ಮುಖ್ಯೋಪಾಧ್ಯಾಯರನ್ನು ಅಪಹರಿಸಿದ ದುಷ್ಕರ್ಮಿಗಳು…!!!

ಬೆಂಗಳೂರು

      ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯ ಭದ್ರಯ್ಯ ಅವರನ್ನು ಅಪಹರಿಸಿರುವ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದ್ದು ಅವರ ಬಂಧನಕ್ಕೆ ವಿಜಯನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.ಖಾಸಗಿ ಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೋವಿಂದರಾಜ ನಗರದ ಭದ್ರಯ್ಯ ಅವರು ಕಳೆದ ಫೆ.19 ರಂದು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದಾಗ ವಿಜಯನಗರದ ನ್ಯೂ ಪಬ್ಲಿಕ್ ರಸ್ತೆ ಬಳಿ ನೀಲಿ ಬಣ್ಣದ ಓಮ್ನಿಕಾರ್‍ನಲ್ಲಿ ಬಂದ ನಾಲ್ವರು ಅಪಹರಣಕಾರರು ಅಪಹರಿಸಿ ಪರಾರಿಯಾಗಿದ್ದು ಅವರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಡಿಸಿಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.

       ಅಪಹರಣ ನಡೆದು ಮೂರು ದಿನವಾದರೂ ಭದ್ರಯ್ಯ ಪತ್ತೆಯಾಗಿಲ್ಲ. ಈ ಸಂಬಂಧ ಭದ್ರಯ್ಯ ಮಗ ಕಿರಣ್ ಕುಮಾರ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸಮೀಪದಲ್ಲಿ ಸಿಸಿಟಿವಿಯಲ್ಲಿ ಅಪಹರಣಕಾರರ ಮುಖಚಹರೆ ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link