ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅನುದಾನದ ಕೊರತೆ ಇಲ್ಲಾ : ಎಲ್.ಕೆ.ಅತೀಕ್

ಮಧುಗಿರಿ:

      ಭೀಕರವಾದ ಬರಗಾಲದ ಪರಿಸ್ಥಿತಿ ಎದುರಾಗಿದೆ ವಿಶೇಷವಾಗಿ ಜಿಲ್ಲೆಯಲ್ಲಿ ಉದ್ಯೋಗ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದಲ್ಲಿ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲಾ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದರು.

       ತಾಲ್ಲೂಕಿನ ಪುರವರ ಹೋಬಳಿಯ ಕೋಡಗದಾಲ ಪಂಚಾಯಾತಿ ವ್ಯಾಪ್ತಿಯ ರಂಗನಹಳ್ಳಿಯಲ್ಲಿ ರೇಷ್ಮೆ ಇಲಾಖೆಯ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ರೈತ ಮಹಿಳೆ ಲಕ್ಷ್ಮಮ್ಮ ನವರ ಜಮೀನಿನಲ್ಲಿ ಸುಮಾರು 4.80 ರೂ ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ರೇಷ್ಮೆ ನಾಟಿ ಮತ್ತು ನಿರ್ವಹಣೆ ಹಾಗೂ ನಿರ್ಮಾಣವಾಗಿರುವ ಕಟ್ಟಡಗಳನ್ನು ಪರೀಶೀಲಿಸಿ ಮಾತನಾಡಿದರು.

        ಕೊರಟಗೆರೆ, ಮಧುಗಿರಿ ಪಾವಗಡದ ತಾಲ್ಲೂಕು ಮಟ್ಟದ ಅಧಿಕಾರಿಗಳು ಬರ ನಿರ್ವಹಣೆಯಲ್ಲಿ ಕುಡಿಯುವ ನೀರು ಹಾಗೂ ನರೇಗಾ ಯೋಜನೆಯಡಿಯಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಪರೀಶೀಲಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಬೋರ್ ವೆಲ್ ಹಾಗೂ ಖಾಸಗಿ ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತಿದೆ. ನರೇಗಾ ಯೋಜನೆಯಡಿಯಲ್ಲಿ ರೈತರಿಗೆ ತೋಟಗಾರಿಕೆ ಬೆಳೆಗಳು ಹಾಗೂ ರೇಷ್ಮೆ ಬೆಳೆಯಲು , ಕೆರೆ ಕಾಲುವೆ, ಕಟ್ಟೆಗಳ ಅಭಿವೃದ್ಧಿಗೆ ಅನುದಾನ ನೀಡಲು ಅವಕಾಶವಿದೆ ಈ ಬಗ್ಗೆ ಹೆಚ್ಚು ಹೆಚ್ಚು ರೈತರು ಯೋಜನೆಯಡಿಯಲ್ಲಿ ತೊಡಗಿಸಿಕೊಳ್ಳ ಬೇಕಾಗಿದೆ.

       ಈ ಹಿಂದೆ ಭಾಗದಲ್ಲಿ ಹೆಚ್ಚು ರೇಷ್ಮೆ ಬೆಳೆಯಲಾಗುತ್ತಿತ್ತು ಕಾಲಕ್ರಮೇಣ ರೇಷ್ಮೆ ಬೆಳೆ ಬೆಳೆಯುವವರು ಕಡಿಮೆಯಾಗಿದ್ದಾರೆ ರೈತರಲ್ಲಿ ರೇಷ್ಮೆ ಬೆಳೆಯ ಮಾಹಿತಿ ಕೊರತೆ ಇದೆ ಹಾಗೂ ಇಲಾಖೆಯ ವತಿಯಿಂದ ಸರಿಯಾದ ಮಾರ್ಗದರ್ಶನ ಮತ್ತು ಅರಿವು ರೈತರಿಗೆ ಮೂಡುತ್ತಿಲ್ಲಾ ಮಾಹಿತಿಯ ಕೊರತೆ ಇದೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಅವರು ಜಿಲ್ಲೆಯಲ್ಲಿಯೇ ನರೇಗಾ ಯೋಜನೆಯಡಿಯಲ್ಲಿ ಹೆಚ್ಚು ರೇಷ್ಮೆ ಬೆಳೆಯಲಾಗಿದೆ ಹಾಗೂ ಕೊಳವೆ ಬಾವಿಗಳ ಆಳ ಮತ್ತು ನೀರಿನ ಲಭ್ಯತೆಯು ಕಡಿಮೆಯಾಗುತ್ತಿರುವುದು ಒಂದು ಕಾರಣವಾಗಿದೆ.

       ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭಕ್ಕೂ ಮುನ್ನಾವೆ 2019-2020ನೇ ಸಾಲಿನಲ್ಲಿ ಇನ್ನೂ ಹೆಚ್ಚು ರೈತರನ್ನು ಗುರುತಿಸಿ ಸಾಂಪ್ರದಾಯಿಕ ಬೆಳೆಯಾದ ರೇಷ್ಮೆಯನ್ನು ಬೆಳೆಯುವಂತೆ ಪ್ರೋತ್ಸಾಹಿಸಲಾಗುವುದು ಎಂದರು.ಜಿಪಂ ಸಿಇಓ ಶುಭಕಲ್ಯಾಣ್, ಜಿಪಂ ಇಇ ಸುರೇಶ್ ರೆಡ್ಡಿ, ತಾಪಂ ಇಓ ನಂದಿನಿ, ಎಡಿಓ ದೊಡ್ಡಸಿದ್ದಯ್ಯ, ರೇಷ್ಮೆ ಇಲಾಖೆಯ ಸಹಾಯಾಕ ನಿರ್ದೇಶಕ ನಾಗರಾಜು, ಗ್ರಾಪಂ ಅಧ್ಯಕ್ಷೆ ಮಂಜುಳಾ, ಪಿಡಿಓ ರೂಪ ಹಾಗೂ ಗ್ರಾಮಸ್ಥರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap