ಚಳ್ಳಕೆರೆ 
ರಾಜ್ಯದ ದಲಿತ ಸಮುದಾಯದ ಪ್ರಭಾವಿ ಮುಖಂಡ ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ಹೋಗುವ ಮಧ್ಯದಲ್ಲಿ ಚಳ್ಳಕೆರೆ ನಗರಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದರು. ಸಚಿವರ ಪ್ರವಾಸದ ಬಗ್ಗೆ ಮಾಹಿತಿ ಪಡೆದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಗರಸಭಾ ಸದಸ್ಯರು ಚಳ್ಳಕೆರೆ ಆಗಮಿಸಿದ ಇವರನ್ನು ನೆಹರೂ ಸರ್ಕಲ್‍ನಲ್ಲಿ ಸ್ವಾಗತಿಸಿ ಸಚಿವ ಸ್ಥಾನ ಅಲಂಕರಿಸಿದ್ದಕ್ಕೆ ಶುಭಾಶಯಕೋರಿದರು.
ನಂತರ ಚಿತ್ರದುರ್ಗ ರಸ್ತೆಯ ಹಾಪ್‍ಕಾಮ್ಸ್ ಹಣ್ಣಿನ ಮಳಿಗೆಗೆ ಭೇಟಿ ನೀಡಿ ನಗರಸಭಾ ಸದಸ್ಯರಾದ ಟಿ.ವೀರಭದ್ರಪ್ಪ ಎಂ.ಜೆ.ರಾಘವೇಂದ್ರ, ಚಳ್ಳಕೆರೆಯಪ್ಪ ಮುಂತಾದವರೊಂದಿಗೆ ಪಕ್ಷದ ಸಂಘಟನೆಯ ಬಗ್ಗೆ ಮತ್ತು ಸದಸ್ಯತ್ವ ನೊಂದಾವಣೆಯ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಯುವ ಮುಖಂಡ ಕೃಷ್ಣ, ಬಂಗ್ಲೆ ಶ್ರೀನಿವಾಸ್, ಎಂ.ಜೆ.ಕುಮಾರ್, ಟಿ.ಜಯಣ್ಣ, ಭದ್ರಿ, ಚಂದ್ರು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








