ಬೆಂಗಳೂರು
ಕೇಂದ್ರ ಸರ್ಕಾರದಿಂದ ಪೂರ್ಣ ಪ್ರಮಾಣದ ಮುಂಗಡ ಪತ್ರ ಮಂಡನೆಯ ಅವಶ್ಯಕತೆ ಇರಲಿಲ್ಲ. ಬಜೆಟ್ ಚುನಾವಣಾ ತಂತ್ರವಲ್ಲ. ಇದೊಂದು ಅತಂತ್ರ ಬಜೆಟ್ ಎಂದು ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಟೀಕೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮಧ್ಯಂತರ ಮುಂಗಡಪತ್ರ ಕೇವಲ ಕಾಗದಲ್ಲಿ ಇರುವ ಮುಂಗಡಪತ್ರ ಮಾತ್ರ. ಕಳೆದ ಐದು ವರ್ಷದಿಂದ ಕೇಂದ್ರ ಸರ್ಕಾರ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಚುನಾವಣೆ ಘೋಷಣೆಯಾಗಲೂ ಇನ್ನು 20 ದಿವಸಗಳು ಉಳಿದಿಲ್ಲ. 2014 ರಲ್ಲಿ ಬಿಜೆಪಿ ಘೋಷಿಸಿದ ಯೋಜನೆಗಳಲ್ಲಿ ಶೇ.1 ರಷ್ಟೂ ಕಾರ್ಯ ಪೂರ್ಣಗೊಂಡಿಲ್ಲ. ದೇಶದ ಯುವಕರಿಗೆ ಇದು ಸಂಪೂರ್ಣ ನಿರಾಶದಾಯಕ ಬಜೆಟ್ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ