ಚಿತ್ರದುರ್ಗ
ಪ್ರಸ್ತುತ ದಿನಗಳಲ್ಲಿ ನೋಡುಗರ ಸಂಖ್ಯೆ ಹೆಚ್ಚು ಆಗುತ್ತಿದೆ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಓ.ವಿ.ಮೋಬೈಲ್‍ನಲ್ಲಿ ಜನ ಆಸಕ್ತರಾಗಿರುವುದರಿಂದ ವ್ಯಕ್ತಿಯ ಕ್ರೀಯಶೀಲತೆ ಕ್ಷೀಣಿಸಿ ಕಲ್ಪನಾ ಶಕ್ತಿ ಕುಂದುತ್ತಿದೆ ಎಂದು ಮದಕರಿಪುರ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸುಷ್ಮರಾಣಿ ಹೇಳಿದರು
ಚಿತ್ರದುರ್ಗ ತಾಲ್ಲುಕಿನ ಮದಕರಿಪುರದಲ್ಲಿ ತಾಲ್ಲೂಕು ಕನ್ನಡ ಸಾಹಿತು ಪರಿಷತ್ತು ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮ ನಡೆ ಗ್ರಂಥಾಲಯದೆಡೆಗೆ ಎಂಬ ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಇಲೆಕ್ಟ್ರಾನಿಕ್ ಮಾಧ್ಯಮಗಳು ಸೃಷ್ಟಿಸುವ ಪೌರಾಣಿಕ ಪಾತ್ರಗಳುಮ ವಸ್ತುಗಳಸನ್ನಿವೇಶಗಳೇ ಸರಿ ಎಂದು ಬಂಬಿಕೊಂಡಿದ್ದೇವೆ. ಶ್ರೇಷ್ಠ ಪಸ್ತಕಗಳನ್ನು ಓದುವುರಿದಂದ ನಮ್ಮದೆ ಆದ ಸ್ವಂತಿಕೆ, ಕಲ್ಪನಾ ಶಕ್ತಿ ಬೆಳೆದು ವೈಚಾರಿಕವಾಗಿ ಚಿಮತನೆ ಮಾಡುವ ಶಕ್ತಿ ಬೆಳೆಯುತ್ತದೆ. ಆದ್ದರಿಂದ ಹಿರಿಯರು ಗ್ರಂಥಾಲಯಕ್ಕೆ ಬಂದು ಪುಸ್ತಕ ಓದಬೇಕು ಎಂದು ಕರೆ ನೀಡಿದರು
ಪುಸ್ತಕ ಓದಿ ದೊಡ್ಡವರೆನಿಸಿಕೊಂಡವರು ಅನೇಕರಿದ್ದಾರೆ. ಆದರೆ ಟಿ.ವಿ. ಮತ್ತು ಮೊಬೈಲ್ ನೋಡಿ ಅಭಿವೃದ್ದಿ ಹೊಂದಿದ ಉದಾಹರಣೆಗಳಿಲ್ಲ. ಮಕ್ಕಳು ಸೇರಿದಂತೆ ಎಲ್ಲರೂ ಸಹ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು
ಗ್ರಾಮ ಪಂಚಾಯಿತಿಯಿಂದ ಈ ಹಿಂದೆ ಶೇಕಡಾ 7ರಷ್ಟು ಹಣವನ್ನು ಗ್ರಂಥಾಲಯಕ್ಕೆ ಕೊಡುತ್ತಿದ್ದವೆ. ಆದೆ ಈಗ ಗ್ರಂಥಾಲಯ ನಡೆಸುವ ಹೊಣೆ ಗ್ರಾ ಪಂಚಾಯಿತಿಗೆ ಇರುವುದರಿಂದ ಹಣದ ಸದುಪಯೋಗ ಮಾಡಿಕೊಳ್ಳಬಹುದು. ಈಗ ಡಿಜಿಟಲ್ ಗ್ರಂಥಾಲಯ ಮಾಡಲು ಅವಕಾಶ ಇದೆ ಎಂದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಪುಸ್ತಕಗಳು ಶ್ರೇಷ್ಠ ಗೆಳೆಯರು. ಪುಸ್ತಕಗಳು ನಮಗೆಂದೂ ಕೇಡು ಬಯಸುವುದಿಲ್ಲ. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಬೇಕು ಎಂದು ಸಲಹೆ ನೀಡಿದರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡಿ, ಮನೆಯಲ್ಲಿ ಹಿರಿಯರು ಪುಸ್ತಕ ಓದಿದರೆ ಕಿರಿಯರೂ ಓದುತ್ತಾರೆ. ಹಿರಿಯರು ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಕೊಂಡುಕೊಟ್ಟು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯ ನಿರ್ಮಿಲು ಪ್ರೋತ್ಸಾಹಿಸಬೇಕು ಎಂದರು
ಶಾಲಾ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ನಮ್ಮ ವ್ಯವಸ್ಥೆ ಪೂರಕವಾಗಬೇಕು. ಶಾಲಾ ವ್ಯವಸ್ಥೆ ಅವರಿಗೆ ಗೈಡ್, ಪಾಸಿಂಗ್ ಪ್ಯಾಕೇಜ್ ಕೊಟ್ಟು ಪಠ್ಯಪುಸ್ತಕ ಓದಲು ಬಿಡುತ್ತಿಲ್ಲ ಆದ್ದರಿಂದ ಮಕ್ಕಳು ಕೀಲಿಗೊಂಎಯಂತಾಗಿದ್ದಾರೆ. ಮಕ್ಕಳು ನಿತ್ಯವೂ ಗ್ರಂಥಾಲಯಕ್ಕೆ ಬಂದು ಓದುವ ಸಂಸ್ಕøತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು
ಜಾತದಲ್ಲಿ ಮದಕರಿಪುರ ಗ್ರಾಮದ ಭಾರತೀಯ ಪ್ರೌಡಶಾಲೆಯ ಮುಖ್ಯಶಿಕ್ಷಕ ಜಯಪ್ರಕಾಶ್, ಹೊಸ ಲಂಬಾಣಿ ಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ಆರ್.ಸುಮಂಗಳ, ಸಿ.ಆರ್.ಸೀತಾಲಕ್ಷ್ಮೀ, ಲಕ್ಷ್ಮಣ, ಸಾಹಿತ್ಯ ಪರಿಷತ್‍ನ ಗೋವಿಂದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ನರಸಿಂಹಮೂತಿ, ಮೂರ್ತಪ್ಪ, ರಮಗಸ್ವಾಮಿ, ಮರಿಸ್ವಾಮಿ, ಮೂರ್ತಿನಾಯಕ್,ಇನ್ನಿತರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
