ವಿಳಂಬವಾಗಲಿದೆ ಫಲಿತಾಂಶ..!!!

ತುಮಕೂರು:

    ಈ ಬಾರಿಯ ಚುನಾವಣಾ ಫಲಿತಾಂಶ ವಿಳಂಬವಾಗಿ ಲಭ್ಯವಾಗುವ ಸಾಧ್ಯತೆಗಳಿವೆ. ವಿವಿ ಪ್ಯಾಟ್ ರಸೀದಿ ಎಣಿಕೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ತಡವಾಗಲಿದೆ.

     ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಗದಿತ ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, ತುಮಕೂರು ಲೋಕಸಭಾ ಕ್ಷೇತ್ರದ ಒಟ್ಟು 111 ಟೇಬಲ್‍ಗಳಲ್ಲಿ 1907 ಮತಗಟ್ಟೆಗಳ ಎಣಿಕೆ ನಡೆಯುತ್ತದೆ. ಗರಿಷ್ಠ 19 ಸುತ್ತಿನವರೆಗೆ ಮತ ಎಣಿಕೆ ನಡೆಯಲಿದೆ. ಪ್ರತಿ ಟೇಬಲ್‍ಗೆ ಒಬ್ಬರು ಸೂಪರ್ ವೈಸರ್, ಇಬ್ಬರು ಸಹಾಯಕರು ಇರುತ್ತಾರೆ.

      ಮೊದಲಿಗೆ ಪೋಸ್ಟಲ್ ಅಂಚೆಗಳನ್ನು ಎಣಿಕೆ ಮಾಡಲಾಗುವುದು. ಮತ ಎಣಿಕೆ ನಂತರ ಪ್ರತಿ ಸುತ್ತಿನ ಪ್ರಗತಿಯನ್ನು ಮೈಕ್ ಮೂಲಕ ಪ್ರಕಟಿಸಲಾಗುವುದು. ಬೆಳಗ್ಗೆ 7.30ಕ್ಕೆ ಇವಿಎಂ ಭದ್ರತಾ ಕೊಠಡಿಗಳನ್ನು ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ತೆರೆಯಲಾಗುವುದು.
ಇವಿಎಂ ಮತ ಯಂತ್ರಗಳಲ್ಲಿ ದೋಷ ಇರುವ ಬಗ್ಗೆ ಹಲವು ಪಕ್ಷಗಳು ವ್ಯಾಪಕ ದೂರು ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಈ ಬಗ್ಗೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ವಿವಿ ಪ್ಯಾಟ್ ರಸೀದಿಯನ್ನು ತಾಳೆ ಹಾಕಿ ನೋಡಲಾಗುತ್ತದೆ.

        ಇವಿಎಂ ಮತ ಯಂತ್ರ ಹಾಗೂ ವಿವಿ ಪ್ಯಾಟ್ ರಸೀದಿ ಎರಡಕ್ಕೂ ತಾಳೆ ಇರಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ವಿ.ವಿ. ಪ್ಯಾಟ್ ರಸೀದಿ ಲೆಕ್ಕ ಹಾಕಬೇಕಿರುವುದರಿಂದ ಚುನಾವಣಾ ಫಲಿತಾಂಶ ವಿಳಂಬವಾಗಲಿದೆ. ಮಧ್ಯಾಹ್ನದ ವೇಳೆಗೆ ಎಣಿಕೆ ಕಾರ್ಯ ಪೂರ್ಣಗೊಂಡರೂ ಸಹ ವಿವಿ ಪ್ಯಾಟ್ ರಸೀದಿ ತಾಳೆ ನೋಡಬೇಕಿರುವುದರಿಂದ ಫಲಿತಾಂಶ 4 ಗಂಟೆ ವಿಳಂಬವಾಗಬಹುದು ಎನ್ನುತ್ತವೆ ಮೂಲಗಳು.

       ಮತಗಟ್ಟೆಗಳಲ್ಲಿ ವಿ.ವಿ. ಪ್ಯಾಟ್ ರಸೀದಿ ಲೆಕ್ಕ ಹಾಕಲು ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲಿ ಒಂದು ವಿವಿ ಪ್ಯಾಟ್ ರಸೀದಿ ಎಣಿಕೆ ಪೂರ್ಣಗೊಂಡ ನಂತರವೇ ಇನ್ನೊಂದರ ಲೆಕ್ಕ ಹಾಕಲಾಗುತ್ತದೆ. ಒಂದು ಸುತ್ತಿನ ವಿವಿ ಪ್ಯಾಟ್ ಎಣಿಕೆಗೆ 45 ನಿಮಿಷಗಳ ಅವಧಿ ಬೇಕಾಗುತ್ತದೆ. ಇದರಿಂದ ಪ್ರತಿ ವಿಧಾನಸಭಾ ಕ್ಷೇತ್ರದ ವಿವಿ ಪ್ಯಾಟ್ ರಸೀದಿ ಎಣಿಕೆಗೆ ತಡವಾಗಬಹುದು ಎನ್ನುತ್ತವೆ ಮೂಲಗಳು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap