ಮಳೆಗೆತಂಪಾದ ಇಳೆ, ಗಗನಕ್ಕೇರಿದ ಹೂ ಹಣ್ಣಿನ ಬೆಲೆ

ತಿಪಟೂರು :

     ನಗರದಲ್ಲಿಒಂದು ವಾರದಿಂದ ಬೀಳುತ್ತಿರುವ ಮಳೆಗೆ ಇಳೆಯೇನು ತಂಪಾಯಿತುಆದರೆ ಶ್ರಾವಣಮಾಸದ ಪೂಜೆಗೆ ಹಣ್ಣು ಹೂಗಗಳ ಬೆಲೆಮಾತ್ರಗಗನದತ್ತ ಮುಖಮಾಡಿದ್ದುಗ್ರಾಹಕರಿಗೆ ಬಿಸಿಏರಿಸಿದೆ.

     ಇಂದು ಸಂಜೆ ಸುರಿದ ಮಳೆಗೆ ನಗರದ ಬಹುತೇಕ ಮಾನಿನಿಯರ ಮತ್ತು ಹೆಣ್ಣುಮಕ್ಕಳ ಅಶ್ರುತರ್ಪಣದಂತೆಕಾಣುತ್ತಿತ್ತು.ಕೊರೊನಾ ಲಾಕ್‍ಡೌನ್‍ನಿಂದ ಹೊರಗೆ ಬಾರದೇಇದ್ದ ಮಹಿಳೆಯರಿಗೆ ಶ್ರಾವಣ ಮಾಸಬಂದಿದ್ದುಒಂದುಕಡೆಖುಷಿಯ ವಾತಾವರಣ.ಇನ್ನು ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಸಡಗರದ ನಡುವೆ ಮಳೆ ಬಂದದ್ದು ಮಹಿಳೆಯರಿಗೆ ಮಾತ್ರ ನಿರಾಸೆ ಮೂಡಿಸಿತ್ತು ಆದರೆ ಪುರುಷರಜೇಬಿಗೆ ಸ್ವಲ್ಪತಂಪಾಯಿತು.

      ಇನ್ನು ಮಾರುಕಟ್ಟೆಯಲ್ಲಿಕೊರೊನಾವನ್ನು ಮರೆತುಜನರು ಸಂದಣಿಏರ್ಪಡುತ್ತಿದ್ದುಇದರೊಂದಿಗೆ ಸೇಬು 150 ರಿಂದ 250, ದಾಳಿಂಬೆ 150ರೂ, ಪೈನಾಪಲ್ 50 ರಿಂದ 100 ರೂ, ಇನ್ನಿತರೆ ಹಣ್ಣುಗಳು ಸಹ ಗಗನಕುಸುಮವಾಗಿದ್ದು ಬಾಳೆಹಣ್ಣುಮಾತ್ರ ಸ್ವಲ್ಪಮಟ್ಟಿಗೆಕೈಗೆಟುಕುತಲಿದೆ.ಇನ್ನು ಹೂಗಳು ಸಹ ಮಳೆಗೆ ತಮ್ಮ ಹೊಳಪನ್ನು ಹೆಚ್ಚಿಸಿಕೊಂಡು ದರವನ್ನು ಏರಿಸಿಕೊಳ್ಳುತ್ತಿದ್ದು ನೆನ್ನೆ ಮೊನ್ನೆಕೆ.ಜಿಗೆ 100 ರೂಇದ್ದು ಸುನಾಮಿ ಗುಲಾಬಿ ಇಂದು 300ರೂ ಆಸುಪಾಸಿಗೆ ಬಂದು ನಿಂತಿದೆ.

    ಮಾರುಕಟ್ಟೆಯಲ್ಲಿಕಳ್ಳರಿದ್ದಾರೆ ಎಚ್ಚರ : ಈ ಬಾರಿಯ ವರಮಹಾಲಕ್ಷ್ಮಿ ಹಬ್ಬದಲ್ಲಿಕೊರೊನಾದೊಂದಿಗೆಆಚರಿಸುತ್ತಿರುವುದರಜೊತೆಗೆ ಮಾರುಕಟ್ಟೆಗೆ ಆಗಮಿಸುವ ಸಾರ್ವಜನಿಕರು ಮೊಬೈಲ್ ಕಳ್ಳರ ಹಾವಳಿಯಿಂದಲೂ ಸಾಮಾಜಿಕ ಅಂತರವನ್ನು ಜಾಯ್ದುಕೊಂಡರೆ ತಮ್ಮ ಅಮೂಲ್ಯವಾದ ಮೊಬೈಲ್‍ಗಳನ್ನು ಉಳಿಸಿಕೊಂಡು ಸಂತೋಷವಾಗಿ ಹಬ್ಬವನ್ನು ಆಚರಿಸಬಹುದು.

    ಜೊತೆಗೆ ಶುಕ್ರವಾರ ಇರುವ ವರಮಹಾಲಕ್ಷ್ಮಿ ಹಬ್ಬದ ವರಪ್ರಸಾದದಂತೆ ದಿನೇ ದಿನೇ ಏರುತ್ತಾ ಸಾಗುತ್ತಿದ್ದ ಕೊರೊನಾ ಸೊಂಕಿತರು ಸಂಖ್ಯೆ ಕಡಿಮೆಯಾಗಿದ್ದು ಒಂದು ಕೇವಲ ಒಬ್ಬ ಸೋಕಿತರು ದೃಡಪಟ್ಟಿದ್ದು ಸ್ವಲ್ಪಮಟ್ಟಿಗೆ ಸಮಾಧಾನವನ್ನು ತಂದಿದೆ. ತಾಲ್ಲೂಕಿನಲ್ಲಿ ಒಟ್ಟು ಕೊರೊನಾ ಸೊಂಕಿತರು 73 ಇದ್ದು  ಇದರಲ್ಲಿ 27 ಸೊಂಕಿತರು ಗೂಣಮುಖರಾಗಿ ಬಿಡುಗಡೆ ಹೊಂದಿದ್ದು 45 ಜನರುಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಜಿಲ್ಲೆಯಲ್ಲೇ ಕಡಿಮೆ ಸೊಂಕಿತರನ್ನು ಹೊಂದಿರುವುದು ನಾಗರೀಕರಲ್ಲಿ ನೆಮ್ಮದಿ ತಂದಿದೆಯಾದರೂ ನಾಳಿನ ಭವಿಷ್ಯದಲ್ಲಿ ಏನಾಗುತ್ತದೋ ಎಂದು ಕಾಯ್ದು ನೋಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link