ಬಳ್ಳಾರಿ
ಬಳ್ಳಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ.ಸಮರ್ಪಕವಾದ ಆಕ್ಸಿಜನ್ ಪ್ರಮಾಣ ನಮ್ಮಲ್ಲಿದೆ. ಆಕ್ಸಿಜನ್ ಸಮರ್ಪಕ ಪೂರೈಕೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು,ಯಾವುದೇ ರೀತಿಯ ತೊಂದರೆಯಿಲ್ಲದಂತೆ ಪ್ರತಿನಿತ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ 1500ಕ್ಕೂ ಹೆಚ್ಚು ಆಕ್ಸಿಜನ್ ಬೆಡ್‍ಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 350 ಆಕ್ಸಿಜನ್ ಬೆಡ್‍ಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಮತ್ತು ನಾನ್ ಕೋವಿಡ್‍ಗಾಗಿ 88 ವೆಂಟಿಲೇಟರ್‍ಗೆ ಲಭ್ಯವಿವೆ.ಎಲ್ಲ ರೀತಿಯ ಸಲಕರಣೆಗಳಿಗೆ ಮತ್ತು ಆಕ್ಸಿಜನ್ ಬೆಡ್‍ಗಳಿಗೆ ಯಾವುದೇ ರೀತಿಯ ಆಕ್ಸಿಜನ್ ತೊಂದರೆಯಾಗದಂತೆ ನಿರ್ವಹಿಸುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಜಂಬೋ ಸಿಲಿಂಡರ್‍ಗಳ ಮುಖಾಂತರ, ಜಿಲ್ಲಾಸ್ಪತ್ರೆಯಲ್ಲಿ 6ಕಿಲೋ ಲೀಟರ್‍ನ ಲಿಕ್ವಿಡ್ ಆಕ್ಸಿಜನ್ ಕಂಟೈನರ್ ಮುಖಾಂತರ, ಟ್ರಾಮಾದಲ್ಲಿ 13ಕಿಲೋ ಲೀಟರ್ ಮತ್ತು ವಿಮ್ಸ್‍ನಲ್ಲಿ 19ಕಿಲೋ ಲೀಟರ್ ಟ್ಯಾಂಕ್‍ಗಳನ್ನು ಅಳವಡಿಸಲಾಗಿದೆ.
ಇದುವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ತೊಂದರೆಯಾಗದಂತೆ ನಿರ್ವಹಿಸಲಾಗಿದ್ದು, ಮುಂದೆಯೂ ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ. ಎಲ್ಲ ನಮ್ಮ ಆಕ್ಸಿಜನ್ ಬೆಡ್‍ಗಳಲ್ಲಿ ಸಮರ್ಪಕವಾದ ಆಕ್ಸಿಜನ್ ಪ್ರಮಾಣ ನಮ್ಮಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ