ಸವಲತ್ತು ಕಿತ್ತುಕೊಂಡಿದ್ದೇ ಬಿಜೆಪಿ ಸರ್ಕಾರದ ಸಾಧನೆ: ಆಂಜನೇಯ

ಬರಗೂರು

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ದಲಿತರಿಗೆ ನೀಡಿದ್ದ ಸವಲತ್ತುಗಳನ್ನು ನಿಲ್ಲಿಸಿದ್ದೆ ಅವರ ಸಾಧನೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

    ಅವರು ಶಿರಾ ತಾಲ್ಲೂಕಿನ ಬರಗೂರು ಗ್ರಾಮದ ಸಮೀಪ ದಲಿತ ಸಮುದಾಯದ ಜಾಗೃತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಹಲವು ಯೋಜನೆಯಡಿ ದಲಿತರಿಗೆ, ಅರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ ಸೌಲಭ್ಯಗಳನ್ನು ಒದಗಿಸಿ ತಳ ಸಮುದಾಯಕ್ಕೂ ಸರ್ಕಾರ ಇದೆ ಎನ್ನುವ ಮನವರಿಕೆ ಮಾಡಿತ್ತು ಅದರೆ ಸಂವಿಧಾನ ಬದಲಿಸುವ ಇಚ್ಛೆ ಹೊಂದಿರುವ ಬಿಜೆಪಿ ಎಲ್ಲವನ್ನೂ ನಿಲ್ಲಿಸಿದೆ ಎಂದರು.

   ಟಿ.ಬಿ.ಜಯಚಂದ್ರ ಅವರು ಸಚಿವರಾಗಿದ್ದ ವೇಳೆ 1500 ಕೊಳವೆಬಾವಿ ಕೊರೆಸಿ ಹಲವು ಕೊಡುಗೆಗಳನ್ನು ದಲಿತ ಸಮುದಾಯಕ್ಕೆ ನೀಡಿದ್ದಾರೆ ಎಂದು ಈ ಸಮಯದಲ್ಲಿ ಸ್ಮರಿಸಿದರು.ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ದಲಿತರ ಹಕ್ಕುಗಳನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಇದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ ಬಿಜೆಪಿಗೆ ದಲಿತರು ಮತ ನೀಡಿದರೆ ಸ್ವಯಂ ವಿಷ ಕುಡಿದಂತೆ ಎಂದರು.

   ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ ಹಿಂದಿನ ಕಾಂಗ್ರೆಸ್ ಸರ್ಕಾರವು ಹಲವು ಮಹತ್ತರವಾದ ಕಾನೂನು ತಿದ್ದುಪಡಿ ಮಾಡಿ ಹೊಸ ಅವಕಾಶವನ್ನು ದಲಿತರಿಗೆ ಒದಗಿಸಿಕೊಟ್ಟಿದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಪಾವಗಡ ತಾ.ಪಂ.ಅಧ್ಯಕ್ಷೆ ಮಾಳಮ್ಮ, ಮುಖಂಡರಾದ ಪಿ.ಬಿ.ನರಸಿಂಹಯ್ಯ, ಕರಿದಾಸರಹಳ್ಳಿ ನರಸಪ್ಪ, ಎನ್.ಸಿ.ದೊಡ್ಡಯ್ಯ, ಶಿವು ಯಾದವ್, ಕೇಶವಮೂರ್ತಿ, ದೊಡ್ಡಬಾಣಗೆರೆ ನರಸಪ್ಪ, ಲಿಂಗರಾಜ್, ವೀರಸೇನ, ಕೋಟೆ ಲೋಕೇಶ್, ಶಾಂತಕುಮಾರ್, ಶ್ರೀನಿವಾಸ್ ,ಮಾಗೋಡು ಯೋಗನಂದ್, ಶೇಷನಾಯ್ಕ್ ,ರಾಕೇಶ್ ಬಾಬು ಮತ್ತಿತರರು ಪಾಲ್ಗೋಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link