ಬೆಂಗಳೂರು
ಒಂದೇ ವಾರದಲ್ಲಿ 4 ಇನ್ನೊವಾ ಕಾರುಗಳ ಏರ್ ಬ್ಯಾಗ್ಸ್, ರಿಮೋಟ್ ಸೆನ್ಸಾರ್ ಸೆಟ್‍ನ್ನು ಬೆಂಗಳೂರಿನ ಬ್ಯಾಟರಾಯನಪುರ, ಪ್ರಮೋದ್ ಲೇಔಟ್, ಗಿರಿನಗರ ಮುಖ್ಯರಸ್ತೆಯಲ್ಲಿ ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಖದೀಮರು ಮನೆ ಮುಂದೆ ನಿಲ್ಲಿಸಿದ ಇನ್ನೊವಾ ಕಾರುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವುದು ಈ ಕೃತ್ಯಗಳಿಂದ ಕಂಡುಬಂದಿದೆ.ಇನ್ನೊವಾ ಕಾರಿನ ಬಿಡಿಭಾಗಗಳಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆ ಕಳ್ಳತನ ಮಾಡಿ ಕದ್ದ ವಸ್ತುವನ್ನು ಜೆ.ಸಿ ರಸ್ತೆಯಲ್ಲಿ ತಂದು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ನಗರದಲ್ಲಿ ಸೋಮಶೇಖರ್, ರಾಜೇಶ್ ಹೆಗಡೆ, ಸುಕುಮಾರ್ ಎಂಬುವವರಿಗೆ ಸೇರಿದ ಇನ್ನೊವಾ ಕಾರುಗಳು ಕಳ್ಳತನವಾಗಿವೆ. ರಾತ್ರಿ ಮನೆಯೆದುರು ಕಾರು ನಿಲ್ಲಿಸಿದ್ದ ಕಾರುಗಳು ಬೆಳಗ್ಗೆ ನೋಡುವ ಹೊತ್ತಿಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಒಂದೇ ತಂಡದವರು ಖದೀಮರು ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.ಪ್ರಕರಣ ದಾಖಲಿಸಿರುವ ಪೆÇಲೀಸರು ಘಟನೆ ನಡೆದ ಸುತ್ತಮುತ್ತಲ ಬಡಾವಣೆಯ ಸಿಸಿಟಿವಿಯ ಪರಿಶೀಲನೆ ನಡೆಸಿದ್ದಾರೆ.ಬ್ಯಾಟರಾಯನಪುರ, ಅನ್ನಪೂರ್ಣೇಶ್ವರಿ ನಗರ, ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
