ರಪ್ಪ ಲಮಾಣಿ ಅವರಿಗೆ ಕಾಣಿಸಲಿಲ್ಲವೆ. ರಾಣೇಬೆನ್ನೂರಿನಿಂದ ರುದ್ರಪ್ಪ ಲಮಾಣಿ ಅವರಿಗೆ ರಾಣೇಬೆನ್ನೂರ ತಾಲೂಕಿನಲ್ಲಿನ ತುಂಗಾ ಮೇಲ್ದಂಡೆ ಕಾಲುವೆ ಮೇಲಿರುವ ಅನಧಿಕೃತ ಪಂಪ್‍ಸೆಟ್ರರಗಳು ಇವರ ಕಣ್ಣಿಗೆ ಕಾಣುವುದಿಲ್ಲವೆ. ಕನವಳ್ಳಿ ಗ್ರಾಮದ ಕೆರೆಗೆ ನೀರು ತರುವುದು ಮಾತ್ರ ಕಾನೂನು ಬಾಹಿರವಾದ ಕ್ರಮವೆಂದು ಹೇಳುತ್ತಿರುವುದು ಇವರಿಗೆ ಅರ್ಥವಾಗುವುದಿಲ್ಲವೆ ಎಂದು ಪ್ರಶ್ನಿಸುವುದ ಮೂಲಕ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಸುತ್ತಿರುವುದೇ ರೈತರ ಹಿತ ಕಾಯುವದಕ್ಕಾಗಿ. ಗಾಜನೂರು ಡ್ಯಾಂ ನಿಂದ ಇಲ್ಲಿಯವರೆಗೆ ಕನಿಷ್ಟವೆಂದರೂ 5-6 ಸಾವಿರ ಪಂಪ್‍ಸೆಟ್‍ಗಳನ್ನು ಕಾಲುವೆ ಮೇಲೆ ಕಾಣಬಹುದಾಗಿದೆ. ಪ್ರಸಕ್ತ ಕನವಳ್ಳಿ ಗ್ರಾಮಕ್ಕೆ ನೀರೊದಗಿಸುವದಕ್ಕೆ ಅಳವಡಿಕೆ ಮಾಡಲಾಗುತ್ತಿರುವ ಪೈಪಲೈನ ಮಾತ್ರ ಜಿ.ಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅವರಿಗೆ ಕಾಣುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಪ್ರತಿಭಟನಾಕಾರರು ಮತ್ತು ಪೈಪಗಳನ್ನು ತಗೆದುಕೊಂಡು ಹೋದ ಗ್ರಾಮಸ್ತರ ಮೇಲೆ ಪ್ರಕರಣವನ್ನು ದಾಖಲು ಮಾಡದಿದ್ದರೆ ನಿಮ್ಮನ್ನು ಅಮಾನತ್ ಮಾಡಿಸುವದಾಗಿ ಬೆದರಿಕೆ ಹಾಕಿದ್ದರಿಂದ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿದ್ದಾರೆ. ಅಧಿಕಾರಿಗಳು ಕಿಲಿಕೊಡುವ ಗೊಂಬೆಗಳಂತಾಗಿದ್ದಾರೆ ಕೊಟ್ರೇಶಪ್ಪ ಬಸೇಗಣ್ಣಿ ಅವರ ಕೈಯಲ್ಲಿ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗಮೇಶ ಸುರಳಿಹಳ್ಳಿ, ನಾಗಪ್ಪಜ್ಜ ಬಸೇಗಣ್ಣಿ, ಬಸವರಾಜ ಕಳಸೂರ, ನಾಗರಾಜ ಬಸೇಗಣ್ಣಿ, ಅಶೋಕ ಯಲಿಗಾರ, ಅಶೋಕ ಬಣಕಾರ, ಪರಮೇಶಪ್ಪ ಜಾಲಿ, ಬಸವರಾಜ ಕೋಳಿವಾಡ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








