ರಾಣಿಬೆನ್ನೂರು
ಕಾಂಗ್ರೆಸ್ ಪಕ್ಷವನ್ನು ತೆಗಳುವುದೇ ಬಿಜೆಪಿಯವರ ಕೆಲಸವಾಗಿದೆ. ಬಡವರ ಕಾರ್ಯಕ್ರಮಗಳ ಮೇಲೆ ಅವರ ಕೆಂಗಣ್ಣು ಬಿದ್ದಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರ ಊಟ ಮಾಡಿದ ಅನ್ನಕ್ಕೆ ದಂಡ ಹಾಕಲು ರಾಜ್ಯ ಸರ್ಕಾರ ಹುನ್ನಾರ ಮಾಡಿದೆ. ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲು ಹೇಸುವುದಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದು ಮೂರೂವರೆ ತಿಂಗಳು ಗತಿಸಿದರೂ ಒಂದು ಜನಪರ ಯೋಜನೆ ಜಾರಿಗೆ ತಂದಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ಸ್ಥಳೀಯ ಕ್ಷೇತ್ರದ ಅನರ್ಹ ಶಾಸಕರಿಂದಾಗಿ ದೇಶದಲ್ಲಿ ಕ್ಷೇತ್ರದ ಘನತೆಗೆ ಧಕ್ಕೆಯಾಗಿದೆ. ಸ್ವಾರ್ಥದ ಬದಲು ರಾಣೆಬೆನ್ನೂರಿನ ಮತದಾರರು ಸ್ವಾಭಿಮಾನಕ್ಕಾಗಿ ಅನುಭವಿ ರಾಜಕಾರಣಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ರಿಗೆ ಮತ ನೀಡಿ ವಿಧಾನಸಭೆಗೆ ಆರಿಸಿ ಕಳುಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಆರ್.ಶಂಕರ್ ಬೆಂಬಲಿಗ ರತ್ನಾಕರ ಕುಂದಾಪುರ ಹಾಗೂ ಸಂಗಡಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅಭ್ಯರ್ಥಿ ಕೆ.ಬಿ.ಕೋಳಿವಾಡ, ಶಾಸಕಿ ಕುಸುಮಾ ಶಿವಳ್ಳಿ, ಬಿ.ಆರ್.ಯಾವಗಲ್, ಅಪ್ಪಾಜಿ ನಾಡಗೌಡ, ಬಸವನಗೌಡ ಮರದ, ಪುಟ್ಟಪ್ಪ ಮರಿಯಮ್ಮನವರ ಸೇರಿದಂತೆ ಇತರರು ಸುದ್ಧಿಗೋಷ್ಠಿಯಲ್ಲಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ