ಹಿರಿಯೂರು :
ಮಾಧ್ಯಮದ ಪ್ರತಿನಿಧಿಗಳು ಅಂದರೆ ಪ್ರಿಂಟ್ ಮೀಡಿಯಾ, ಫೋಟೋ ಮೀಡಿಯಾ, ವಿಝಲ್ ಮೀಡಿಯಾ, ಅವರ ಗುರುತಿನ ಕಾರ್ಡ್ ಇದ್ದರೆ ಸಾಕು ಅಂತಹವರಿಗೆ ಪೋಲೀಸ್ ಪಾಸ್ ಕೇಳುವ ಅವಶ್ಯಕತೆಯಿಲ್ಲ, ಈ ನಿಟ್ಟಿನಲ್ಲಿ ಪೋಲೀಸರು ಸಹಕರಿಸಬೇಕು ಎಂಬುದಾಗಿ ಬೆಂಗಳೂರು ನಗರ ಪೋಲೀಸ್ ಕಮೀಷನರ್ ಬಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕರೋನಾವೈರಸ್ ಹಿನ್ನೆಲೆಯಲ್ಲಿ ಸರ್ಕಾರ “ಲಾಕ್ ಡೌನ್” ಘೋಷಿಸಿದ್ದು, ಈ ಸಂದರ್ಭದಲ್ಲಿ ಮೀಡಿಯಾ ವ್ಯಕ್ತಿಗಳೂ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೂ ಸುದ್ದಿಪ್ರಚಾರಕ್ಕಾಗಿ ನಗರದಲ್ಲಿ ಸಂಚರಿಸುತ್ತಿದ್ದು, ಅವರಿಗೆ ಪೋಲೀಸರಿಂದ ಯಾವುದೇ ರೀತಿಯ ತೊಂದರೆಯಾಗಬಾರದು, ಎಂಬ ಹಿನ್ನೆಲೆಯಲ್ಲಿ ನಗರ ಕಮೀಷನರ್ ಬಾಸ್ಕರ್ ರಾವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ