ತಿಪಟೂರು :

     ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಸಾರ್ವಜನಿಕರಿಗೆ ಕೊರೊನಾದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ನಗರದಲ್ಲಿ ನಗರಸಭೆ ಮತ್ತು ಆರಕ್ಷಕ ಇಲಾಖೆಯವರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲಿಸದ ಸ್ಥಳದಲ್ಲಿ ದಂಡವನ್ನು ಹಾಕುತ್ತಿದ್ದಾರೆ

     ತಾಲ್ಲೂಕಿನಲ್ಲಿ ಬುಧವಾರ ಒಟ್ಟು 45 ಜನರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು ತಾಲ್ಲೂಕಿನಲ್ಲಿ ಒಟ್ಟು 1320 ಜನ ಸೋಂಕಿತರಲ್ಲಿ ಒಟ್ಟು 1052 ಸೊಂಕಿನಿಂದ ಗುಣಮುಖರಾಗಿದ್ದು ಇನ್ನು 248 ಜನರು ಚಿಕಿತ್ಸೆ ಪಡೆಯುತ್ತಿದ್ದು ಕೊರೊನಾದಿಂದ ಒಟ್ಟು 16 ಜನರು ಮೃತರಾಗಿದ್ದು ಇದರ ಬಗ್ಗೆ ಮೊನ್ನೆತಾನೆ ನಗರಸಭೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಮತ್ತು ನಗರಸಭೆ ಆಯುಕ್ತರು ನಗರದ ವರ್ತಕರುಗಳ ಸಭೆಕರೆದು ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕಟ್ಟುಪಾಡುಗಳನ್ನು ಚರ್ಚಿಸಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡದವರಿಗೆ ದಂಡವಿಧಿಸುವಂತೆ ಸೂಚಿಸಿದ್ದರು. ಇದರ ಪ್ರಕಾರವಾಗಿ ನಗರಸಭೆಯಿಂದ 27100ರೂ ಮತ್ತು ಆರಕ್ಷಕ ಇಲಾಖೆಯಿಂದ ಸುಮಾರು 10000 ಸಾವಿರಕ್ಕೂ ಅಧಿಕ ದಂಡವನ್ನು ವಸೂಲಿಮಾಡಲಾಗಿದೆ.

ವಿದ್ಯಾಗಮದಲ್ಲಿ ಸಾಮಾಜಿಕ ಅಂತರವೇ ಇಲ್ಲ   

     ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕೊರೊನಾ ಮದ್ಯೆಯೂ ವಿದ್ಯಾಗಮ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಸಿ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಕೆಲವು ಶಾಲೆಗಳಲ್ಲಿ ಉತ್ತಮವಾಗಿಯೇ ಪಾಳಿಯ ಮೇಲೆ ಶಿಕ್ಷಕರ ಉಸ್ತುವಾರಿಯಲ್ಲಿ ಉತ್ತಮವಾಗಿಯೇ ನಿರ್ವಹಿಸುತ್ತಿದ್ದಾರೆ. ಆದರೆ ಇವೆಲ್ಲಕ್ಕೂ ಅಪವಾದವೆಂಬಂತೆ ಕಲ್ಪತರು ಕ್ರೀಡಾಂಗಣದಲ್ಲಿ ವಿದ್ಯಾರ್ಥಿನಿಯರು ಯಾವುದೇ ಮಾರ್ಗದರ್ಶಿ ಶಿಕ್ಷಕರು ಇಲ್ಲದೇ ಸಾಮಾಜಿಕ ಅಂತರವನ್ನು ಮರೆತು ಕುಳಿತು ಕೊಂಡಿದ್ದರು ಮತ್ತು ಯಾವ ಶಾಲೆಯ ವಿದ್ಯಾರ್ಥಿಗಳೆಂಬುದು ತಿಳಿದುಬಂದಿಲ್ಲ ಈ ವಿಷಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳ ಬೇಕೆಂದಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಮಕ್ಕಳ ವಿದ್ಯಾಭ್ಯಾಸದ ದೃಷ್ಠಿಯಿಂದ ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲವನ್ನು ಬದಿಗೊತ್ತಿ ಸುರಕ್ಷಿತ ರೀತಿಯಲ್ಲಿ ವಿದ್ಯಾಗಮಕ್ಕೆ ಕಳುಹಿಸುತ್ತಿದ್ದಾರೆ ಆದರೆ ಶಿಕ್ಷಕರು ಮಕ್ಕಳ ಆರೋಗ್ಯವನ್ನು ಲೆಕ್ಕಿಸದೇ ಕೇವಲ ಮಕ್ಕಳನ್ನೇ ಬಿಟ್ಟು ಹೋಗಿರುವುದು ಎಷ್ಟು ಸರಿ ಎಂಬುದನ್ನು ಸರ್ಕಾರ ಚಿಂತಿಸಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ