4ದಶಕಗಳ ನಂತರ ತೆಪ್ಪೋತ್ಸವ ನೋಡಿ ಸಂಭ್ರಮಿಸಿದ ಗ್ರಾಮಸ್ಥರು

ತಿಪಟೂರು

       ಬರಗಾಲದಿಂದ ಖಾಲಿಯಾಗಿದ್ದ ಕೆರೆಗೆ ಪುನಶ್ಚೇತನ ನೀಡಿ ಹೇಮವತಿ ನೀರಿನ್ನು ಏತ ನೀರಾವರಿಯ ಮೂಲಕ 40 ವರ್ಷಗಳ ನಂತರ ಕೆರೆಯನ್ನು ತುಂಬಿಸಿದ್ದರಿಂದ ಗ್ರಾಮಸ್ಥರೆಲ್ಲಾ ಸೇರಿ ದೇವರುಗಳ ತೆಪ್ಪೋತ್ಸವ ನೋಡಿ ಸಂಭ್ರಮಿಸಿದ್ದಾರೆ.

      ತಾಲ್ಲೂಕಿನ ದಸರಿಘಟ್ಟದ ಗ್ರಾಮದಲ್ಲಿರುವ ಕೆರೆಯು ಕಳೆದ ಹಲವಾರು ವರ್ಷಗಳಿಂದ ಕಡಿಮೆ ಮಳೆಯಾದ ಕಾರಣದಿಂದ ತೀವ್ರ ಬರಗಾಲ ಸಂಭವಿಸಿದ್ದು ಕೆರೆಯ ನೀರು ಖಾಲಿಯಾಗಿ ಖಾಲಿ ಕೆರೆ ಉಳಿದಿತ್ತು. ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಕೆರೆಯ ಸ್ವಚ್ಛತೆ, ಹೂಳು ತೆಗೆಸಿ ಏತ ನೀರಾವರಿ ಯೋಜನೆಯಲ್ಲಿ ನೀರು ಹರಿಸಿ ಕೆರೆ ತುಂಬಿಸಿದ್ದಾರೆ. ಇದರ ಸಂತಸದಿಂದ ಶ್ರೀಕ್ಷೇತ್ರದ ಶಕ್ತಿ ದೇವತೆ ಶ್ರೀ ಚೌಡೇಶ್ವರಿದೇವಿ ಸೇರಿದಂತೆ ವಿವಿಧ ದೇವರುಗಳು ಮತ್ತು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ತೆಪ್ಪೋತ್ಸವ ಮಾಡಿ ಸಂಭ್ರಮಿಸಿದರು.

     ಈ ಸಂದರ್ಭದಲ್ಲಿ ದಸರಿಘಟ್ಟ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಕುಂಬಳಗೂರು ಆದಿಚುಂಚನಗಿರಿ ಶಾಖಾಮಠ ಪ್ರಸನ್ನನಾಥ ಸ್ವಾಮೀಜಿ, ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಮಂಗಳನಾಥ ಸ್ವಾಮೀಜಿ, ಕಬ್ಬಳ್ಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಬಿ.ಸಿ.ನಾಗೇಶ್, ಮುಖಂಡ ಲೋಕೇಶ್ವರ್, ಜಿ.ಪಂ.ಸದಸ್ಯ ಜಿ.ನಾರಾಯಣ್, ಟ್ರಸ್ಟಿಗಳಾದ ಸಿದ್ದಪ್ಪ, ರಾಮಕೃಷ್ಣಪ್ಪ, ಶ್ರೀ ರಂಗ ಆಸ್ಪತ್ರೆಯ ಡಾ.ವಿವೇಚನ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ ಸೇರಿದಂತೆ ದಸರಿಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link